ಯೋಗೇಶ್
ಯೋಗೇಶ್

ಧನಂಜಯ್ ನಟನೆಯ 'ಹೆಡ್ ಬುಷ್' ಸಿನಿಮಾ ತಂಡಕ್ಕೆ 'ಸಿದ್ಲಿಂಗು' ಖ್ಯಾತಿಯ ಯೋಗಿ ಸೇರ್ಪಡೆ!

ಧನಂಜಯ್ ನಾಯಕನಾಗಿ ನಟಿಸಿರುವ ಹೆಡ್ ಬುಷ್‌ ನಿರ್ಮಾಪಕರು ಈ ಸಿನಿಮಾಗೆ ಆಸಕ್ತಿದಾಯಕ ತಾರಾಗಣವನ್ನು ಒಟ್ಟುಗೂಡಿಸುವ ಪ್ರಕ್ರಿಯೆಯಲ್ಲಿದ್ದಾರೆ. 
Published on

ಧನಂಜಯ್ ನಾಯಕನಾಗಿ ನಟಿಸಿರುವ ಹೆಡ್ ಬುಷ್‌ ನಿರ್ಮಾಪಕರು ಈ ಸಿನಿಮಾಗೆ ಆಸಕ್ತಿದಾಯಕ ತಾರಾಗಣವನ್ನು ಒಟ್ಟುಗೂಡಿಸುವ ಪ್ರಕ್ರಿಯೆಯಲ್ಲಿದ್ದಾರೆ. 

ಪಾಯಲ್ ರಜಪೂತ್ ಕನ್ನಡದಲ್ಲಿ ಮೊತ್ತ ಮೊದಲ ಬಾರಿಗೆ ನಾಯಕಿಯಾಗಿ ನಟಿಸುತ್ತಿದ್ದು, ಸಿದ್ಲಿಂಗು-ಖ್ಯಾತಿಯ ಯೋಗೇಶ್ ಅಥವಾ ಯೋಗಿ ಹೆಡ್ ಬುಷ್ ಸಿನಿಮಾ ತಂಡಕ್ಕೆ ಸೇರಿಕೊಂಡಿದ್ದಾರೆ.

ಲಂಕೆ ಸಿನಿಮಾ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಸ್ವತಃ ಯೋಗೇಶ್ ಅವರೆ ಈ ವಿಷಯವನ್ನು ದೃಢಪಡಿಸಿದ್ದಾರೆ. ದುನಿಯಾ ಸಿನಿಮಾದಲ್ಲಿ ವಿಲ್ಲನ್ ಪಾತ್ರದ ಮೂಲಕ ಬೆಳಕಿಗೆ ಬಂದರು. ಹೆಡ್ ಬುಷ್ ಸಿನಿಮಾದಲ್ಲಿ ಬೆಂಗಳೂರು ಭೂಗತ ಜಗತ್ತಿನ ಡಾನ್ ಎಂಪಿ ಜಯರಾಜ್ ಪಾತ್ರವನ್ನು ತೆರೆ ಮೇಲೆ ತರಲಾಗುತ್ತಿದೆ, ಸಿನಿಮಾದಲ್ಲಿ ಯೋಗಿ ನಟಿಸುತ್ತಿರುವುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಹೆಡ್ ಬುಷ್ ಸಿನಿಮಾದಲ್ಲಿ ಯೋಗಿ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಹೆಚ್ಚಿನ ಮಾಹಿತಿಯನ್ನು ಸಿನಿಮಾ ತಂಡ ಬಹಿರಂಗ ಪಡಿಸಿಲ್ಲ, ಅಗ್ನಿ ಶ್ರೀಧರ್ ಬರೆದಿರುವ ಕಥೆಯ ಶೂಟಿಂಗ್ ನಡೆಯುತ್ತಿದ್ದು, ಶೀಘ್ರದಲ್ಲೇ ಯೋಗಿ ಸೆಟ್ ಗೆ ಬರಲಿದ್ದಾರೆ. ಇದು ಯೋಗಿಯವರ ಮೊದಲ ಪ್ಯಾನ್ ಇಂಡಿಯನ್ ಚಿತ್ರವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com