ಸಹೋದರ ಪುನೀತ್ ರಾಜಕುಮಾರ್ ಅಗಲಿಕೆಯ ನೋವಿನಿಂದ ನಟ ರಾಘವೇಂದ್ರ ರಾಜ್ ಕುಮಾರ್ ನಿಧಾನವಾಗಿ ಹೊರಬರುತ್ತಿದ್ದಾರೆ.
ರಾಘವೇಂದ್ರ ರಾಜಕುಮಾರ ಮತ್ತೆ ಸಿನಿಮಾ ಚಿತ್ರೀಕರದಲ್ಲಿ ಬಾಗಿಯಾಗುತ್ತಿದ್ದಾರೆ. ಸದ್ಯ ರಾಜಿ ಸಿನಿಮಾ ಶೂಟಿಂಗ್ ನಲ್ಲಿ ರಾಘಣ್ಣ ಭಾಗವಹಿಸಿದ್ದರು. ನಿರ್ದೇಶಕಿ ಪ್ರೀತಿ ಎಸ್ ಬಾಬು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಅವರ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ರಾಜಿ ಸಿನಿಮಾಗೆ ಹರೀಶ್ ಚಿತ್ರಕತೆಯನ್ನು ಹರೀಶ್ ಬರೆದಿದ್ದಾರೆ. ಇದೊಂದು ಕೌಟುಂಬಿಕ ಸಿನಿಮಾವಾಗಿದೆ, ಚಿತ್ರಕ್ಕೆ ಉಪಾಸನಾ ಮೋಹನ್ ಸಂಗೀತ ನೀಡಿದ್ದಾರೆ. ಡಾ ಎಚ್ ಎಸ್ ವೆಂಕಟೇಶಮೂರ್ತಿ ಸಾಹಿತ್ಯ ಬರೆದಿದ್ದಾರೆ. ಪಿವಿಆರ್ ಸ್ವಾಮಿ ಅವರು ಚಿತ್ರದ ಛಾಯಾಗ್ರಹಣ ನೀಡಿದ್ದಾರೆ.
Advertisement