ಕಾವ್ಯಾ ಶಾಸ್ತ್ರಿ
ಸಿನಿಮಾ ಸುದ್ದಿ
ಪ್ಲಾಸ್ಮಾ ಬಳಿಕ ಕೂದಲು ದಾನ ಮಾಡಿ ಮಾದರಿಯಾದ ಸ್ಯಾಂಡಲ್ ವುಡ್ ನಟಿ ಕಾವ್ಯಾ ಶಾಸ್ತ್ರಿ
ಕೊರೋನಾ ಸಮಯದಲ್ಲಿ ಪ್ಲಾಸ್ಮಾ ದಾನ ಮಾಡಿದ್ದ ಸ್ಯಾಂಡಲ್ ವುಡ್ ನಟಿ ಕಾವ್ಯಾ ಶಾಸ್ತ್ರಿಇದೀಗ ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿ ಮಾದರಿಯಾಗಿದ್ದಾರೆ.
ಕೊರೋನಾ ಸಮಯದಲ್ಲಿ ಪ್ಲಾಸ್ಮಾ ದಾನ ಮಾಡಿದ್ದ ಸ್ಯಾಂಡಲ್ ವುಡ್ ನಟಿ ಕಾವ್ಯಾ ಶಾಸ್ತ್ರಿಇದೀಗ ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿ ಮಾದರಿಯಾಗಿದ್ದಾರೆ.
"ಕ್ಯಾನ್ಸರ್ ರೋಗಿಗಳಿಗೆ ನಾನು ಕೂದಲು ದಾನ ಮಾಡಿದ್ದೇನೆ, ಕ್ಯಾನ್ಸರ್ ನಿಂದಾಗಿ ನಾನು ನನ್ನ ಚಿಕ್ಕಪ್ಪನನ್ನು ಕಳೆದುಕೊಂಡಿದ್ದೆ. ಆ ನೋವನ್ನು ಹತ್ತಿರದಿಂದ ಕಂಡಿದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ. ಕೂದಲು ದಾನ ಸಣ್ಣ ಕೆಲಸವೇ ಇರಬಹುದು, ಆದರೆ ಒಳ್ಳೇ ಕೆಲಸಕ್ಕೆ ನೀವು ಸಹ ಕೈಜೋಡಿಸಿ." ಎಂದು ನಟಿ ಮನವಿ ಮಾಡಿದ್ದಾರೆ.
ನಟಿ ಕಾವ್ಯಾ ಶಾಸ್ತ್ರಿ ತಾವು ಕೂದಲು ಕತ್ತರಿಸಿರುವ ಚಿತ್ರವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.
ಇದಕ್ಕೆ ಮುನ್ನ ಸ್ಯಾಂಡಲ್ ವುಡ್ ನಟರಾದ ಧ್ರುವ ಸರ್ಜಾ ನಟಿ ಕಾರುಣ್ಯ ರಾಮ್ ಸಹ ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿ ಮಾನವೀಯತೆ ಮೆರೆದಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ