ಡಾ. ರಾಜ್ ಕುಮಾರ್ 92ನೇ ಜಯಂತಿ: ಮಕ್ಕಳಿಂದ ರಾಜ್ ಸ್ಮಾರಕಕ್ಕೆ ಪೂಜೆ, ಮನದುಂಬಿ ಹಾಡಿದ ಪುನೀತ್

ಗಾನ ಗಂಧರ್ವ, ಪದ್ಮ ಭೂಷಣ ವರನಟ ಡಾ ರಾಜ್ ಕುಮಾರ್ ಅವರ 92ನೇ ಜಯಂತಿ ಇಂದು. ಬೆಂಗಳೂರಿನಲ್ಲಿರುವ ಡಾ ರಾಜ್ ಸ್ಮಾರಕಕ್ಕೆ ಇಂದು ಅವರ ಮಕ್ಕಳು, ಕುಟುಂಬಸ್ಥರು ಹೋಗಿ ಕೊರೋನಾ ನಿಯಮದಡಿ ಪೂಜೆ ಸಲ್ಲಿಸಿ ಬಂದಿದ್ದಾರೆ.
ಡಾ ರಾಜ್ ಕುಮಾರ್ (ಸಂಗ್ರಹ ಚಿತ್ರ)
ಡಾ ರಾಜ್ ಕುಮಾರ್ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಗಾನ ಗಂಧರ್ವ, ಪದ್ಮ ಭೂಷಣ ವರನಟ ಡಾ ರಾಜ್ ಕುಮಾರ್ ಅವರ 92ನೇ ಜಯಂತಿ ಇಂದು. ಆಗಿನ ಮದ್ರಾಸ್ ಪ್ರಾಂತ್ಯದ ಈಗಿನ ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿರುವ ತಲವಾಡಿ ತಾಲ್ಲೂಕಿನ ಗಾಜನೂರಿನಲ್ಲಿ 1929ರ ಏಪ್ರಿಲ್ 24ರಂದು ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ದಂಪತಿಯ ಮಗನಾಗಿ ಮುತ್ತುರಾಜ್ ಜನಿಸಿದರು. ಕನ್ನಡ ಸಿನೆಮಾರಂಗದ ಧ್ರುವರತ್ನವಾಗಿ ಡಾ.ರಾಜ್ ಕುಮಾರ್ ಬೆಳೆದದ್ದು ಈಗ ಇತಿಹಾಸ.

ಅವರನ್ನು ಗೊತ್ತಿಲ್ಲದ ಕನ್ನಡಿಗರು ಬಹುಶಃ ಇರಲಿಕ್ಕಿಲ್ಲ. ಇಂದು ಅವರ ಹುಟ್ಟಿದ ದಿನ. ಸಹಜವಾಗಿ ಕನ್ನಡಿಗರು ಅವರನ್ನು ಸ್ಮರಿಸುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಡಾ ರಾಜ್ ಸ್ಮಾರಕಕ್ಕೆ ಇಂದು ಅವರ ಮಕ್ಕಳು, ಕುಟುಂಬಸ್ಥರು ಹೋಗಿ ಕೊರೋನಾ ನಿಯಮದಡಿ ಪೂಜೆ ಸಲ್ಲಿಸಿ ಬಂದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ಅಪ್ಪಾಜಿ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುತ್ತಿದ್ದರು. ದಯವಿಟ್ಟು ಎಲ್ಲರೂ ಕೋವಿಡ್ ನಿಯಮ ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳಿದ್ದಾರೆ. ಅಪ್ಪಾಜಿ ಸದಾ ಅಭಿಮಾನಿಗಳ ಮನಸ್ಸಿನಲ್ಲಿ ಇರುತ್ತಾರೆ, ಸ್ಮಾರಕ ಬಳಿ ಬಂದು ಪೂಜೆ ಮಾಡಲಾಗಲಿಲ್ಲವಲ್ಲಾ ಎಂದು ಯಾರೂ ಬೇಸರಪಟ್ಟುಕೊಳ್ಳಬೇಡಿ ಎಂದು ಹೇಳಿದರು.

ಇನ್ನು ತಮ್ಮ ಅಪ್ಪಾಜಿಯ ಹುಟ್ಟುಹಬ್ಬ ಪ್ರಯುಕ್ತ ಪುಟ್ಟ ಕಾಣಿಕೆಯೆಂದು ಹಾಡಿನ ಮೂಲಕ ಸ್ಮರಿಸಿದ್ದಾರೆ. ತಮ್ಮ ತಂದೆಯ ಬಗ್ಗೆ ಮನದುಂಬಿ ಹಾಡಿದ್ದಾರೆ ಪುನೀತ್ ರಾಜ್ ಕುಮಾರ್.

ಹಲವು ಗಣ್ಯರು ಇಂದು ಡಾ ರಾಜ್ ಕುಮಾರ್ ಅವರನ್ನು ಸ್ಮರಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com