'ಲವ್ 360'ಗಾಗಿ ಮೇಘಾ ಶೆಟ್ಟಿಯನ್ನು ಸಂಪರ್ಕಿಸಿದ ನಿರ್ದೇಶಕ ಶಶಾಂಕ್
ನಿರ್ದೇಶಕ ಶಶಾಂಕ್ ತಮ್ಮ ಮುಂದಿನ ಸಿನಿಮಾ "ಲವ್ 360" ನಲ್ಲಿ ನವ ನಾಯಕ ಪ್ರವೀಣ್ ಅವರನ್ನು ತೆರೆಗೆ ತರಲಿದ್ದಾರೆ. ಈ ಚಿತ್ರಕ್ಕಾಗಿ ನಾಯಕಿಯ ಆಯ್ಕೆ ಅಂತಿಮಗೊಳಿಸಲು ನಿರ್ದೇಶಕರು ಹುಡುಕಾಟದಲ್ಲಿದ್ದಾರೆ. ಮತ್ತು, ಇತ್ತೀಚಿನ ಮಾಹಿತಿಯಂತೆ ಈ ಪಾತ್ರಕ್ಕಾಗಿ ಜನಪ್ರಿಯ ಕಿರುತೆರೆ ನಟಿ ಮೇಘಾ ಶೆಟ್ಟಿ ಅವರ ಸಂಪರ್ಕ ಮಾಡಿದ್ದಾರೆ.
ಮೇಘಾ ತನ್ನ ಚೊಚ್ಚಲ ಟಿವಿ ಧಾರಾವಾಹಿ "ಜೊತೆ ಜೊತೆಯಲಿ"ಮೂಲಕ ಖ್ಯಾತರಾಗಿದ್ದಾರೆ. ಇದೀಗ ಅವರು ಗಣೇಶ್ ಅಭಿನಯದ "ತ್ರಿಬಲ್ ರೈಡಿಂಗ್" ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ನಿರ್ದೇಶಕ ಮತ್ತು ಮೇಘಾ ತಮ್ಮ ಮೊದಲ ಸುತ್ತಿನ ಚರ್ಚೆಗಳನ್ನು ನಡೆಸಿದ್ದಾರೆ, ಮತ್ತು ನಟಿ ತಾನಿನ್ನೂ ಚಿತ್ರದಲ್ಲಿ ನಟಿಸುವುದಾಗಿ ಅನುಮತಿ ಕೊಟ್ಟಿಲ್ಲ.
"ಮೇಘಾ ಪ್ರಸ್ತುತ ಜೊತೆ ಜೊತೆಯಲಿ ಮತ್ತು ತ್ರಿಬಲ್ ರೈಡಿಂಗ್ ಎರಡರ ನಡುವೆ ಬ್ಯುಸಿ ಇದ್ದಾರೆ. ಆಕೆ ತಮ್ಮ ಶೆಡ್ಯೂಲ್ ನಲ್ಲಿ ಲವ್ 360 ಗೆ ಅವಕಾಶ ಕಲ್ಪಿಸಬೇಕಾಗಿದೆ. ದಿನಾಂಕಗಳನ್ನು ನಟಿ ಒಮ್ಮೆ ದೃಢಪಡಿಸಿದ ನಂತರ ನಿರ್ದೇಶಕ ಶಶಾಂಕ್ ಅಧಿಕೃತ ಘೋಷಣೆ ಮಾಡುತ್ತಾರೆ ”ಎಂದು ಚಿತ್ರದ ಕುರಿತಾಗಿ ಅತ್ಯಂತ ಸಮೀಪದಿಂದ ಅರಿತಿರುವ ಮೂಲವೊಂದು ಹೇಳುತ್ತದೆ.
ಮತ್ತೊಂದೆಡೆ, ಚಿತ್ರದ ಪ್ರಮುಖ ನಟ ಪ್ರವೀಣ್ ವೃತ್ತಿಯಲ್ಲಿ ವೈದ್ಯನಾಗಿದ್ದು ಪ್ರಸ್ತುತ ತಮ್ಮ ಇಂಟರ್ನ್‌ಶಿಪ್ ಮಾಡುತ್ತಿದ್ದಾರೆ. ಸಿನೆಮಾ ಬಗ್ಗೆ ಒಲವು ಹೊಂದಿರುವ ಅವರು ತರಬೇತಿ ಪಡೆದ ನಟ. ಶಶಾಂಕ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ "ಲವ್ 360" ಗೆ ಅರ್ಜುನ್ ಜನ್ಯ ಸಂಗೀತವನ್ನು ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ