ರೆಸ್ಟೋರೆಂಟ್‌ನಲ್ಲಿ ಕಾಣಿಸಿಕೊಂಡ ವಿಜಯ್ ದೇವರಕೊಂಡ, ರಶ್ಮಿಕಾ: ಅಭಿಮಾನಿಗಳು ರಣಬೀರ್, ಆಲಿಯಾಗೆ ಹೋಲಿಸಿದ್ದೇಕೆ?
ಮುಂಬೈ: ಕಳೆದ ರಾತ್ರಿ ಮುಂಬೈನ ರೆಸ್ಟೋರೆಂಟ್‌ನಲ್ಲಿ ಟಾಲಿವುಡ್ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಅವರ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ತಕ್ಷಣ, ಇದ್ದ ವದಂತಿಗಳನ್ನು ಇಬ್ಬರು ನಿಜ ಮಾಡಲು ಮುಂದಾಗಿದ್ದಾರೆಯೇ ಎಂದು ಅಭಿಮಾನಿಗಳು ಊಹಿಸಲು ಪ್ರಾರಂಭಿಸಿದ್ದಾರೆ.
ಭಾನುವಾರ ರಾತ್ರಿ, ವಿಜಯ್ ಮತ್ತು ರಶ್ಮಿಕಾ ಮುಂಬೈನ ರೆಸ್ಟೋರೆಂಟ್‌ನಲ್ಲಿ ಡಿನ್ನರ್ ಮಾಡಿ ಹೊರಹೋಗುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಾಪರಾಜಿಗಳ ಕ್ಯಾಮೆರಾದಲ್ಲಿ ಇಬ್ಬರು ರೆಸ್ಟೋರೆಂಟ್ನಿಂದ ಹೊರಬರುವ ದೃಶ್ಯ ಸೆರೆಯಾಗಿದೆ. ವಿಜಯ್ ದೇವರಕೊಂಡ ಟೈಗರ್ ಪ್ರಿಂಟ್ ಟಿ-ಶರ್ಟ್ ಧರಿಸಿದ್ದರೆ, ಕಪ್ಪು ಬಟ್ಟೆಯಲ್ಲಿ ರಶ್ಮಿಕಾ ಸಖತ್ ಆಗಿ ಕಾಣುತ್ತಿದ್ದರು.
ಈ ವಿಡಿಯೋಗೆ ಅವರ ಅನೇಕ ಅಭಿಮಾನಿಗಳು ಕಮೆಂಟ್ ಮಾಡಿದ್ದು, ಒಬ್ಬ ವ್ಯಕ್ತಿಯಂತೂ ವಿಜಯ್ ಮತ್ತು ರಶ್ಮಿಕಾ ಅವರನ್ನು ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಬಾಲಿವುಡ್ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಗೆ ಹೋಲಿಸಿದ್ದಾರೆ.
ರಶ್ಮಿಕಾ ಮತ್ತು ವಿಜಯ್ ಈ ಹಿಂದೆ 2019 ರಲ್ಲಿ ಡಿಯರ್ ಕಾಮ್ರೇಡ್ ಮತ್ತು 2018 ರಲ್ಲಿ ಗೀತಾ ಗೋವಿಂದಂ ಚಿತ್ರದಲ್ಲಿ ನಟಿಸಿದ್ದಾರೆ. ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬ ವದಂತಿ ಹರಡುತ್ತಿದ್ದರೂ, ನಾವಿಬ್ಬರು ಒಳ್ಳೆಯ ಸ್ನೇಹಿತರು ಮಾತ್ರ ಎಂದು ವಿಜಯ್ – ರಶ್ಮಿಕಾ ಹೇಳಿಕೊಳ್ಳುತ್ತಾ ಬಂದಿದ್ದಾರೆ.
ವಿಜಯ್ ಮತ್ತು ರಶ್ಮಿಕಾ ಇಬ್ಬರೂ ಹೊಸ ಚಿತ್ರಗಳೊಂದಿಗೆ ಬಾಲಿವುಡ್‌ಗೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಪುರಿ ಜಗನ್ನಾಥ್ ಅವರ ಮುಂಬರುವ ಚಿತ್ರ ಲಿಗರ್‌ನಲ್ಲಿ ವಿಜಯ್ ಅವರು ನಟಿ ಅನನ್ಯಾ ಪಾಂಡೆ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ಪರ್ವೀಜ್ ಶೇಖ್, ಅಸೀಮ್ ಅರೋರಾ ಮತ್ತು ಸುಮಿತ್ ಬತೇಜಾ ಬರೆದಿರುವ ಮತ್ತು ಶಂತನು ಬಾಗ್ಚಿ ನಿರ್ದೇಶಿಸಿದ ಸ್ಪೈ ಥ್ರಿಲ್ಲರ್ ಮಿಷನ್ ಮಜ್ನು ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಎದುರು ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ