ನಟ ಸಂಚಾರಿ ವಿಜಯ್ ಹೆಸರಿನಲ್ಲಿ ಗಿಣಿ ದತ್ತು ಪಡೆದ ಗೆಳೆಯ ಚಂದ್ರಚೂಡ್

ರಸ್ತೆ ಅಪಘಾತದ ಕಾರಣ ಅಕಾಲದಲ್ಲಿಯೇ ಅಭಿಮಾನಿಗಳನ್ನು ಅಗಲಿದ ರಾಷ್ಟ್ರ ಪ್ರಶಸ್ತಿ ವಿಜೇತ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್​ ಹೆಸರಿನಲ್ಲಿ ಪತ್ರಕರ್ತ ಹಾಗೂ ಕನ್ನಡ ಬಿಗ್​ ಬಾಸ್​ ಸೀಸನ್ 8ರ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್​ ಗಿಣಿಯನ್ನು ದತ್ತು ಪಡೆದಿದ್ದಾರೆ.
ಸಂಚಾರಿ ವಿಜಯ್, ಚಂದ್ರಚೂಡ್

ಸಂಚಾರಿ ವಿಜಯ್ ಜೊತೆಗಿನ 10 ವರ್ಷಗಳ ಸ್ನೇಹದ ಗುರುತಾಗಿ ಹಾಗೂ ಅವರ ನೆನಪಿನಲ್ಲಿ ಚಕ್ರವರ್ತಿ ಚಂದ್ರಚೂಡ್​ ಮೃಗಾಲಯದಿಂದ ಗಿಳಿಯನ್ನು ದತ್ತು ಪಡೆದಿದ್ದಾರೆ. 

ದಾವಣಗೆರೆಯ ಇಂದಿರಾ ಪ್ರಿಯದರ್ಶಿನಿ ಪ್ರಾಣಿಸಂಗ್ರಹಾಲಯದ ಗಿಣಿಯನ್ನು ದತ್ತು ಪಡೆದ ಚಂದ್ರಚೂಡ್, 1 ವರ್ಷಗಳ ಕಾಲ ಅದರ ಆರೈಕೆ ನಡೆಸಲಿದ್ದಾರೆ.

ತಾವು ಗಿಣಿಯನ್ನು ದತತ್ತು ಪಡೆದ ಬಗ್ಗೆ ಇನ್ ಸ್ಟಾಗ್ರಾಂ ನಲ್ಲಿ ಬರೆದುಕೊಂಡಿರುವ ಚಂದ್ರಚೂಡ್ "ಸಂಚಾರಿ ವಿಜಯ್ ನಿನಗೆ ಗಿಣಿ ಇಷ್ಟ, ಅದಕ್ಕೇ ನಿನ್ನ ಹೆಸರಲ್ಲಿ ಒಂದು ತಕೊಂಡಿದ್ದೇನೆ" ಎಂದಿದ್ದಾರೆ.

ಕೆಲ ದಿನಗಳ ಹಿಂದೆ ನಟ ದರ್ಶನ್ ಮೃಗಾಲಯದಲ್ಲಿರುವ ಪ್ರಾಣಿ, ಪಕ್ಷಿಗಳನ್ನು ದತ್ತು ಪಡೆಯುವ ಮೂಲಕ ನೆರವಾಗುವಂತೆ ಅವರ ಅಭಿಮಾನಿಗಳಿಗೆ ಕರೆ ನೀಡಿದ್ದನ್ನು ನಾವಿಲ್ಲಿ ನೆನೆಯಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com