ನಿರ್ಮಾಪಕ ದ್ವಾರಕೀಶ್ ವಿರುದ್ಧ 50 ಲಕ್ಷ ಚೆಕ್ ಬೌನ್ಸ್ ಕೇಸು: ಒಂದು ತಿಂಗಳಲ್ಲಿ ಹಣ ಹಿಂತಿರುಗಿಸುವಂತೆ ಕೋರ್ಟ್ ಆದೇಶ

ಕನ್ನಡದ ಖ್ಯಾತ ಹಿರಿಯ ನಿರ್ಮಾಪಕ ದ್ವಾರಕೀಶ್ ವಿರುದ್ಧ ವಂಚನೆ ಕೇಸು ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುವ ಲಕ್ಷಣ ಕಾಣುತ್ತಿದೆ. 50 ಲಕ್ಷ ರೂಪಾಯಿಗಳನ್ನು ದ್ವಾರಕೀಶ್ ಅವರು ಹಿಂತಿರುಗಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. 
ಹಿರಿಯ ನಟ, ನಿರ್ಮಾಪಕ ದ್ವಾರಕೀಶ್
ಹಿರಿಯ ನಟ, ನಿರ್ಮಾಪಕ ದ್ವಾರಕೀಶ್

ಬೆಂಗಳೂರು: ಕನ್ನಡದ ಖ್ಯಾತ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ವಿರುದ್ಧ ವಂಚನೆ ಕೇಸು ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುವ ಲಕ್ಷಣ ಕಾಣುತ್ತಿದೆ. 50 ಲಕ್ಷ ರೂಪಾಯಿಗಳನ್ನು ದ್ವಾರಕೀಶ್ ಅವರು ಹಿಂತಿರುಗಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. 

ನಿರ್ಮಾಪಕ ದ್ವಾರಕೀಶ್ ವಿರುದ್ಧ 50 ಲಕ್ಷ ರೂಪಾಯಿ ಚೆಕ್ ಬೌನ್ಸ್ ಕೇಸು ದಾಖಲಾಗಿತ್ತು. ಕೆ ಸಿ ಎನ್ ಚಂದ್ರಶೇಖರ್ ಎಂಬುವವರು ಕೇಸು ಹಾಕಿದ್ದರು. ದ್ವಾರಕೀಶ್ ಅವರು ಚಾರುಲತಾ ಸಿನಿಮಾ ವೇಳೆ 50 ಲಕ್ಷ ರೂಪಾಯಿ ಪಡೆದಿದ್ದನ್ನು ಹಿಂತಿರುಗಿಸದೆ ಸತಾಯಿಸುತ್ತಿದ್ದರು. ಹಣ ಕೇಳಿದಾಗ ಚೆಕ್ ನೀಡಿದ್ದು ಅದನ್ನು ಬ್ಯಾಂಕ್ ಗೆ ಹಾಕಿದ್ದಾಗ ಬೌನ್ಸ್ ಆಗಿತ್ತು, ಈ ಹಿನ್ನೆಲೆಯಲ್ಲಿ ದ್ವಾರಕೀಶ್ ವಿರುದ್ಧ ಚೆಕ್ ಬೌನ್ಸ್ ಕೇಸು ದಾಖಲಾಗಿತ್ತು. 

ಈ ವೇಳೆ ಚಂದ್ರಶೇಖರ್ ನೀಡಿದ್ದ ಚೆಕ್ ತಮ್ಮದಲ್ಲ ಎಂದು ದ್ವಾರಕೀಶ್ ವಾದಿಸಿದ್ದು ಸಹಿಯ ಬಗ್ಗೆ ವಿವಾದ ಉಂಟಾಗಿತ್ತು.. ಕೊನೆಗೆ ಚೆಕ್ ನಲ್ಲಿನ ಸಹಿಯನ್ನು ಎಫ್ ಎಸ್ ಎಲ್ ವರದಿಯಲ್ಲಿ ಪರಿಶೀಲಿಸಿದಾಗ ಅವರದ್ದೇ ಸಹಿ ಎಂದು ಉಲ್ಲೇಖವಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ.

1 ತಿಂಗಳಲ್ಲಿ ಹಣ ಹಿಂತಿರುಗಿಸಿ: ಕೆ ಸಿ ಎನ್ ಚಂದ್ರಶೇಖರ್ ಅವರಿಗೆ ಇನ್ನೊಂದು ತಿಂಗಳೊಳಗೆ ಹಣ ಹಿಂತಿರುಗಿಸುವಂತೆ ಕೋರ್ಟ್ ಆದೇಶ ನೀಡಿದೆ. ಒಂದು ವೇಳೆ ಹಣ ಹಿಂತಿರುಗಿಸದಿದ್ದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಕೋರ್ಟ್ ನ ಆದೇಶ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com