ಜೋಜು ಜಾರ್ಜ್ ನಟನೆಯ ಮಲಯಾಳಂ ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಮಾಡಲು ನಿರ್ಧರಿಸಲಾಗಿದೆ.
ಪೋಸ್ಚರ್ ರಿಲೀಸ್ ಆಗಿದ್ದು ನಟರಾದ ಮೋಹನ್ ಲಾಲ್, ರಕ್ಷಿತ್ ಶೆಟ್ಟಿ, ವಿಜಯ್ ಸೇತುಪತಿ ಮತ್ತು ಭರತ್ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಶೇರ್ ಮಾಡಿದ್ದಾರೆ.
ಸನೀಫ್ ಕೆ ಪೀಸ್ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಥ್ರಿಲ್ಲರ್ ಕಥಾ ವಸ್ತು ಹೊಂದಿದೆ. ಸ್ಕ್ರಿಪ್ಟ್ ಡಾಕ್ಟರ್ ಬ್ಯಾನರ್ ಅಡಿ ದಯಾಪರನ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾವು ಕಾರ್ಲೋಸ್ ಎಂಬ ಆನ್‌ಲೈನ್ ಡೆಲಿವರಿ ಪಾಲುದಾರನ ಜೀವನ ಮತ್ತು ಅವನ ಸುತ್ತ ನಡೆಯುತ್ತಿರುವ ಘಟನೆಗಳ ಬಗ್ಗೆ ಇದ್ದು, ಚಿತ್ರವು ಹೈಪರ್ಲಿಂಕ್ ನಿರೂಪಣೆಯನ್ನು ಹೊಂದಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಜೋಜು ಜಾರ್ಜ್ ಜೊತೆ ಶಾಲೂ ರಹೀಮ್, ರಮ್ಯ ನಂಬಸೀನ್, ಅನಿಲ್ ನೆಡುಮಾಂಗಡ್, ಅದಿತಿ ರವಿ, ಸಿದ್ದೀಕ್ ಮತ್ತು ಆಶಾ ಶರತ್ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿದ್ದಾರೆ.
ನಿರ್ಮಾಣದ ನಂತರದ ಕಾರ್ಯಗಳು ಪ್ರಗತಿಯಲ್ಲಿರುವ ಈ ಚಿತ್ರದಲ್ಲಿ ಪೌಲಿ ವಿಲ್ಸನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಇದನ್ನು ತೋಡುಪುಳ, ಎರ್ನಾಕುಲಂ ಮತ್ತು ಕೊಟ್ಟಾಯಂನಲ್ಲಿ 75 ದಿನಗಳಲ್ಲಿ ಮೂರು ಶೆಡ್ಯೂಲ್ ನಲ್ಲಿ ಶೂಟಿಂಗ್ ನಡೆಸಲಾಗಿದೆ.
ಜನಿಫರ್ ಸನಾಲ್ ಮತ್ತು ರಮೇಶ್ ಗಿರಿಜಾ ಅವರ ಸಂಭಾಷಣೆಗಳೊಂದಿಗೆ ಸಂಫೀರ್ ಚಿತ್ರ ನಿರ್ದೇಶಿಸಿದ್ದಾರೆ. ಜುಬೈರ್ ಮುಹಮ್ಮದ್ ಅವರು ವಿನಾಯಕ್ ಶಸಿಕುಮಾರ್, ಅನ್ವರ್ ಅಲಿ, ಮತ್ತು ಸಂಫೀರ್ ಅವರ ಸಾಹಿತ್ಯದಿಂದ ಸಂಗೀತ ಸಂಯೋಜಿಸಿದ್ದಾರೆ.
Advertisement