ಚಿರಂಜೀವಿ 66ನೇ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ: ಭೋಲಾ ಶಂಕರ್ ನಲ್ಲಿ ಮೆಗಾಸ್ಟಾರ್!
ಹೈದರಾಬಾದ್: ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಭಾನುವಾರ 66ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಚಿರು ಹುಟ್ಟುಹಬ್ಬದಂದು ಹೊಸ ಸಿನಿಮಾ ಘೋಷಣೆಯಾಗಿದ್ದು, ಈ ವಿಷಯವನ್ನು ಮತ್ತೊಬ್ಬ ಸ್ಟಾರ್ ನಟ ಮಹೇಶ್ ಬಾಬು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.
ಭೋಲಶಂಕರ್ ಸಿನಿಮಾದಲ್ಲಿ ಚಿರಂಜೀವಿ ನಟಿಸುತ್ತಿದ್ದು, ನನ್ನ ಸ್ನೇಹಿತರಾದ ಮೆಹರ್ ರಮೇಶ್ ಸಿನಿಮಾ ನಿರ್ದೇಶಿಸುತ್ತಿದ್ದು ನನ್ನ ನೆಚ್ಚಿನ ನಿರ್ಮಾಪಕ ಅನಿಲ್ ಸುಂಕಾರ ನಿರ್ಮಾಣ ಮಾಡುತ್ತಿದ್ದಾರೆ ಎಂದು ಮಹೇಶ್ ಬಾಬು ಟ್ವೀಟ್ ಮಾಡಿದ್ದಾರೆ.
ಚಿರಂಜೀವಿ ಅವರಿಗೆ ದೇವರು ಆರೋಗ್ಯ ಆಯಸ್ಸು ಮತ್ತು ಯಶಸ್ಸು ಕರುಣಿಸಲಿ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಚಿರಂಜೀವಿ ಅವರ ತೆಲುಗು ಚಿತ್ರಕ್ಕೆ ತಾತ್ಕಾಲಿಕವಾಗಿ 'ಚಿರು 153' ಎಂದು ಹೆಸರಿಡಲಾಗಿದೆ ಎಂಬ ಸುದ್ದಿಯ ಒಂದು ದಿನದ ನಂತರ ಪ್ರಕಟಣೆ ಬಂದಿತು. ಮೆಗಾಸ್ಟಾರ್‌ನ 153 ನೇ ಚಿತ್ರವು ಮೋಹನ್ ರಾಜ ನಿರ್ದೇಶನದ ಚಿತ್ರ ಇದಾಗಿದೆ. ಇದು ಮೋಹನ್ ಲಾಲ್ ಅಭಿನಯದ 2019 ರ ಮಲಯಾಳಂ ಚಿತ್ರ 'ಲೂಸಿಫರ್' ನ ತೆಲುಗು ರಿಮೇಕ್ ಇದಾಗಿದೆ.
Happy birthday @KChiruTweets garu
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ