ಅಕ್ಟೋಬರ್ ನಲ್ಲಿ ತೆರೆಗೆ ಬರಲು 'ಅವಲಕ್ಕಿ ಪವಲಕ್ಕಿ' ಸಜ್ಜು!

ನೂರಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಂಸೆ ಗಿಟ್ಟಿಸಿಕೊಂಡಿರುವ ಅವಲಕ್ಕಿ ಪವಲಕ್ಕಿ ಸಿನೆಮಾ ಸಿನೆಮಾ ಥಿಯೇಟರ್ ನಲ್ಲಿ ತೆರೆಗೆ ಬರಲು ಸಜ್ಜಾಗಿದೆ.
ಚಿತ್ರದ ದೃಶ್ಯ
ಚಿತ್ರದ ದೃಶ್ಯ
Updated on

ನೂರಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಂಸೆ ಗಿಟ್ಟಿಸಿಕೊಂಡಿರುವ ಅವಲಕ್ಕಿ ಪವಲಕ್ಕಿ ಸಿನೆಮಾ ಸಿನೆಮಾ ಥಿಯೇಟರ್ ನಲ್ಲಿ ತೆರೆಗೆ ಬರಲು ಸಜ್ಜಾಗಿದೆ.

ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿರುವ ಅವಲಕ್ಕಿ ಪವಲಕ್ಕಿ 11ನೇ ದಾದ ಸಾಹೇಬ್ ಫಾಲ್ಕೆ ಚಲನ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸುವುದರ ಜೊತೆಗೆ 60ಕ್ಕೂ ಹೆಚ್ಚು ಪ್ರಶಸ್ತಿ ಗಿಟ್ಟಿಸಿಕೊಂಡಿದೆ. ದುರ್ಗಾ ಪ್ರಸಾದ್ ನಿರ್ದೇಶನದ ಶ್ರೀ ಪ್ರಣವ ಪಿಕ್ಚರ್ಸ್ ಬ್ಯಾನರ್ ನಡಿ ತಯಾರಾದ ಚಿತ್ರ ಮೂವರು ಮಕ್ಕಳು ಮತ್ತು ಬುಡಕಟ್ಟು ಜನಾಂಗದ ಕಥೆಯನ್ನು ಹೇಳುತ್ತದೆ.

ನಮ್ಮ ಸಿನೆಮಾದಲ್ಲಿ ಧರ್ಮ - ಧರ್ಮೋ ರಕ್ಷತಿ ರಕ್ಷಿತಾ: - ಭಾರತೀಯ ಮಹಾಕಾವ್ಯ ಮಹಾಭಾರತದಲ್ಲಿ ಹೇಳಿರುವಂತೆ ಮತ್ತು ಈ ಆಧುನಿಕ ಯುಗದಲ್ಲಿ ಅದು ಹೇಗೆ ತನ್ನ ಅರ್ಥವನ್ನು ಕಳೆದುಕೊಂಡಿದೆ ಎಂದು ನಿರ್ದೇಶಕರು ಹೇಳುತ್ತಾರೆ. ಅವರು ಹೇಳುವಂತೆ, "ದಕ್ಷಿಣ ಭಾರತದ ದಟ್ಟವಾದ ಕಾಡುಗಳಲ್ಲಿ ವಾಸಿಸುವ ಬುಡಕಟ್ಟು ಸಮುದಾಯದ ಜೀವನವನ್ನು ಈ ಚಿತ್ರವು ಚಿತ್ರಿಸುತ್ತದೆ, ಮತ್ತು ಅದರಲ್ಲಿ ತೊಡಗಿರುವವರ ಜೀವನವು ಹೇಗೆ ಪರಿಣಾಮ ಬೀರುತ್ತದೆ ಎನ್ನುವ ತಿರುವನ್ನು ಕಥೆ ಹೊಂದಿದೆ ಎಂದು ವಿವರಿಸಿದರು.

ರಂಜಿತಾ ಸುಬ್ರಹ್ಮಣ್ಯ ನಿರ್ಮಿಸಿದ ಚಿತ್ರವನ್ನು ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡುವ ಗುರಿ ಹೊಂದಲಾಗಿದ್ದು ಸರ್ಕಾರವು ಶೇಕಡಾ 100 ರಷ್ಟು ಥಿಯೇಟರ್ ಭರ್ತಿಗೆ ಅನುಮತಿ ನೀಡಲು ಕಾಯುತ್ತಿದ್ದೇವೆ. ಚಿತ್ರವನ್ನು ಅಕ್ಟೋಬರ್ ನಲ್ಲಿ ತೆರೆಗೆ ತರುವ ಆಲೋಚನೆಯಿದೆ ಎಂದು ಚಿತ್ರದ ಕಥೆ ಮತ್ತು ಚಿತ್ರಕಥೆಯನ್ನು ಬರೆದಿರುವ ದುರ್ಗಾ ಪ್ರಸಾದ್ ಹೇಳುತ್ತಾರೆ. 

ಅವಲಕ್ಕಿ ಪವಲಕ್ಕಿಯ ಸಂಗೀತ ಜುಬಿನ್ ಪೌಲ್ ಅವರದ್ದು ಮತ್ತು ನಿರೀಕ್ಷಿತ್ ಕ್ಯಾಮರಾ ನಿಭಾಯಿಸುತ್ತಿದ್ದಾರೆ. ದೀಪಕ್ ಪಟೇಲ್, ಸಿಂಚನಾ ಪೊನ್ನವ್ವ, ಮತ್ತು ರಾಘವೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಸುಮಾರು 30 ಬಾಲ ಕಲಾವಿದರು ಕೂಡ ನಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com