ಆಗಸ್ಟ್ 20 ಕ್ಕೆ ಅರವಿಂದ್ ಕೌಶಿಕ್ ನಿರ್ದೇಶನದ 'ಶಾರ್ದೂಲ' ರಿಲೀಸ್

ವರಮಹಾಲಕ್ಷ್ಮೀ ಹಬ್ಬದ ವೇಳೆಗೆ ಕೆಲವು ಚಿತ್ರಗಳು ತೆರೆ‌‌ ಕಾಣಲಿದೆ. ಆ ಪೈಕಿ ಹಾರರ್ ಸಸ್ಪೆನ್ಸ್ ಕಥೆ ಆಧಾರಿತ “ಶಾರ್ದೂಲ” ಚಿತ್ರವೂ ಒಂದು.‌ ಇದೊಂದು ಉತ್ತಮ ಕಥಾಹಂದರ ಹೊಂದಿರುವ ಚಿತ್ರ. 
ಶಾರ್ದೂಲ ಕಲಾವಿದರು
ಶಾರ್ದೂಲ ಕಲಾವಿದರು
Updated on

ವರಮಹಾಲಕ್ಷ್ಮೀ ಹಬ್ಬದ ವೇಳೆಗೆ ಕೆಲವು ಚಿತ್ರಗಳು ತೆರೆ‌‌ ಕಾಣಲಿದೆ. ಆ ಪೈಕಿ ಹಾರರ್ ಸಸ್ಪೆನ್ಸ್ ಕಥೆ ಆಧಾರಿತ “ಶಾರ್ದೂಲ” ಚಿತ್ರವೂ ಒಂದು.‌ ಇದೊಂದು ಉತ್ತಮ ಕಥಾಹಂದರ ಹೊಂದಿರುವ ಚಿತ್ರ. 

ಸಾಮಾನ್ಯವಾಗಿ ಶೂಟಿಂಗ್ ಸಮಯದಲ್ಲಿ ಸಣ್ಣ ಪುಟ್ಟ ಅವಘಡಗಳು ಸಂಭವಿಸಿದಾಗ ಅಷ್ಟೊಂದು ಯಾರೂ ಅಷ್ಟೊಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಹಾರರ್ ಸಿನಿಮಾಗಳ ಚಿತ್ರೀಕರಣದ ಸಮಯದಲ್ಲಿ ಏನಾದರೂ ಸಣ್ಣ ಅಪಘಾತ ಸಂಭವಿಸಿದರೂ ಏನೋ ಹೆಚ್ಚು ಕಡಿಮೆ ಆಗಿರಬೇಕು. ಇದು ದುಷ್ಟ ಶಕ್ತಿಯ ಕೈವಾಡವೇ ಇರಬಹುದು, ಅದೂ ಇದೂ ಅಂತ ನೂರೆಂಟು ಆಲೋಚನೆಗಳು ಬರತೊಡಗುತ್ತವೆ. 

ಭೈರವ ಸಿನಿಮಾಸ್ ಮತ್ತು ಸಿ ವಿ ಆರ್ ಸಿನಿಮಾಸ್ ಲಾಂಛನದಲ್ಲಿ ರೋಹಿತ್ ಶಾಂತಪ್ಪ ಹಾಗೂ ಕಲ್ಯಾಣ್ ಸಿ ನಿರ್ಮಿಸಿರುವ ಈ ಚಿತ್ರವನ್ನು ಅರವಿಂದ್ ಕೌಶಿಕ್ ನಿರ್ದೇಶಿಸಿದ್ದಾರೆ.ಈ ಹಿಂದೆ ನಮ‌್ ಏರಿಯಲ್ಲೊಂದು‌ ದಿನ, ತುಘಲಕ್ ಹಾಗೂ ಹುಲಿರಾಯ ಚಿತ್ರಗಳನ್ನು ಅರವಿಂದ್ ಕೌಶಿಕ್ ನಿರ್ದೇಶಿಸಿದ್ದರು.

ವೈ.ಜಿ.ಆರ್ ಮನು ಛಾಯಾಗ್ರಹಣ, ಸತೀಶ್ ಬಾಬು ಸಂಗೀತ ನಿರ್ದೇಶನ, ಶಿವರಾಜ್ ಮೇಹು ಸಂಕಲನ ಹಾಗು ಮಾಸ್ ಮಾದ, ವೈಲೆಂಟ್ ವೇಲು ಮತ್ತು ಅಲ್ಟಿಮೇಟ್ ಶಿವು ಅವರ‌ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.. ಪಿ.ಯು.ಸಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಚೇತನ್ ಚಂದ್ರ, ನಿರ್ದೇಶಕ, ನಟ ರವಿತೇಜ, ಕೃತಿಕ ರವೀಂದ್ರ, ಐಶ್ವರ್ಯ ಪ್ರಸಾದ್, ಕಲ್ಯಾಣ್, ಹೃಷಿಕೇಶ್, ಮಹೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com