ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಗೆ ಎಪಿ ಅರ್ಜುನ್ ಡೈರೆಕ್ಷನ್! ಕನ್ನಡದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ
ಅದ್ಧೂರಿ ಸಿನಿಮಾ ಹೀರೋ ಮತ್ತು ಡೈರೆಕ್ಟರ್ ಮತ್ತೆ ಒಂದಾಗಿದ್ದು, ಮಾರ್ಟಿನ್ ಶೀರ್ಷಿಕೆಯ ಸಿನಿಮಾಗೆ ಎಪಿ ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಐದನೇ ಚಿತ್ರ ಮಾರ್ಟಿನ್ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಹಾಗೇ, 'ಮಾರ್ಟಿನ್' ಫಸ್ಟ್ ಲುಕ್ ಟೀಸರ್ ಕೂಡ ಬಿಡುಗಡೆಯಾಗಿದೆ.
ಕಾಲೇಜ್ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಕಥೆ ಹೊಂದಿರುವ ಸಿನಿಮಾ 'ಮಾರ್ಟಿನ್'. ಇದು ಔಟ್ ಅಂಡ್ ಔಟ್ ಕಮರ್ಶಿಯಲ್ ಆಕ್ಷನ್ ಥ್ರಿಲ್ಲರ್ ಸಿನಿಮಾ. ಈ ಚಿತ್ರದಲ್ಲಿ ನವಿರಾದ ಪ್ರೇಮಕಥೆಯೂ ಇರಲಿದೆ. ಲವ್ ಸ್ಟೋರಿ ಹಾಗೂ ಥ್ರಿಲ್ಲರ್ ಅಂಶಗಳನ್ನು ಸೇರಿಸಿ ಚಿತ್ರಕಥೆಯನ್ನು ಸಿದ್ಧಪಡಿಸಲಾಗಿದೆ. ಚಿತ್ರದ ಟೈಟಲ್ ಮಾರ್ಟಿನ್, ಆದರೆ ಸಿನಿಮಾದಲ್ಲಿ ನಾನು ಮಾರ್ಟಿನ್ ಅಲ್ಲ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ಎ.ಪಿ.ಅರ್ಜುನ್ ಜೊತೆಗೆ ಒಂಬತ್ತು ವರ್ಷಗಳ ನಂತರ ಕೆಲಸ ಮಾಡುತ್ತಿದ್ದೇನೆ. ಜನರಿಗೆ ತುಂಬಾ ನಿರೀಕ್ಷೆ ಇರುತ್ತದೆ ಅಂತ ನನಗೆ ಗೊತ್ತು. ಹೀಗಾಗಿ ನಮ್ಮ ಮೇಲಿನ ಜವಾಬ್ದಾರಿ ಹೆಚ್ಚಾಗಿದೆ. ಅದರಲ್ಲೂ, ಎ.ಪಿ.ಅರ್ಜುನ್ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ಚಿತ್ರದಲ್ಲಿ ಸಸ್ಪೆನ್ಸ್-ಥ್ರಿಲ್ಲರ್ ಅಂಶಗಳಿವೆ. 'ಅದ್ಧೂರಿ'ಗಿಂತಲೂ ಡಿಫರೆಂಟ್ ಆಗಿರಲಿದೆ. ಇದರಲ್ಲಿ ಹೆಚ್ಚು ಡೈಲಾಗ್ಸ್ ಇರುವುದಿಲ್ಲ'' ಎಂದು ಧ್ರುವ ಸರ್ಜಾ ತಿಳಿಸಿದ್ದಾರೆ.
ಮಾರ್ಟಿನ್' ಚಿತ್ರ ಈಗಲೇ ಸೆಟ್ಟೇರಲಿದ್ದು, ಡಿಸೆಂಬರ್ 20 ರೊಳಗೆ ಶೂಟಿಂಗ್ ಕಂಪ್ಲೀಟ್ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. ನಾಲ್ಕು ತಿಂಗಳೊಳಗೆ ಬ್ಯಾಕ್-ಟು-ಬ್ಯಾಕ್ ಶೆಡ್ಯೂಲ್‌ಗಳಲ್ಲಿ 'ಮಾರ್ಟಿನ್' ಶೂಟಿಂಗ್ ನಡೆಯಲಿದೆ. 'ಮಾರ್ಟಿನ್' ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ತೆರೆಗೆ ಬರಲಿದೆ.
ಚಿತ್ರವನ್ನು ಉದಯ್ ಕೆ ಮೆಹ್ತಾ ನಿರ್ಮಿಸಿದ್ದಾರೆ ಮತ್ತು ಇದರ ಚಿತ್ರಕಥೆಯನ್ನು ಅರುಣ್ ಬಾಲಾಜಿ ಮತ್ತು ಸ್ವಾಮೀಜಿ ಬರೆದಿದ್ದಾರೆ. ಚಿತ್ರದ ಛಾಯಾಗ್ರಹಣವನ್ನು ಸತ್ಯ ಹೆಗ್ಡೆ ನಿರ್ವಹಿಸುತ್ತಿದ್ದು, ಮಣಿ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ. ತಯಾರಕರು ಈಗಾಗಲೇ ಚಿತ್ರದ ಆಡಿಯೋ ಹಕ್ಕುಗಳನ್ನು ಲಹರಿ ಸಂಗೀತಕ್ಕೆ ಮಾರಾಟ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ