'ಆದ್ದರಿಂದ' ಚಿತ್ರೀಕರಣ ಪೂರ್ಣಗೊಂಡ ನಂತರ ಗಾಳಿಪಟ-2 ಸಿನಿಮಾ ಶೂಟಿಂಗ್ ಆರಂಭ

ನಿರ್ದೇಶಕ ಯೋಗರಾಜ ಭಟ್ ಸದ್ಯ ಆದ್ದರಿಂದ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಬಾಕಿ ಉಳಿದಿರುವ ಗಾಳಿಪಟ-2 ಸಿನಿಮಾ ಶೂಟಿಂಗ್ ಕಡೆ ಗಮನ ಹರಿಸಿದ್ದಾರೆ. 
ಯೋಗರಾಜ್ ಭಟ್
ಯೋಗರಾಜ್ ಭಟ್
Updated on

ನಿರ್ದೇಶಕ ಯೋಗರಾಜ ಭಟ್ ಸದ್ಯ ಆದ್ದರಿಂದ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಬಾಕಿ ಉಳಿದಿರುವ ಗಾಳಿಪಟ-2 ಸಿನಿಮಾ ಶೂಟಿಂಗ್ ಕಡೆ ಗಮನ ಹರಿಸಿದ್ದಾರೆ. 

ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ ಮತ್ತು ದಿವ್ಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಐದು ನಿರ್ದೇಶಕರ ಜೊತೆ ಕೆಲಸ ಮಾಡುತ್ತಿರುವುದು ಹೊಸ ಅನುಭವ, ನಿರ್ಮಾಪಕ ಚಂದನ್ ಗೌಡ ಅವರ ಜೊತೆ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ ಎಂದು ಯೋಗರಾಜ್ ಭಟ್ ತಿಳಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕರಾದ ಯೋಗರಾಜ್‌ ಭಟ್‌, ಜಯತೀರ್ಥ, ಶಶಾಂಕ್‌, ಕೆ. ಎಂ. ಚೈತನ್ಯ ಮತ್ತು ಪವನ್‌ ಕುಮಾರ್‌. ಈ ಐವರು ಘಟಾನುಘಟಿಗಳು ಈಗ ಜೊತೆಯಾಗಿ ಸಿನಿಮಾವೊಂದವನ್ನು ಮಾಡುತ್ತಿದ್ದು, ಅದಕ್ಕೆ 'ಆದ್ದರಿಂದ' ಎಂಬ ವಿಭಿನ್ನ ಟೈಟಲ್‌ ಇಡಲಾಗಿದೆ.

ಕಲಾವಿದರ ಡೇಟ್ಸ್ ಅನ್ವಯ ಶೀಘ್ರವೇ ಗಾಳಿಪಟ-2 ಸಿನಿಮಾ ಶೂಟಿಂಗ್ ಆರಂಭಿಸಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ ಗಾಳಿಪಟ 2 ಸಿನಿಮಾದಲ್ಲಿ ಗಣೇಶ್, ದಿಗಂತ್ ಮತ್ತು ಪವನ್ ಕುಮಾರ್ ಸೇರಿದಂತೆ ಹಲವರು ಮುಖ್ಯಭೂಮಿಕೆಯಲ್ಲಿದ್ದಾರೆ.

ಚಿತ್ರದ ಹಲವು ಭಾಗದ ಶೂಟಿಂಗ್ ಮುಗಿಸಿದ್ದು ಶೇ. 30ರಷ್ಟು ಬಾಕಿ ಉಳಿದಿದೆ ಎಂದು ಯೋಗರಾಜಭಟ್ ತಿಳಿಸಿದ್ದಾರೆ. ಇದರ ಜೊತೆಗೆ ಎಡಿಟಿಂಗ್ ಕೆಲಸವನ್ನು ಮಾಡುತ್ತಿದ್ದಾರೆ, ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಹೊರಬರುತ್ತಿರುವುದು ಸಂತಸದ ಸಂಗತಿ ಎಂದು ತಿಳಿಸಿದ್ದಾರೆ. 

ವಿದೇಶಿ ಸ್ಥಳಗಳಲ್ಲಿ ಚಿತ್ರೀಕರಿಸಲಾದ ಭಾಗಗಳು ಮನಸ್ಸಿಗೆ ಮುದ ನೀಡುತ್ತವೆ ಅದನ್ನು ಪ್ರೇಕ್ಷಕರ ಮುಂದಿಡಲು ನಾನು ಇನ್ನೂ ಹೆಚ್ಚು ಕಾಯಲು ಸಾಧ್ಯವಿಲ್ಲ. ಹಾಡುಗಳು ಅದ್ಭುತವಾಗಿದ್ದು, ನಾವು ಶೀಘ್ರದಲ್ಲೇ ಆಡಿಯೊವನ್ನು ಬಿಡುಗಡೆ ಮಾಡಲು ಯೋಜಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com