'ಹಾಸ್ಯ ಪ್ರಧಾನ' ಸಿನಿಮಾ ನಿರ್ದೇಶನಕ್ಕೆ ಹೇಮಂತ್ ಹೆಗಡೆ ರೆಡಿ!
ಹೌಸ್ ಫುಲ್ ಮತ್ತು ನಿಂಬೆಹುಳಿ ನಿರ್ದೇಶಕ ಹೇಮಂತ್ ಹೆಗಡೆ ಮತ್ತೊಂದು ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ.
ಸಾಮಾಜಿಕ ಪಿಡುಗು ಕುರಿತಾದ ಮನರಂಜನಾತ್ಮಕ ಚಿತ್ರ ನಿರ್ದೇಶನಕ್ಕೆ ಹೇಮಂತ್ ಹೆಗಡೆ ಸಿದ್ದರಾಗುತ್ತಿದ್ದಾರೆ, ಅನ್ವಿತಾ ಆರ್ಟ್ಯ್ ಬ್ಯಾನರ್ ಅಡಿಯಲ್ಲಿ ಮೂವರು ಎನ್ ಆರ್ ಐಗಳು ಸಿನಿಮಾ ನಿರ್ಮಿಸುತ್ತಿದ್ದಾರೆ.
ಇನ್ನೂ ಹೆಸರಿಡದ ಸಿನಿಮಾ ಕಥೆಗಾಗಿ ನಿರ್ದೇಶಕರು ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮಲೆನಾಡು ಭಾಗದ ಕಥೆ ಹೆಣೆಯುತ್ತಿದ್ದು ಜೂನ್ 23 ರಂದು ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ.
ಸಿನಿಮಾಗೆ ಕಥೆ ಬರೆಯುವುದರ ಜೊತೆಗೆ ಕಾಮಿಡಿ ಸಿನಿಮಾದ ಹೀರೋ ಪಾತ್ರದಲ್ಲಿ ಹೇಮಂತ್ ನಟಿಸಲಿದ್ದಾರೆ. ಇವರ ಜೊತೆಗೆ ಪದ್ಮಜಾ ರಾವ್, ರಮೇಶ್ ಭಟ್ ಹಾಗೂ ಶರತ್ ಲೋಹಿತಾಶ್ವ, ಪ್ರಧಾನ ಭೂಮಿಕೆಯಲ್ಲಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ಲೋಪಮುದ್ರ ರಾವತ್ ಸಿನಿಮಾದ ನಾಯಕಿಯಾಗಿದ್ದಾರೆ. ಸದ್ಯ ಅವರು ಕತ್ರೋನ್ ಕಿ ಕಿಲಾಡಿ ಮತ್ತು ವೆಬ್ ಸಿರೀಸ್ ನಲ್ಲಿ ಬ್ಯುಸಿಯಾಗಿದ್ದಾರೆ. ನನ್ನ ಹಿಂದಿ ಸಿನಿಮಾ ಬ್ಲಡ್ ಸ್ಟೋರಿಯಲ್ಲಿ ಲೋಪಮುದ್ರ ಜೊತೆಯಾಗಿದ್ದಾರೆ, ಆದರೆ ಆ ಸಿನಿಮಾದ ಚಿತ್ರೀಕರಣ ಅರ್ಧದಲ್ಲೆ ನಿಂತಿತು, ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ, ಹೀಗಾಗಿ ಸಿನಿಮಾದಲ್ಲಿ ಅವರನ್ನು ಕರೆತರಲು ಯತ್ನಿಸುತ್ತಿದ್ದೇನೆ, ಸದ್ಯ ಅವರು ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ನಿರ್ದೇಶಕರು ತಂತ್ರಜ್ಞರನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದಾರೆ, ಮುಂಬೈನ ಕೃಷ್ಣ ಭಂಜನ್ ಈ ಚಿತ್ರದಲ್ಲಿ ಡಿಒಪಿ ಆಗಿ ಪಾದಾರ್ಪಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಕೃಷ್ಣ ಭಂಜನ್ ಮುಂಬೈನಲ್ಲಿ ನೆಲೆಸಿದ ಕನ್ನಡಿಗರಾಗಿದ್ದಾರೆ. ಅವರು ಹೆಚ್ಚಾಗಿ ಜಾಹೀರಾತು ಮಾಡಿದ್ದಾರೆ ಎಂದು ಹೇಮಂತ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ