
ಉದಯ ಪ್ರಕಾಶ್ ನಿರ್ದೇಶನದ ವರದ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ನಟಿಸಿದ್ದು ಜುಲೈ 8 ರಂದು ಮೋಷನ್ ಪೋಸ್ಟರ್ ರಿಲೀಸ್ ಆಗಲಿದೆ.
ಕಳ್ಳ ಮಳ್ಳ ಸುಳ್ಳ, ಡಿಕೆ, ಆಟೋರಾಜ, ಯೋಗಿ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿರುವ ಉದಯ ಪ್ರಕಾಶ್ ಕಮರ್ಷಿಯಲ್ ಎಂಟರೈಟನ್ ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ. ರಾಬರ್ಟ್ ನಂಟರ ವಿನೋದ್ ಪ್ರಭಾಕರ್ ವರದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಲಾಕ್ಡೌನ್ಗೂ ಮುನ್ನವೇ ವರದ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿತ್ತಂತೆ. ಇದು ಬರೀ ಆ್ಯಕ್ಷನ್ ಚಿತ್ರ ಎಂದು ಹೇಳುವುದೂ ಕಷ್ಟ. ಏಕೆಂದರೆ, ಚಿತ್ರದಲ್ಲಿ ಅಪ್ಪ-ಮಗನ ನಡುವಿನ ಸೆಂಟಿಮೆಂಟ್ ಸಹ ಬಹಳ ಮುಖ್ಯವಾಗಿ ಬರುತ್ತಂತೆ.
ನಿರ್ದೇಶನದ ಜೊತೆ ಉದಯ್ ಪ್ರಕಾಶ್ ನಿರ್ಮಾಣದ ಹೊಣೆ ಕೂಡ ಹೊತ್ತಿದ್ದಾರೆ. ಬೆಂಗಳೂರು, ಮೈಸೂರು, ಉಡುಪಿ ಮತ್ತು ಕುಂದಾಪುರದಲ್ಲಿ ಸಿನಿಮಾ ಶೂಟಿಂಗ್ ಮಾಡಿದ್ದು, 60 ದಿನಗಳಲ್ಲಿ ಶೂಟಿಂಗ್ ಮುಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರದೀಪ್ ವರ್ಮಾ ಸಂಗೀತ ಸಂಯೋಜಿಸಿದರೆ, ಭಜರಂಗಿ ಆನಂದ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಈಗಾಗಲೇ ಬೆಂಗಳೂರು, ಕುಂದಾಪುರ, ಉಡುಪಿ ಮುಂತಾದ ಕಡೆ ಚಿತ್ರೀಕರಣ ಮುಗಿದಿದ್ದು, ಎಲ್ಲ ಅಂದುಕೊಂಡಂತೆ ಆದರೆ, ಚಿತ್ರ ಇದೇ ವರ್ಷ ಬಿಡುಗಡೆಯಾಗಲಿದೆ. ನಾಯಕಿಯಾಗಿ ಅಮಿತಾ ರಂಗನಾಥ್ ನಟಿಸಿದ್ದಾರೆ. ಜತೆಗೆ ಅನಿಲ್ ಸಿದ್ದು, ಅಶ್ವಿನಿ ಗೌಡ ಮುಂತಾದವರು ನಟಿಸಿದ್ದಾರೆ.
Advertisement