'ಪ್ರಾರಂಭ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೀರ್ತಿ ಕಲಕೇರಿ ತೆಲುಗು ಸಿನಿಮಾ ರಂಗದಲ್ಲಿ ಅದೃಷ್ಟ ಪರೀಕ್ಷಿಸಲು ಹೊರಟಿದ್ದಾರೆ.
ತೆಲುಗಿನಲ್ಲ ಇದೊಂದು ಉತ್ತಮ ಆರಂಭವಾಗಿದೆ. ತನ್ನ ಪ್ರತಿಭೆಯನ್ನು ಗುರುತಿಸಿರುವ ನಿರ್ದೇಶಕರು ನನಗೆ ಅವಕಾಶ ನೀಡಿದ್ದಾರೆ ಎಂದು ಕೀರ್ತಿ ಹೇಳಿದ್ದಾರೆ. ಇದೊಂದು ಉತ್ತಮ ಕಥೆ, ತಮಿಳಿನಿಂದ ತೆಲುಗಿಗೆ ರಿಮೇಕ್ ಆಗುತ್ತಿರುವ ಸಿನಿಮಾ ಇದಾಗಿದೆ ಎಂದು ಕೀರ್ತಿ ಕಲಕೇರಿ ಹೇಳಿದ್ದಾರೆ.
ಸೆಪ್ಚಂಬರ್ ತಿಂಗಳಲ್ಲಿ ಸಿನಿಮಾ ಟೈಟಲ್ ಮತ್ತು ಪ್ರಾಜೆಕ್ಟ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು. ಮನೋರಂಜನ್ ನಟನೆಯ ಪ್ರಾರಂಭ ಸಿನಿಮಾ ಮೂಲಕ ಕನ್ನಡದಲ್ಲಿ ಸಿನಿ ಜರ್ನಿ ಆರಂಭಿಸಿದರು, ಆದರೆ ಕೊರೋನಾ ಕಾರಣದಿಂದಾಗಿ ಇದುವರೆಗೂ ಸಿನಿಮಾ ರಿಲೀಸ್ ಆಗಿಲ್ಲ.
ನಟ ಮತ್ತೆ ಸೆಟ್‌ಗೆ ಬಂದಿದ್ದಕ್ಕೆ ಸಂತೋಷವಾಗಿದ್ದರೂ, ಸಾಂಕ್ರಾಮಿಕ ರೋಗದಿಂದಾಗಿ ಮನರಂಜನಾ ಉದ್ಯಮದ ಸ್ಥಿತಿ ಸುಧಾರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದೇನೆ, ತಂಡವು ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆ, ಆದರೆ ಲಾಕ್‌ಡೌನ್‌ನಿಂದಾಗಿ ಎಲ್ಲವೂ 'ಸ್ಟಕ್' ಆಗಿದೆ ಎಂದು ಕೀರ್ತಿ ಹೇಳುತ್ತಾರೆ.
ಏತನ್ಮಧ್ಯೆ, ಕೀರ್ತಿ ಇತ್ತೀಚೆಗೆ ತನ್ನ ಎರಡನೇ ಕನ್ನಡ ಚಿತ್ರ ಓಹ್ ಮೈ ಲವ್ ಶೂಟಿಂಗ್ ಪುನರಾರಂಭಿಸಿದರು, ಇದರಲ್ಲಿ ಶಶಿಕುಮಾರ್ ಅವರ ಮಗ ಅಕ್ಷಿತ್ ಜೊತೆ ನಟಿಸಲಿದ್ದಾರೆ. ಚಿತ್ರ ತಂಡವು ಆಗಸ್ಟ್ 30 ರಂದು ಮಂಗಳೂರಿನಲ್ಲಿ ಓಹ್ ಮೈ ಲವ್ ನ ನಾಲ್ಕನೇ ಶೆಡ್ಯೂಲ್ ಆರಂಭಿಸಲಿದೆ. ಸೆಪ್ಟಂಬರ್ ನಲ್ಲಿ ಹಾಡಿನ ಚಿತ್ರೀಕರಣಕ್ಕಾಗಿ ಕಾಶ್ಮೀರಕ್ಕೆ ತೆರಳುವುದಾಗಿ ಕೀರ್ತಿ ತಿಳಿಸಿದ್ದಾರೆ.
Advertisement