ಡಿ. ಸತ್ಯ ಪ್ರಕಾಶ್ 'ಮ್ಯಾನ್ ಆಫ್ ದಿ ಮ್ಯಾಚ್'ಗೆ ಅಪ್ಪು ಬಂಡವಾಳ!

ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್ "ರಾಮ ರಾಮ ರೇ" ನಿರ್ದೇಶಕ ಡಿ ಸತ್ಯ ಪ್ರಕಾಶ್ ಅವರ ಮುಂದಿನ ಸಿನಿಮಾ "ಮ್ಯಾನ್ ಆಫ್ ದಿ ಮ್ಯಾಚ್" ಗೆ ಬಂಡವಾಳ ಹೂಡಲು ಮುಂದಾಗಿದೆ. ಚಿತ್ರವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಸತ್ಯ ಮತ್ತು ಮಯೂರ ಪಿಕ್ಚರ್ಸ್ ಸಹಯೋಗದಲ್ಲಿ ನಿರ್ಮಿಸಲಿದ್ದಾರೆ.
ನಿರ್ದೇಶಕ ಸತ್ಯ ಪ್ರಕಾಶ್ ಹಾಗೂ ಅಪ್ಪು
ನಿರ್ದೇಶಕ ಸತ್ಯ ಪ್ರಕಾಶ್ ಹಾಗೂ ಅಪ್ಪು
Updated on

ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್ "ರಾಮ ರಾಮ ರೇ" ನಿರ್ದೇಶಕ ಡಿ ಸತ್ಯ ಪ್ರಕಾಶ್ ಅವರ ಮುಂದಿನ ಸಿನಿಮಾ "ಮ್ಯಾನ್ ಆಫ್ ದಿ ಮ್ಯಾಚ್" ಗೆ ಬಂಡವಾಳ ಹೂಡಲು ಮುಂದಾಗಿದೆ. ಚಿತ್ರವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಸತ್ಯ ಮತ್ತು ಮಯೂರ ಪಿಕ್ಚರ್ಸ್ ಸಹಯೋಗದಲ್ಲಿ ನಿರ್ಮಿಸಲಿದ್ದಾರೆ.

ಮಾರ್ಚ್ 18 ರಂದು ಪ್ರಾರಂಭವಾದ ಈ ಸಿನಿಮಾ ಏಪ್ರಿಲ್‌ನಲ್ಲಿ ಸೆಟ್ಟೆರಿದ್ದರೂ ಲಾಕ್‌ಡೌನ್ ಕಾರಣ ಚಿತ್ರೀಕರಣ ವಿಳಂಬವಾಗಿದೆ. ವಿರಾಮದ ನಂತರ ಶೂಟಿಂಗ್ ಪುನರಾರಂಭಿಸಿದ ನಿರ್ದೇಶಕರು, ಇಡೀ ಚಿತ್ರವನ್ನು ಕಟ್ಟುವ ಕೆಲಸದಲ್ಲಿದ್ದಾರೆ.. ವಿಶೇಷವೆಂದರೆ, ಪುನೀತ್ ಒಂದೆರಡು ದಿನಗಳ ಹಿಂದೆ ಸೆಟ್‌ ಗೆ ಭೇಟಿ ನೀಡಿದ್ದರು ಮತ್ತು ಚಿತ್ರತಂಡಕ್ಕೆ ಗೆ ಶುಭ ಹಾರೈಸಿದರು.

"ನಾನು ಪುನೀತ್ ಅವರೊಂದಿಗೆ ಯೋಜನೆಯಲ್ಲಿ ಕೆಲಸ ಮಾಡಲು ಮಾತುಕತೆ ನಡೆಸುತ್ತಿದ್ದೆ ಮತ್ತು ಸುಮಾರು ಒಂದು ವರ್ಷದಿಂದ ಈ ಚರ್ಚೆ ನಡೆಯುತ್ತಿತ್ತು.ಆದಾಗ್ಯೂ, ಕೋವಿಡ್ ಕಾರಣ ಇದು ವಿಳಂಬವಾಗಿತ್ತು, ಯೋಜನೆಯನ್ನು ಮುಂದೂಡಲಾಯಿತು. ಮ್ಯಾನ್ ಆಫ್ ದಿ ಮ್ಯಾಚ್ ಕಥೆಯ ಕಲ್ಪನೆ ಬಂದಾಗ ನಾನು ಅದೊಂದು ಅನ್ವೇಷಿಸಲು ಉತ್ತಮ ವಿಷಯ ಎಂದು ಭಾವಿಸಿದೆ. ಮೊದಲ ಲಾಕ್‌ಡೌನ್ ಮುಗಿದಾಗ ನಾನು ಸಿನಿಮಾ ಬಗ್ಗೆ  ಚರ್ಚಿಸಲು ಪುನೀತ್‌ ಅವರೊಂದಿಗೆ ಸಂಪರ್ಕಿಸಿದೆ, ಮ್ಯಾನ್ ಆಫ್ ದಿ ಮ್ಯಾಚ್‌ನ ಕಥೆಯನ್ನು ಅವರೊಂದಿಗೆ ಹಂಚಿಕೊಂಡಿದ್ದೇನೆ. ಇದು ಅವರ ಗಮನ ಸೆಳೆದಿತ್ತು. ನಾನು ಚಿತ್ರದ ಒಂದೆರಡು ದೃಶ್ಯಗಳನ್ನು ಸಹ ಹಂಚಿಕೊಂಡಿದ್ದೇನೆ, ಅದು ಅವರಿಗೆ ಇನ್ನಷ್ಟು ರೋಮಾಂಚನ ಉಂಟು ಮಾಡಿತ್ತು  ಇದು ಸಾಕಷ್ಟು ತಾಜಾ ವಿಚಾರವಾಗಿದೆಎಂದು ಅವರು ಭಾವಿಸಿದರು. ಅವರು ಹಲವಾರು ಸಿನಿಮಾಗಳೊಂದಿಗೆ ಸಂಬಂಧ ಹೊಂದಿದ್ದರಿಂದ, ನಾನು ಈ ಚಿತ್ರವನ್ನು ತೆಗೆದುಕೊಳ್ಳಬೇಕೆಂದು ಅವರು ಸೂಚಿಸಿದರು ಮತ್ತು ಅವರು ಅದನ್ನು ಬೆಂಬಲಿಸುವುದಾಗಿ ಹೇಳಿದ್ದರು." ನಿರ್ದೇಶಕ ಸತ್ಯ ಹೇಳುತ್ತಾರೆ.

ಮ್ಯಾನ್ ಆಫ್ ದಿ ಮ್ಯಾಚ್‌ ಚಿತ್ರದ ಒನ್ ಲೈನರ್ ಸ್ಟೋರಿ ಬಗ್ಗೆ ಮಾತನಾಡಿದ ಸಮಯದಿಂದಲೂ ಪುನೀತ್ ಸತ್ಯ ಅವರೊಡನೆ ಇದ್ದಾರೆ ಎಂದು ನಿರ್ದೇಶಕರು ಹೇಳುತ್ತಾರೆ, ಮತ್ತು ಅವರ ಬೆಂಬಲವು ಚಲನಚಿತ್ರವನ್ನು ಒಂದೇ ಸಮಯದಲ್ಲಿ ಪೂರ್ಣಗೊಳಿಸಲು ಸಹಾಯ ಮಾಡಿತು. ವಿಶೇಷವೆಂದರೆ, ಇಡೀ ಚಿತ್ರವನ್ನು ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗಿದೆ. ಇಡೀ ಚಿತ್ರವನ್ನು ಒಂದೇ ಸೂರಿನಡಿ ಚಿತ್ರೀಕರಿಸುವುದು ಇದೇ ಮೊದಲು. ಯೋಗ್ಯವಾದ ಬಂಡವಾಳದೊಂದಿಗೆ ತಯಾರಾದ ಚಿತ್ರ ಹೆಚ್ಚು ಕಡಿಮೆ "ರಾಮ ರಾಮ ರೇ" ಸಿನಿ ಕಲಾವಿದರನ್ನು ಒಳಗೊಂಡಿದೆ. ಕನಿಷ್ಠ 120 ಕಲಾವಿದರು ಚಿತ್ರದ ಭಾಗವಾಗಿದ್ದು, ಸಾಕಷ್ಟು ಹೊಸ ಮುಖಗಳೂ ಇದ್ದಾರೆ.

“ಶೂಟಿಂಗ್ ಒಂದೇ ಸ್ಥಳದಲ್ಲಿ ನಡೆಯುತ್ತಿರುವುದರಿಂದ, ನಾವು ಅದನ್ನು ಏಕತಾನತೆ ಉಂತಾಗದಂತೆ ನೋಡಿಕೊಂಡೆವು. ಅಲ್ಲದೆ ವಿಭಿನ್ನ ಬ್ಯಾಕ್‌ಡ್ರಾಪ್‌ಗಳೊಂದಿಗೆ ಕೆಲಸ ಮಾಡಿದೆವು, ನಾವು ಸಹ ಲೈಟ್ಸ್ ಗಳೊಂದಿಗೆ ಆಡಿದ್ದೇವೆ”.

‘ಮ್ಯಾನ್ ಆಫ್ ದಿ ಮ್ಯಾಚ್’ ಎಂಬ ಪದವು ಸಾಮಾನ್ಯವಾಗಿ ಕ್ರಿಕೆಟ್ ಆಟದೊಂದಿಗೆ ಸಂಬಂಧ ಹೊಂದಿದ್ದರೆ, ಸತ್ಯ ಅವರ ಸಿನಿಮಾ ದೈನಂದಿನ ಜೀವನದ ಜತೆಗೆ ಸಂಪರ್ಕ ಹೊಂದಿದೆ."ಜೀವನವು ಒಂದು ಪಂದ್ಯವಾಗಿದೆ, ಮತ್ತು ನಾವು ಆಟಗಾರರು. ಒಬ್ಬ ವ್ಯಕ್ತಿಯು ಮೌಲ್ಯಗಳಿಲ್ಲದೆ ಆಟವನ್ನು ಆಡಬಹುದು, ಆದರೆ ಪಂದ್ಯಶ್ರೇಷ್ಠನಾಗಲು ಸಾಧ್ಯವಿಲ್ಲ. ಅದು ನನ್ನ ಸಿನಿಮಾದ ವಿಷಯವಾಗಿದೆ ”ಎಂದು ಸತ್ಯ ಹೇಳುತ್ತಾರೆ.

ನಟರಲ್ಲಿ ಕೆ ಜಯರಾಮ್, ಧರ್ಮಣ್ಣ ಕಡೂರು,  ನಟರಾಜ್ ಇತರರು ಇದ್ದಾರೆ. ಸಂಗೀತ ನಿರ್ದೇಶಕರಾದ ನೋಬಿನ್ ಪಾಲ್ ಮತ್ತು ವಾಸುಕಿ ವೈಭವ್ ಸಂಗೀತ, ಲವಿತ್ ಕುಮಾರ್ ಮತ್ತು ಮದನ್ ಕಟೋಕರ್ ಕ್ಯಾಮೆರಾ ನಿರ್ವಹಿಸಿದ್ದಾರೆ. ಚಿತ್ರದ ಎಡಿಟಿಂಗ್ ಬಿ ಎಸ್ ಕೆಂಪರಾಜು ಮಾಡಿದ್ದರೆ, ಕಲಾ ವಿಭಾಗವನ್ನು ವರದರಾಜ್ ಕಾಮತ್ ನಿರ್ವಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com