ಕನ್ನಡದ ಹಿರಿಯ ನಟಿ ಸುರೇಖಾ ನಿಧನ

ವರನಟ ಡಾ. ರಾಜ್‌ಕುಮಾರ್ ಜತೆ "ತ್ರಿಮೂರ್ತಿ"ಯಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟಿ ಸುರೇಖಾ (66) ಹೃದಯಾಘಾತದಿಂದ ನಿಧನರಾದರು.
ಸುರೇಖಾ
ಸುರೇಖಾ
Updated on

ವರನಟ ಡಾ. ರಾಜ್‌ಕುಮಾರ್ ಜತೆ "ತ್ರಿಮೂರ್ತಿ"ಯಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟಿ ಸುರೇಖಾ (66) ಹೃದಯಾಘಾತದಿಂದ ನಿಧನರಾದರು.

160ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಸುರೇಖಾ ಬೆಂಗಳೂರು ನಗರದಲ್ಲಿ ನಿಧನರಾದರು. ಮಣ್ಣಿನ ಮಕ್ಕಳು, ಸಂಭ್ರಮ, ಕಿಂಗ್, ಶಂಕರ್ ಸುಂದರ್, ಆಲೆಮನೆ, ಬಿಳಿಗಿರಿಯ ಬನದಲ್ಲಿ ಚಿತ್ರಗಳಲ್ಲಿ ರಾಜ್‌ಕುಮಾರ್ ಜತೆ ನಟಿಸಿದ್ದಾರೆ.

ನಟಿ ಸೆನ್ಸಾರ್ ಬೋರ್ಡ್ ಸದಸ್ಯೆ ಹಾಗೂ ಸ್ಟೇಟ್ ಅವಾರ್ಡ್ ಕಮಿಟಿಯ ಸದಸ್ಯೆಯಾಗಿದ್ದರು

ಸುರೇಖಾ ಅವರಿಗೆ ವಿವಾಹವಾಗಿರಲಿಲ್ಲ, ಸೋದರಿ ಶಾರದಾ ಹಾಗೂ ಪ್ರೇಮಾ ಅವರನ್ನು ಅಗಲಿರುವ ನಟಿಯ ಅಂತ್ಯ ಸಂಸ್ಕಾರ ಇಂದು ಬನಶಂಕರಿ ಚಿತಾಗಾರದಲ್ಲಿ ನೆರವೇರಲಿದೆ ಎಂದು ಮೂಲಗಳು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com