ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾದ ಬಹುತೇಕ ಪ್ರಮುಖ ಸನ್ನಿವೇಶಗಳು ಈಗಾಗಲೇ ಚಿತ್ರೀಕರಣ ಮುಗಿಸಿದೆ.
ಚಿತ್ರತಂಡ ಕಾಶ್ಮೀರದಲ್ಲಿ ಮತ್ತೆ ಸಿನಿಮಾ ಶೂಟಿಂಗ್ ನಡೆಸಿತ್ತು. ಅದರ ಫೋಟೋಗಳನ್ನು ನಿರ್ದೇಶಕ ಚೇತನ್ ಕುಮಾರ್ ಹಂಚಿಕೊಂಡಿದ್ದರು. ಇದೇ ಶೂಟಿಂಗ್ ಸಂಬಂಧ ಸ್ಟಂಟ್ ಮಾಸ್ಟರ್ ರವಿವರ್ಮಾ ನೈಸ್ ರೋಡ್ ನಲ್ಲಿ ಚೇಸಿಂಗ್ ಮಾಡುವ ದೃಶ್ಯಗಳ ಶೂಟಿಂಗ್ ಫೋಟೋವನ್ನು ಹಂಚಿಕೊಂಡಿದ್ದಾರೆ.
ಈ ನಿರ್ದಿಷ್ಟ ಆಕ್ಷನ್ ಬ್ಲಾಕ್‌ಗಾಗಿ, ತಂಡವು ಮುಂಬಯಿಯಿಂದ ಹತ್ತು ವೃತ್ತಿಪರ ಮೋಟಾರ್ ಸ್ಪೋರ್ಟ್ಸ್ ಚಾಲಕರನ್ನು ನೇಮಿಸಿಕೊಂಡಿದೆ. ಶೇ.60 ರಷ್ಟು ಜೇಮ್ಸ್ ಸಿನಿಮಾ ಶೂಟಿಂಗ್ ಮುಗಿದಿದ್ದು, ಕೋವಿಡ್ ಕಾರಣದಿಂದ ಚಿತ್ರೀಕರಣ ಸ್ಥಗಿತಗೊಳಿಸಿದೆ.
ಕಿಶೋರ್ ಪತ್ತಿಕೊಂಡ ನಿರ್ಮಿಸುತ್ತಿರುವ ಸಿನಿಮಾದಲ್ಲಿ ಪುನೀತ್ ಗೆ ಪ್ರಿಯಾ ಆನಂದ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಜೇಮ್ಸ್ ನಲ್ಲಿ ತೆಲುಗು ನಟ ಮೆಕಾ ಶ್ರೀಕಾಂತ್, ರಂಗಾಯಣ ರಘು ಜೊತೆಗೆ ಪ್ರಮುಖ ಪಾತ್ರದಲ್ಲಿದ್ದಾರೆ ಮತ್ತು ಮುಖೇಶ್ ರಿಷಿ ಪೋಷಕ ಪಾತ್ರಗಳಲ್ಲಿದ್ದಾರೆ.
Advertisement