ಶ್ರೇಯಸ್ ಮಂಜು
ಶ್ರೇಯಸ್ ಮಂಜು

ಯಶ್ ಸಿನಿಮಾ ಶ್ರೇಯಸ್ ಮಂಜು ಪಾಲು: 'ರಾಣಾ'ಗೆ ನಂದ ಕಿಶೋರ್ ನಿರ್ದೇಶನ!

ಪಡ್ಡೆಹುಲಿ ನಟ ಶ್ರೇಯಸ್ ಮಂಜು ಮೂರನೇ ಸಿನಿಮಾವನ್ನು ನಂದಕಿಶೋರ್ ನಿರ್ದೇಶಿಸಲಿದ್ದಾರೆ.  ರಾಕಿಂಗ್ ಸ್ಟಾರ್‌' ಯಶ್ ಅಭಿನಯದಲ್ಲಿ, ಹರ್ಷ ನಿರ್ದೇಶನದಲ್ಲಿ 'ರಾಣಾ' ಅನ್ನೋ ಸಿನಿಮಾ ಕೆಲ ವರ್ಷಗಳ ಹಿಂದೆ ಘೋಷಣೆ ಆಗಿತ್ತು.
Published on

ಪಡ್ಡೆಹುಲಿ ನಟ ಶ್ರೇಯಸ್ ಮಂಜು ಮೂರನೇ ಸಿನಿಮಾವನ್ನು ನಂದಕಿಶೋರ್ ನಿರ್ದೇಶಿಸಲಿದ್ದಾರೆ. ರಾಕಿಂಗ್ ಸ್ಟಾರ್‌' ಯಶ್ ಅಭಿನಯದಲ್ಲಿ, ಹರ್ಷ ನಿರ್ದೇಶನದಲ್ಲಿ 'ರಾಣಾ' ಅನ್ನೋ ಸಿನಿಮಾ ಕೆಲ ವರ್ಷಗಳ ಹಿಂದೆ ಘೋಷಣೆ ಆಗಿತ್ತು.

ಆದರೆ, ಆನಂತರ ಆ ಸಿನಿಮಾ ಟೇಕ್ ಆಫ್ಆಗಲಿಲ್ಲ. ರಾಣ ಆಗಿ ತೆರೆಮೇಲೆ ಯಶ್‌ರನ್ನು ನೋಡಬೇಕು ಎಂದುಕೊಂಡಿದ್ದ ಫ್ಯಾನ್ಸ್ ಆಸೆ ಈಡೇರಲಿಲ್ಲ. ಇದೀಗ ಆ ಸಿನಿಮಾದ ಶೀರ್ಷಿಕೆ ಕೆ. ಮಂಜು ಪುತ್ರ ಶ್ರೇಯಸ್ ಪಾಲಾಗಿದೆ.

ಗುಜ್ಜಾಲ್ ಟಾಕೀಸ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾಗೆ ಶ್ರೇಯಸ್ ಮಂಜು ನಾಯಕರಾಗಿದ್ದಾರೆ. ಇದೀಗ ಶೀರ್ಷಿಕೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ಜುಲೈ 7 ರಂದು 'ರಾಣಾ' ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. 

ಜುಲೈ 1ರಂದು ಬೆಂಗಳೂರಿನ ಮೋದಿ ಆಸ್ಪತ್ರೆ ಸಮೀಪವಿರುವ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆದಿದೆ. ಈ ಸಮಾರಂಭದಲ್ಲಿ ಕೆ. ಮಂಜು, ನಿರ್ಮಾಪಕ ಪುರುಷೋತ್ತಮ ಗುಜ್ಜಾಲ್, ನಿರ್ದೇಶಕ ನಂದ ಕಿಶೋರ್, ನಾಯಕ ಶ್ರೇಯಸ್ ಹಾಗೂ ನಾಯಕಿ ರೇಷ್ಮಾ ನಾಣಯ್ಯ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು. ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡುತ್ತಿದ್ದು, ಶೇಖರ್‌ಚಂದ್ರು ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಮಾಡುತ್ತಿದ್ದಾರೆ. ಸಂಭಾಷಣೆಯನ್ನು ಪ್ರಶಾಂತ್ ರಾಜಪ್ಪ ಬರೆಯುತ್ತಿದ್ದಾರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com