ನಿರ್ಮಾಪಕ ಉಮಾಪತಿ, ನಟ ದರ್ಶನ್
ನಿರ್ಮಾಪಕ ಉಮಾಪತಿ, ನಟ ದರ್ಶನ್

ವಂಚನೆ ಪ್ರಕರಣಕ್ಕೆ ತೆರೆ: ವಿವಾದಕ್ಕೆ ಅಂತ್ಯ ಹಾಡೋಣ ಎಂದ ನಟ ದರ್ಶನ್, ಅವರು ಹೇಳಿದ್ದೇ ಫೈನಲ್ ಎಂದ ಉಮಾಪತಿ!

ನಟ ದರ್ಶನ್ ಹೆಸರಲ್ಲಿ ವಂಚನೆ ಪ್ರಕರಣಕ್ಕೆ ತೆರೆ ಬಿದ್ದಿದೆ. ನಿರ್ಮಾಪಕ ಉಮಾಪತಿಯವರು ತಪ್ಪು ಮಾಡಿದ್ದಾರೆ ಎಂದು ನಾನು ಈಗಲೂ ಹೇಳುವುದಿಲ್ಲ, ಅವರು ನಿರ್ಮಾಪಕರು, ಯಾವತ್ತಿದ್ದರೂ ನಿರ್ಮಾಪಕರೇ, ನನಗೆ ಯಾವತ್ತಿದ್ದರೂ ಪ್ರೀತಿ, ಗೌರವ ಇರುತ್ತದೆ ಎಂದು ನಟ ದರ್ಶನ್ ಬೆಂಗಳೂರಿನಲ್ಲಿಂದು ಪ್ರತಿಕ್ರಿಯೆ ನೀಡಿದ್ದಾರೆ.
Published on

ಬೆಂಗಳೂರು: ನಟ ದರ್ಶನ್ ಹೆಸರಲ್ಲಿ ವಂಚನೆ ಪ್ರಕರಣಕ್ಕೆ ತೆರೆ ಬಿದ್ದಿದೆ. ನಿರ್ಮಾಪಕ ಉಮಾಪತಿಯವರು ತಪ್ಪು ಮಾಡಿದ್ದಾರೆ ಎಂದು ನಾನು ಈಗಲೂ ಹೇಳುವುದಿಲ್ಲ, ಅವರು ನಿರ್ಮಾಪಕರು, ಯಾವತ್ತಿದ್ದರೂ ನಿರ್ಮಾಪಕರೇ, ನನಗೆ ಯಾವತ್ತಿದ್ದರೂ ಪ್ರೀತಿ, ಗೌರವ ಇರುತ್ತದೆ, ಇದೇನು ಬಹಳ ದೊಡ್ಡ ವಿಷಯವಲ್ಲ ಎಂದು ನಟ ದರ್ಶನ್ ಬೆಂಗಳೂರಿನಲ್ಲಿಂದು ಪ್ರತಿಕ್ರಿಯೆ ನೀಡಿದ್ದಾರೆ.

ಅರುಣ ಕುಮಾರ್ ಅವರು ಅಜ್ಞಾತ ಸ್ಥಳದಿಂದ ವಿಡಿಯೊ ಮಾಡಿ ಈ ಪ್ರಕರಣದಲ್ಲಿ ನನ್ನ ಹೆಸರನ್ನು ನನ್ನನ್ನು ತರಬಾರದಾಗಿತ್ತು, ಆದರೂ ನನ್ನನ್ನು ಬಳಸಿಕೊಂಡಿದ್ದಾರೆ, ತಪ್ಪು ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ನಟ ದರ್ಶನ್ ಈ ಪ್ರಕರಣ ಹೇಗಾಯಿತು, ಏನಕ್ಕೆ ಬಳಸಿಕೊಂಡರು, ಏನಾಯಿತು ಎಂದು ನಮಗೇನು ಗೊತ್ತಿಲ್ಲ. ಈ ವಿಷಯವನ್ನು ಇಲ್ಲಿಗೆ ಬಿಟ್ಟುಬಿಡೋಣ, ಅಂತ್ಯ ಹಾಡೋಣ, ಸಾಕಾಗಿದೆ, ನಿನ್ನೆ ನಾವು ಮಂಗಳ ಹಾಡಿದ್ದೀವಿ, ಇವತ್ತು ಅವರೂ ಮಂಗಳ ಹಾಡಲಿ, ನಾನು-ಉಮಾಪತಿಯವರು ಮಾತನಾಡಿಕೊಳ್ಳುತ್ತೇವೆ ಎಂದರು.

ಆಧಾರ್ ಕಾರ್ಡು ಕಳುಹಿಸಲು ನಾನು ಹೇಳಿರಲಿಲ್ಲ, ಅವರು ಕಳುಹಿಸಲಾ ಎಂದು ಕೇಳಿದ್ದಕ್ಕೆ ಕಳುಹಿಸಿ ನೋಡೋಣ ಎಂದಿರಬಹುದಷ್ಟೆ. ನಮ್ಮ ಕಡೆಯಿಂದ ನಾನು ಈ ಪ್ರಕರಣವನ್ನು ಇಲ್ಲಿಗೇ ಬಿಟ್ಟುಬಿಟ್ಟಿದ್ದೇನೆ, ಅವರನ್ನು ಈಗಲೂ ನಿರ್ಮಾಪಕರೇ, ಇದೇನು ಮಕ್ಕಳಾಟನಾ ಇಲ್ಲಿಗೇ ಬಿಡೋಣ ಎಂದರು.

ದರ್ಶನ್ ಹೇಳಿದ್ದೇ ಫೈನಲ್: ದರ್ಶನ್ ಹೇಳಿಕೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿರುವ ನಿರ್ಮಾಪಕ ಉಮಾಪತಿ, ನಟ ದರ್ಶನ್ ಹೇಳಿದ ಮೇಲೆ ಅದೇ ಫೈನಲ್, ಈ ಪ್ರಕರಣ ಸುಖಾಂತ್ಯವಾಗಿದೆ. ಇಲ್ಲಿಗೇ ನಿಲ್ಲಿಸುತ್ತೇವೆ. ನಾನು ಮತ್ತು ದರ್ಶನ್ ಯಾವತ್ತಿದ್ದರೂ ಒಂದಾಗಿಯೇ ಇರುತ್ತೇವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com