ನೊಂದ ಮನ ತಣಿಸಲು ಬರುತ್ತಿದೆ 'ಭರವಸೆಯ ಬದುಕು': ಮಾನಸಿಕ ಆರೋಗ್ಯಕ್ಕೆ ಹಾಡಿನ 'ಟಾನಿಕ್'!

ಪ್ರಪಂಚಾದ್ಯಂತ ಕೋವಿಡ್ ಸಾವು ನೋವುಗಳಿಂದಾಗಿ ಎಲ್ಲರ ಮನಸು ನೊಂದು ಹೋಗಿದೆ. ಕೋವಿಡ್‌ನಿಂದಾಗಿ ಬರೀ ಸಾವು-ನೋವಿನ ವಿಚಾರವೇ ತುಂಬಿ ಹೋಗಿದೆ.
ಭರವಸೆಯ ಬದುಕು ತಂಡ
ಭರವಸೆಯ ಬದುಕು ತಂಡ
Updated on

ಪ್ರಪಂಚಾದ್ಯಂತ ಕೋವಿಡ್ ಸಾವು ನೋವುಗಳಿಂದಾಗಿ ಎಲ್ಲರ ಮನಸು ನೊಂದು ಹೋಗಿದೆ. ಕೋವಿಡ್‌ನಿಂದಾಗಿ ಬರೀ ಸಾವು-ನೋವಿನ ವಿಚಾರವೇ ತುಂಬಿ ಹೋಗಿದೆ. 

ಇಂತಹ ಸಮಯದಲ್ಲಿ ಜನರಲ್ಲಿ ಸಕಾರಾತ್ಮಕತೆ ತುಂಬುವ ನಿಟ್ಟಿನಲ್ಲಿ ಹಾಡೊಂದನ್ನು ಮಾಡಿದ್ದಾರೆ 'ಫಾರ್ ರಿಜಿಸ್ಟ್ರೇಷನ್' ಸಿನಿಮಾ ನಿರ್ದೇಶಕ ನವೀನ್ ದ್ವಾರಕನಾಥ್‌. 'ಸಾಕು ಇನ್ನು ಸಾಕು ಬರಿ ದೂಷಣೆಯ ನಿಲ್ಲಿಸಿರಿ ಸಾಕು...' ಎಂಬ ಹಾಡಿನ ಮೂಲಕ ಜನಸಾಮಾನ್ಯರಲ್ಲಿ ಭರವಸೆಯನ್ನು ಮೂಡಿಸಲು ಹೊರಟಿದ್ದಾರೆ.

ತಮ್ಮ ಆಲಾಪ್ ಕ್ರಿಯೇಷನ್ಸ್ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ 'ಭರವಸೆಯ ಬದುಕು' ಎಂಬ ಈ ವಿಡಿಯೋ ಆಲ್ಬಂ ಅನ್ನು ಅವರು ಹೊರತಂದಿದ್ದಾರೆ. ನವೀನ್ ನಿರ್ದೇಶನವಿರುವ ಈ ಹಾಡಿಗೆ ಚಂದನವನದ ಹಾಗೂ ರಂಗಭೂಮಿ ಕಲಾವಿದರು ಸಾಥ್ ನೀಡಿದ್ದಾರೆ. ರಘು ದೀಕ್ಷಿತ್ ಮತ್ತು ವಾರಿಜಾ ಶ್ರೀ ಹಾಡಿಗೆ ದನಿಯಾಗಿದ್ದಾರೆ. 

ಜೂ. 9ರಂದು ಬುಧವಾರ ಸಂಜೆ 5 ಗಂಟೆಗೆ ಈ ಹಾಡು ಬಿಡುಗಡೆಯಾಗಲಿದ್ದು, ಈ ಹಾಡಿನಲ್ಲಿ ಅನಿರುದ್ಧ ಜತ್ಕರ್, ಚಂದನ್ ಶರ್ಮಾ, ಪೃಥ್ವಿ ಅಂಬರ್, ಸಿಂಪಲ್ ಸುನಿ, ವಸಿಷ್ಠ ಸಿಂಹ, ಸೋನು ಗೌಡ, ನಾಗೇಂದ್ರ ಪ್ರಸಾದ್, ಪಿ.ಡಿ. ಸತೀಶ್ ಚಂದ್ರ, ಕೃಷಿ ತಾಪಂಡ, ಹರ್ಷಿಕಾ ಪೂಣಚ್ಚ, ರಂಜನಿ ರಾಘವನ್, ರಘು ರಾಮನಕೊಪ್ಪ, ರೆಮೋ, ಜಯರಾಮ್ ಕಾರ್ತಿಕ್, ಕಿಶನ್ ಬೆಳಗಲಿ, ನವೀನ್ ಶಂಕರ್, ಮಯೂರ ರಾಘವೇಂದ್ರ, ಆರ್.ಜೆ. ಸೌಜನ್ಯ, ವರ್ಷಿಣಿ ಜಾನಕಿರಾಮ್, ಆರ್. ಅಭಿಲಾಷ್, ಯಶ್ ಶೆಟ್ಟಿ, ತ್ರಿವೇಣಿ ರಾವ್‌
ಕಾಣಿಸಿಕೊಂಡಿದ್ದಾರೆ.

'ಅದೆಷ್ಟೋ ಮನಸ್ಸುಗಳು ನಕಾರಾತ್ಮಕ ಆಲೋಚನೆಯಲ್ಲಿ ಭರವಸೆಯನ್ನು ಕಳೆದುಕೊಂಡಿದ್ದು, ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದಾರೆ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವು ಹದೆಗೆಟ್ಟಿರುವುದರಿಂದ ಜನರಲ್ಲಿನ ಆತ್ಮ ವಿಶ್ವಾಸ ಕುಂದುತ್ತಿದೆ. ಈ ನಿಟ್ಟಿನಲ್ಲಿ ಶ್ರೀಸಾಮಾನ್ಯರಲ್ಲಿ ಪಾಸಿಟಿವ್ ಆಲೋಚನೆ ಬೆಳೆಸಲು, ಆತ್ಮ ವಿಶ್ವಾಸ ತುಂಬಲು ಹಾಗೂ ಭರವಸೆ ಮೂಡಿಸಲೆಂದೇ ಈ ಗೀತೆಯನ್ನು ನಿರ್ದೇಶಿಸಿದ್ದೇನೆ' ಎನ್ನುತ್ತಾರೆ ನಿರ್ದೇಶಕ ನವೀನ್ ದ್ವಾರಕನಾಥ್

ಎಲ್ಲಾ ಸುರಕ್ಷತಾ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಹಾಡಿನ ರೆಕಾರ್ಡಿಂಗ್ ಮಾಡಲಾಯಿತು.  ಟ್ರ್ಯಾಕ್ ಮಿಕ್ಸಿಂಗ್ ಅನ್ನು ನಮ್ಮ ಸಂಗೀತ ತಂಡವು ಮಾಡಿದೆ ಎಂದು ನವೀನ್ ತಿಳಿಸಿದ್ದಾರೆ. ಈ ಪ್ರಾಜೆಕ್ಟ್ ತಯಾರಿಸಲು ತಮ್ಮ ಆತ್ಮೀಯ ಸ್ನೇಹಿತರಾದ ಹರೀಶ್ ಆರ್ ಕೆ ಮತ್ತು ಸಿದ್ದಾರ್ಥ್ ಕಾಮತ್ ಕೈಜೋಡಿಸಿದ್ದಾಗಿ ಪಾರ್ Regn ನಿರ್ದೇಶಕ ನವೀನ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com