'ಡೆಡ್ಲಿ-3' ಮೂಲಕ ನಾಯಕ ನಟನಾಗಿ ಸ್ಯಾಂಡಲ್ ವುಡ್ ಗೆ ಎಂಆರ್ ದೀಕ್ಷಿತ್ ಎಂಟ್ರಿ!
ಎಂಆರ್ ದೀಕ್ಷಿತ್ ರವಿ ಶ್ರೀವತ್ಸ ಅವರ ಡೆಡ್ಲಿ-3 ಮೂಲಕ ಸ್ಯಾಂಡಲ್ ವುಡ್ ಗೆ ನಾಯಕ ನಟನಾಗಿ ಪರಿಚಯವಾಗಲಿದ್ದಾರೆ. ಮೇ.31 ರಂದು ಸ್ವತಃ ನಿರ್ದೇಶಕ ರವಿ ಶ್ರೀವತ್ಸ ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿ, ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ನ್ನೂ ಬಿಡುಗಡೆ ಮಾಡಿದ್ದರು.
ನಟ ಆದಿತ್ಯ ಅವರೊಂದಿಗೆ ರವಿ ಶ್ರೀವತ್ಸ ಡೆಡ್ಲಿ ಸೋಮಾ ಸರಣಿಯನ್ನು ನಿರ್ದೇಶಿಸಿದ್ದರು.ಈಗ ಹೊಸ ನಾಯಕ ನಟನೊಂದಿಗೆ ಸರಣಿಯ ಮೂರನೇ ಭಾಗವನ್ನು ನಿರ್ದೇಶಿಸಲಿದ್ದಾರೆ.
ಇದಕ್ಕೂ ಮುನ್ನ ದೀಕ್ಷಿತ್ ಗೆ ರವಿ ಶ್ರೀವತ್ಸಾ ಎಂಆರ್ ಎಂಬ ಸಿನಿಮಾವನ್ನು ನಿರ್ದೇಶಿಸುವ ಯೋಜನೆ ಹೊಂದಿದ್ದರು. ಇದು ಮುತ್ತಪ್ಪ ರೈ ಅವರ ಜೀವನಾಧಾರಿತ ಕಥೆ ಹೊಂದಿದ ಸಿನಿಮಾ ಆಗಿತ್ತು. ಆದರೆ ಹಲವಾರು ವಿವಾದಗಳ ಕಾರಣದಿಂದಾಗಿ ಆ ಸಿನಿಮಾದ ಯೋಜನೆ ಚಿತ್ರೀಕರಣಕ್ಕೂ ಮುನ್ನವೇ ಸ್ಥಗಿತಗೊಂಡಿತು.
ಈ ಹಿನ್ನೆಲೆಯಲ್ಲಿ ಡೆಡ್ಲಿ ಸರಣಿಯ ಮೂಲಕ ದೀಕ್ಷಿತ್ ನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಲು ರವಿ ಶ್ರೀವತ್ಸ ಯೋಜನೆ ಹೊಂದಿದ್ದು, ಅಂಡರ್ ವರ್ಲ್ಡ್, ಪ್ರೀತಿ ಹಾಗೂ ಕೌಟುಂಬಿಕ ಕಥಾ ಹಂದರ ಹೊಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ