ಮೈಸೂರು ಗ್ಯಾಂಗ್ ರೇಪ್: ಹುಡುಗಿಯದ್ದೆ ತಪ್ಪು ಅನ್ನೋದು ಎಷ್ಟು ಸರಿ, ಇಂತಹವರ ಮನಸ್ಥಿತಿ ಏನು? ನಟಿ ರಮ್ಯಾ ಪ್ರಶ್ನೆ!

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣ ಜನಾಕ್ರೋಶಕ್ಕೆ ಕಾರಣವಾಗಿದೆ. ಘಟನೆ ಕುರಿತಂತೆ ಗೃಹ ಸಚಿವರ ಹೇಳಿಕೆಗಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. 
ನಟಿ ರಮ್ಯಾ
ನಟಿ ರಮ್ಯಾ

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣ ಜನಾಕ್ರೋಶಕ್ಕೆ ಕಾರಣವಾಗಿದೆ. ಘಟನೆ ಕುರಿತಂತೆ ಗೃಹ ಸಚಿವರ ಹೇಳಿಕೆಗಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. 

ಇದೇ ವೇಳೆ, ನಟಿ ಕಮ್ ರಾಜಕಾರಣಿ ರಮ್ಯಾ ಗೃಹ ಸಚಿವರ ಹೇಳಿಕೆಗೆ ಕಿಡಿಕಾರಿದ್ದಾರೆ. ಅತ್ಯಾಚಾರಿಗಳಿಗೆ ಶಿಕ್ಷೆ ಕೊಡಿಸುವ ಬದಲು ಯುವತಿಯದ್ದೇ ತಪ್ಪು ಎಂಬಂತೆ ಮಾತನಾಡುತ್ತಿರುವುದು ಎಷ್ಟು ಸರಿ ಎಂದು ನಟಿ ಪ್ರಶ್ನಿಸಿದ್ದಾರೆ.

ನಟಿ ರಮ್ಯಾ
ನಟಿ ರಮ್ಯಾ

ಇಂತಹ ಘಟನೆಗಳು ನಡೆದಾಗಿ ಮಹಿಳೆಯನ್ನು ದೂಷಿಸಲಾಗುತ್ತಿದೆ. ಮಹಿಳೆಯರ ಮೇಲೆ ಶೋಷಣೆ ನಡೆದಾಗ ಮಹಿಳೆಯರದ್ದೇ ತಪ್ಪು ಎಂಬಂತೆ ವಾದ ಮಾಡುವವರಿಗೆ ಛೀಮಾರಿ ಹಾಕಬೇಕು ಎಂದು ಇನ್ ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

ಅತ್ಯಾಚಾರ ಆಗಿರಬಹುದು, ದೈಹಿಕ ದೌರ್ಜನ್ಯ ಅಥವಾ ಮೌಖಿಕ ಶೋಷಣೆ ಆಗಿರಬಹುದು. ಆದರೆ ಇಲ್ಲಿ ಮಹಿಳೆಯನ್ನೇ ದೂಷಿಸಲಾಗುತ್ತದೆ. ನಿನ್ನದೇ ತಪ್ಪು ಎಂದು ಮಹಿಳೆಯರತ್ತ ಬೊಟ್ಟು ಮಾಡಲಾಗುತ್ತದೆ. ನೀನು ಹೀಗೆ ಮಾಡಬಾರದಿತ್ತು. ಹೀಗೆ ಹೇಳಬಾರದಿತ್ತು. ಅರ್ಧಂಬರ್ಧ ಬಟ್ಟೆ ಹಾಕಿಕೊಳ್ಳಬಾರದು. ಲಿಪ್ ಸ್ಟಿಕ್ ಯಾಕೆ? ಕಣ್ಣು ಮಿಟುಕಿಸಬಾರದು ಎಂದೆಲ್ಲಾ ಹೇಳುತ್ತಾರೆ ಎಂದು ನಟಿ ಪೋಸ್ಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com