ತಮಿಳು ಸೂಪರ್‌ಸ್ಟಾರ್ ಸಿದ್ಧಾರ್ಥ್ ಸತ್ತಿದ್ದಾರೆಂದ ಯೂಟ್ಯೂಬ್ ವಿಡಿಯೋ: ಅವರ ಪ್ರತಿಕ್ರಿಯೆ ಹೀಗಿದೆ ನೋಡಿ!

ತಮಿಳು ಸೂಪರ್‌ಸ್ಟಾರ್ ಸಿದ್ಧಾರ್ಥ್ ಹಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ ಎಂದು ಹೇಳುವ ವಿಡಿಯೋ ಒಂದನ್ನು ಯೂಟ್ಯೂಬ್  ಚಾನೆಲ್ ಪ್ರಸಾರ ಮಾಡಿದ್ದು ಈ ಬಗ್ಗೆ ನಟ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ.
ಸಿದ್ಧಾರ್ಥ್
ಸಿದ್ಧಾರ್ಥ್
Updated on

ತಮಿಳು ಸೂಪರ್‌ಸ್ಟಾರ್ ಸಿದ್ಧಾರ್ಥ್ ಹಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ ಎಂದು ಹೇಳುವ ವಿಡಿಯೋ ಒಂದನ್ನು ಯೂಟ್ಯೂಬ್  ಚಾನೆಲ್ ಪ್ರಸಾರ ಮಾಡಿದ್ದು ಈ ಬಗ್ಗೆ ನಟ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಇದು ಮಾತ್ರವಲ್ಲ, ನಟನು ಯೂಟ್ಯೂಬ್‌ಗೆ ಈ ಬಗ್ಗೆ ವಿಡಿಯೋ  ಮಾಡಿದ್ದಕ್ಕಾಗಿ ಪ್ರತಿಕ್ರಿಯೆ ಕೇಳಿದ್ದು ಆಗ ಯೂಟ್ಯೂಬ್‌ ನೀಡಿದ ಪ್ರತಿಕ್ರಿಯೆ ಕಂಡು ಅಚ್ಚರಿ ಸೂಚಿಸಿದ್ದಾರೆ.

ಯೂಟ್ಯೂಬ್‌ನಲ್ಲಿ’10 South Indian Celebrities who died young,’ ಎನ್ನುವ ಶೀರ್ಷಿಕೆಯಲ್ಲಿ ತಮಿಳು ನಟ ಸಿದ್ಧಾರ್ಥ್ ಮೃತಪಟ್ಟಿದ್ದಾರೆಂದು ಹೇಳಲಾಗಿದೆ.

ಅಭಿಮಾನಿಯೊಬ್ಬರು ಇದನ್ನು ಗುರುತಿಸಿ, ಸಾಮಾಜಿಕ ಮಾಧ್ಯಮದಲ್ಲಿ ಸೌಂದರ್ಯ, ಸಿದ್ಧಾರ್ಥ್ ಮತ್ತು ಆರತಿ ಅಗರ್ವಾಲ್ ಅವರ ಚಿತ್ರಗಳನ್ನು  ಹೊಂದಿರುವ ಸ್ಕ್ರೀನ್‌ಶಾಟ್‌ನೊಂದಿಗೆ ಹಂಚಿಕೊಂಡಿದ್ದಾರೆ. 2004 ರಲ್ಲಿ ಸೌಂದರ್ಯ  ನಿಧನರಾದರೆ, ಆರತಿ ಅಗರ್ವಾಲ್ 2015 ರಲ್ಲಿ ನಿಧನರಾದರು ಆದರೆ ಸಿದ್ಧಾರ್ಥ್ ಇನ್ನೂ ಜೀವಂತವಾಗಿದ್ದಾರೆ. ಸೂಪರ್‌ಸ್ಟಾರ್ ಸಿದ್ಧಾರ್ಥ್ ಇದನ್ನು ಗುರುತಿಸಿ ಯೂಟ್ಯೂಬ್‌ಗೆ ರಿಪೋರ್ಟ್ ಮಾಡಿದ್ದಾರೆ. 

ಆದಾಗ್ಯೂ, "ಕ್ಷಮಿಸಿ ಈ ವೀಡಿಯೊದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ತೋರುತ್ತಿದೆ" ಎಂದು ಯೂಟ್ಯೂಬ್ ಉತ್ತರಿಸಿದೆ.

ಸಿದ್ಧಾರ್ಥ್ ಈ ಬಗ್ಗೆ ಟ್ವೀಟ್ ಮಾಡಿ , “ಅನೇಕ ವರ್ಷಗಳ ಹಿಂದೆ ನಾನು ಸತ್ತಿದ್ದೇನೆ ಎಂದ ಈ ವೀಡಿಯೊದ ಬಗ್ಗೆ ನಾನು ಯೂಟ್ಯೂಬ್‌ಗೆ ರಿಪೋರ್ಟ್ ಮಾಡಿದ್ದೇನೆ. ಅದಕ್ಕೆ ಅವರು  “ಕ್ಷಮಿಸಿ ಈ ವೀಡಿಯೊದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ತೋರುತ್ತದೆ” ಎಂದು ಅಚ್ಚರಿದಾಯಕವಾಗಿ ಉತ್ತರಿಸಿದ್ದಾರೆ ada paavi ” ಎಂದಿದ್ದಾರೆ.

ಸಿದ್ಧಾರ್ಥ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಅವರು ಎಂದಿಗೂ ಧ್ವನಿ ಎತ್ತಲು ಹಿಂಜರಿಯುವುದಿಲ್ಲ, ಈ ವರ್ಷದ ಆರಂಭದಲ್ಲಿ, ಕೊರೋನಾವೈರಸ್ ಎರಡನೇ ಅಲೆ ಸಮಯದಲ್ಲಿ, ಅವರು ದೇಶದಲ್ಲಿ ಕೊರೋನಾ ಲಸಿಕೆಗಳ ಕೊರತೆಯನ್ನು ಪ್ರಶ್ನಿಸಿ ಟ್ವಿಟ್ಟರ್ ನಲ್ಲಿ ಬರೆದಿದ್ದರು.ಸರಣಿ ಟ್ವೀಟ್‌ಗಳಲ್ಲಿ, ತಮಿಳು ನಟ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಅವರು ಎರಡನೇ ಅಲೆಯನ್ನು ನಿಭಾಯಿಸುವುದರ ರೀತಿಗೆ ಟೀಕಿಸಿದರು ಮತ್ತು ನಮ್ಮ ಆರೋಗ್ಯ ಮೂಲಸೌಕರ್ಯವು ತೀರಾ ಹದಗೆಟ್ಟಿದೆಎಂದು ಪ್ರತಿಪಾದಿಸಿದರು.

ಸಿದ್ಧಾರ್ಥ್ ಕೊನೆಯ ಬಾರಿಗೆ 2019 ರ ಅರುವಂ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಮಹಾ ಸಮುದ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಅವರು ಇಂಡಿಯನ್ 2, ಟಕ್ಕರ್, ನವರಸ ಮತ್ತು ಶೈತಾನ್ ಕಾ ಬಚ್ಚಾ ಚಿತ್ರಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com