ಅಪರೂಪದ 'ಭೀಮಿ' ಕತೆ ಹೇಳಲು ಹೊರಟಿದ್ದಾರೆ ಚಕ್ರವರ್ತಿ ಚಂದ್ರಚೂಡ್

ಬಿಗ್ ಬಾಸ್ ಕನ್ನಡ ಸೀಸನ್ ನಿಂದ ಹೊರಬಂದ ನಂತರ ನಟನೆಯತ್ತ ಗಮನ ಹರಿಸಿರುವ ಚಕ್ರವರ್ತಿ ಚಂದ್ರಚೂಡ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಚಕ್ರವರ್ತಿ ಚಂದ್ರಚೂಡ್
ಚಕ್ರವರ್ತಿ ಚಂದ್ರಚೂಡ್
Updated on

ಬಿಗ್ ಬಾಸ್ ಕನ್ನಡ ಸೀಸನ್ ನಿಂದ ಹೊರಬಂದ ನಂತರ ನಟನೆಯತ್ತ ಗಮನ ಹರಿಸಿರುವ ಚಕ್ರವರ್ತಿ ಚಂದ್ರಚೂಡ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಅರವಿಂದ್ ಕೌಶಿಕ್ ಅವರ ಗಾನ್ ಕೇಸ್  ಸಿನಿಮಾದಲ್ಲಿ ತಮ್ಮ ಭಾಗದ ಸನ್ನಿವೇಶಗಳನ್ನು ಪೂರ್ಣಗೊಳಿಸಿರುವ ಚಂದ್ರ ಚೂಡ್, ವಶಿಷ್ಟ ನಿರ್ದೇಶನದ ಮಧ್ಯಂತರ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.ಸೆಪ್ಟಂಬರ್ ಮೊದಲ ವಾರದಲ್ಲಿ ಸಿನಿಮಾ ಸೆಟ್ಟೇರಲಿದೆ. 

ಇದರ ಜೊತೆಗೆ ಅವರು 'ಭೀಮಿ' ಶೀರ್ಷಿಕೆಯ ಚಿತ್ರಕ್ಕಾಗಿ ಮೆಗಾಫೋನ್ ಹಿಡಿಯಲು ತಯಾರಿ ನಡೆಸುತ್ತಿದ್ದು, ನಾಯಕನಾಗಿ ಶ್ರೀಧರ್ ರಾಮ್ ಅವರನ್ನು ಕರೆತಂದಿದ್ದಾರೆ.

ಶ್ರೀಧರ್ ರಾಮ್ ಅವರು, ಬೆನಕ ತಂಡದ ರಂಗಭೂಮಿ ಕಲಾವಿದರಾಗಿದ್ದು, ಭೀಮಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ.

ಚಕ್ರವರ್ತಿ ಮತ್ತೊಮ್ಮೆ ಒಂದು ವಿಶಿಷ್ಟ ಕಥೆಯನ್ನು ಆಯ್ಕೆ ಮಾಡಿದ್ದಾರೆ. "ಭಾರತದಾದ್ಯಂತ ಮಹಿಳೆಯರಿರುವ ಕೆಲವು ಹಳ್ಳಿಗಳಿವೆ. ಅಂತಹ ಒಂದು ಗ್ರಾಮ ಕರ್ನಾಟಕದಲ್ಲಿಯೂ ಇದೆ. ಈ ಗ್ರಾಮದಲ್ಲಿ ಇಂದಿಗೂ ಕೆಲವು ಸಂಪ್ರದಾಯಗಳು ಆಚರಣೆಯಲ್ಲಿವೆ ಎಂದು ಚಕ್ರವರ್ತಿ ಹೇಳಿದ್ದಾರೆ.

ಭೀಮಿ ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ಅನ್ನು ಸುದೀಪ್ ಬಿಡುಗಡೆ ಮಾಡಿದ್ದಾರೆ. ಸೆಪ್ಟಂಬರ್ 18 ರಂದು ಶೂಟಿಂಗ್ ಆರಂಭವಾಗಲಿದೆ.

ಕೆಲವೇ ಕೆಲವು ಕಲಾವಿದರಿರುವ ಸಿನಿಮಾದಲ್ಲಿ ಅದ್ಭುತ ಹಾಸ್ಯವಿದೆ,  ಪ್ರತಿಯೊಬ್ಬ ಕಲಾವಿದರು ರಂಗಭೂಮಿ ಹಿನ್ನೆಲೆಯಿಂದ ಬಂದವರಾಗಿದ್ದಾರೆ ಎಂದು ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ.

ಅಪರೂಪದಲ್ಲಿ ಅಪರೂಪವಾದ ಕಥೆ ಇದಾಗಿದ್ದು, ಚಿತ್ರಕತೆ ಸಂಭಾಷಣೆ ಎಲ್ಲವನ್ನು ನಾನೇ ಬರೆದಿದ್ದೇನೆ, ಭೀಮಿ ಚಿತ್ರವನ್ನು ಬಾಬು ರೆಡ್ಡಿ ನಿರ್ಮಾಣ ಮಾಡುತ್ತಿದ್ದು, ವೀರ್ ಸಮರ್ಥ್ ಸಂಗೀತ ಸಂಯೋಜಿಸಿದ್ದಾರೆ. ಪ್ರಪ್ರಥಮ ಬಾರಿಗೆ ಪರಮೇಶ್ವರ್ ಛಾಯಾಗ್ರಾಹಕರಾಗಿದ್ದಾರೆ. 

ಚಂದ್ರಚೂಡ್ ಅವರ ಮುಂದಿನ ಮುಂಬರುವ ಚಿತ್ರ ಐ ಆಮ್ ಕಲ್ಕಿ ತಯಾರಿಕೆಯಲ್ಲಿದೆ ಮತ್ತು ಅದರ ಬಗ್ಗೆ ಅಪ್‌ಡೇಟ್‌ಗಳು ಶೀಘ್ರದಲ್ಲೇ ಬಹಿರಂಗಗೊಳ್ಳುತ್ತವೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com