'ಅಂದೊಂದಿತ್ತು ಕಾಲ' ಸಿನಿಮಾದಲ್ಲಿ ವಿನಯ್ ರಾಜ್ ಕುಮಾರ್ ಗೆ ಚಿತ್ರ ನಿರ್ದೇಶಕನ ಪಾತ್ರ!
ವಿನಯ್ ರಾಜ್ ಕುಮಾರ್ ನಟನೆಯ ಕ್ರೀಡಾ ಕತೆಯುಳ್ಳ 10 ಸಿನಿಮಾ ರಿಲೀಸ್ ಗೆ ಸಿದ್ಧವಾಗಿದೆ. ಇದೇ ವೇಳೆ ತಮ್ಮ ಮುಂದಿನ ಸಿನಿಮಾಗಳ ಕೆಲಸ ಆರಂಭವಾಗಿದೆ.
ಕೀರ್ತಿ ನಿರ್ದೇಶನದ ಅಂದೊಂದಿತ್ತು ಕಾಲ ಸಿನಿಮಾ ಶೂಟಿಂಗ್ ಗೆ ಮರಳಿದ್ದಾರೆ. ಭುವನ್ ಸುರೇಶ್ ಪ್ರೊಡಕ್ಷನ್ ನ ಮೊದಲ ಸಿನಿಮಾ ಇದಾಗಿದೆ, ಫೆಬ್ರವರಿಯಲ್ಲಿಯೇ ಸಿನಿಮಾ ಆರಂಭವಾಗಿತ್ತು. ಆದರೆ ಕೊರೋನಾ ಎರಡನೇ ಅಲೆಯಿಂದಾಗಿ ಅರ್ಧಕ್ಕೆ ನಿಂತಿತ್ತು. ಹೀಗಾಗಿ ಜುಲೈ 15 ರಿಂದ ಶೂಟಿಂಗ್ ಆರಂಭಿಸಲಿದ್ದಾರೆ,
ಶೂಟಿಂಗ್ ಹಿನ್ನೆಲೆಯಲ್ಲಿ ಚಿತ್ರತಂಡ ಸಿನಿಮಾ ಸ್ಟಿಲ್ ರಿಲೀಸ್ ಮಾಡಿದೆ. 1990ರ ದಶಕದ ಕಥೆಯಾಗಿದ್ದು, ವಿನಯ್ ರಾಜಕುಮಾರ್ ಚಿತ್ರ ನಿರ್ದೇಶಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅದಿತಿ ಪ್ರಭುದೇವ ನಾಯಕಿಯಾಗಿದ್ದಾರೆ, ಅದಿತಿ ಸಂಗೀತ ವಿದ್ಯಾರ್ಥಿ ಪಾತ್ರದಲ್ಲಿ ನಟಿಸಿದ್ದಾರೆ.
ಗಟ್ಟಿಮೇಳ ಧಾರಾವಾಹಿ ನಟಿ ನಿಶಾ ರವಿಕೃಷ್ಣನ್ ಸಿನಿಮಾದಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಕಡ್ಡಿಪುಡಿ ಚಂದ್ರು ಮತ್ತು ಅರುಣಾ ಬಾಲರಾಜ್ ಕೂಡ ನಟಿಸಿದ್ದಾರೆ. ಬೆಂಗಳೂರಿನಲ್ಲಿ ಶೂಟಿಂಗ್ ಪ್ರಾರಂಭಿಸಿ, ತೀರ್ಥಹಳ್ಳಿ ಮತ್ತು ಊಟಿಗೆ ಹೋಗುತ್ತೇವೆ. ಕೇರಳದಲ್ಲಿ ಚಿತ್ರೀಕರಣ ಮುಗಿಸಲು ಯೋಜಿಸುತ್ತಿದ್ದೇವೆ. ಚಿತ್ರದ ಸಂಗೀತ ಮತ್ತು ಛಾಯಾಗ್ರಹಣವನ್ನು ಕ್ರಮವಾಗಿ ರಾಘವೇಂದ್ರ.ವಿ ಮತ್ತು ಅಭಿಷೇಕ್ ಕಾಸರಗೋಡ್ ನಿರ್ವಹಿಸಿದ್ದಾರೆ.
ಇನ್ನೂ ಸಿನಿಮಾದಲ್ಲಿ ಗಾಯಕ ವಿಜಯ ಪ್ರಕಾಶ್ ಮೊಟ್ಟ ಮೊದಲ ಬಾರಿಗೆ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರಮುಖ ಪಾತ್ರವೊಂದಿದ್ದು ಅದರಲ್ಲಿ ವಿಜಯ ಪ್ರಕಾಶ್ ಅವರನ್ನು ನಟಿಸುವಂತೆ ಕೋರಿದ್ದೇವೆ, ಸದ್ಯ ವಿಷಯ ಚರ್ಚೆಯ ಹಂತದಲ್ಲಿದೆ. ಅವರು ಒಪ್ಪಿಕೊಂಡರೇ ಬೆಳ್ಳಿ ತೆರೆಯ ಮೇಲೆ ವಿಜಯ್ ಪ್ರಕಾಶ್ ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ಕೀರ್ತಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ