ಕೋವಿಡ್ ಎರಡನೇ ಲಾಕ್ ನಂತರ ಮೊಟ್ಟ ಮೊದಲ ಸಿನಿಮಾ ರಿಲೀಸ್: ಆಗಸ್ಟ್ 6ಕ್ಕೆ 'ಕಲಿವೀರ' ಬಿಡುಗಡೆ

ಕೋವಿಡ್ ಎರಡನೇ ಲಾಕ್ ಡೌನ್ ನಂತರ ಮೊಟ್ಟ ಮೊದಲ ಬಾರಿಗೆ ಆಗಸ್ಟ್ 6 ರಂದು ಕನ್ನಡ ಸಿನಿಮಾ ಕಲಿವೀರ ಬಿಡುಗಡೆಯಾಗುತ್ತಿದೆ.
ಕಲಿವೀರ ಸಿನಿಮಾ ಪೋಸ್ಟರ್
ಕಲಿವೀರ ಸಿನಿಮಾ ಪೋಸ್ಟರ್
Updated on

ಕೋವಿಡ್ ಎರಡನೇ ಲಾಕ್ ಡೌನ್ ನಂತರ ಮೊಟ್ಟ ಮೊದಲ ಬಾರಿಗೆ ಆಗಸ್ಟ್ 6 ರಂದು ಕನ್ನಡ ಸಿನಿಮಾ ಕಲಿವೀರ ಬಿಡುಗಡೆಯಾಗುತ್ತಿದೆ.

2018 ರಲ್ಲಿ ಬಿಡುಗಡೆಯಾಗಿದ್ದ ಕನ್ನಡ ದೇಶದೊಳ್ ಸಿನಿಮಾ ನಿರ್ದೇಶಕ ಅವಿ ಕಲಿವೀರ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಏಕಲವ್ಯ ಸಿನಿಮಾ ನಾಯಕನಾಗಿದ್ದು, ಇವರು ಉತ್ತರ ಕರ್ನಾಟಕದವರಾಗಿದ್ದಾರೆ. 

ಕಲರಿಯಪಟ್ಟು, ಯೋಗ ಮತ್ತು ಮಾರ್ಷಲ್ ಆರ್ಟ್ಸ್ ನಲ್ಲಿ ಚ್ಯಾಂಪಿಯನ್ ಆಗಿದ್ದಾರೆ. ಕಲಿವೀರ ಆ್ಯಕ್ಷನ್ ಓರಿಯೆಂಟೆಡ್ ಸಿನಿಮಾವಾಗಿದೆ. ಬುಡಕಟ್ಟು ಜನಾಂಗಕ್ಕೆ ಸೇರಿದ ಯುವಕನ ಕಥೆ ಇದಾಗಿದೆ.

ಏಕಲವ್ಯ ಸಿನಿಮಾದಲ್ಲಿ ಕಲಿ ಎಂಬ ಪಾತ್ರದಲ್ಲಿ ನಟಿಸಿದ್ದು,ನೈಜವಾಗಿ ಸ್ಟಂಟ್ ಮಾಡಿದ್ದಾರೆ ಎಂದು ನಿರ್ದೇಶಕ ಅವಿ ತಿಳಿಸಿದ್ದಾರೆ. ಕಲಿವೀರ ಸಿನಿಮಾವು ಕಮರ್ಷಿಯಲ್ ಪ್ಯಾಕೇಜ್ ಆಗಿದ್ದು ಪ್ರೀತಿ, ಪ್ರಣಯ, ಭಯಾನಕ, ಸಸ್ಪೆನ್ಸ್ ಮತ್ತು ಸೇಡು ತೀರಿಸಿಕೊಳ್ಳುವ ಅಂಶಗಳನ್ನು ಹೊಂದಿದೆ ಮತ್ತು ಇದು ಐತಿಹಾಸಿಕ ಮತ್ತು ಪ್ರಸ್ತುತ ಘಟನೆಗಳನ್ನು ಆಧರಿಸಿದ ಸಿನಿಮಾವಾಗಿದೆ.

ಚಿತ್ರದ ಸಾಮರ್ಥ್ಯದ ಬಗ್ಗೆ ಅಪಾರ ವಿಶ್ವಾಸ ಹೊಂದಿರುವ ನಿರ್ದೇಶಕರು, ಹಿಂದಿ ಡಬ್ಬಿಂಗ್ ಕುರಿತಂತೆ ಮಾತುಕತೆ ನಡೆಸಿದ್ದಾರೆ. ಸಿನಿಮಾ ಟೀಸರ್ ಗೆ ಬಂದಿರುವ ಉತ್ತಮ ಪ್ರತಿಕ್ರಿಯೆ ಅವರ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

ಕಲಿವೀರದಲ್ಲಿ ಪಾವನ ಗೌಡ ಮತ್ತು ಚಿರಶ್ರೀ ಅಂಚನ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ತಬಲಾ ನಾಣಿ, ಟಿಎಸ್ ನಾಗಾಭರಣ, ಡ್ಯಾನಿ ಕುಟ್ಟಪ್ಪ, ಅನಿತಾ ಭಟ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ- ಜ್ಯೋತಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ- ವಿ ಮನೋಹರ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com