ರವಿಚಂದ್ರನ್
ರವಿಚಂದ್ರನ್

'ಕನ್ನಡಿಗ' ಸಿನಿಮಾ ಚಿತ್ರೀಕರಣ ಪ್ರಾರಂಭಿಸಲಿರುವ ರವಿಚಂದ್ರನ್

'ಕನ್ನಡಿಗ ಸಿನಿಮಾದ ಚಿತ್ರೀಕರಣದ ಮೂಲಕ ನಟ ರವಿಚಂದ್ರನ್ ಸಿನಿಮಾ ಚಿತ್ರೀಕರಣಗಳನ್ನು ಪ್ರಾರಂಭಿಸಲಿದ್ದಾರೆ. 
Published on

'ಕನ್ನಡಿಗ ಸಿನಿಮಾದ ಚಿತ್ರೀಕರಣದ ಮೂಲಕ ನಟ ರವಿಚಂದ್ರನ್ ಸಿನಿಮಾ ಚಿತ್ರೀಕರಣಗಳನ್ನು ಪ್ರಾರಂಭಿಸಲಿದ್ದಾರೆ. 

ಕನ್ನಡಿಗ ಸಿನಿಮಾ ಸ್ಥಳೀಯ ಸಂಸ್ಕೃತಿಯ ಕಥಾಹಂದರವನ್ನು ಹೊಂದಿರುವ ಸಿನಿಮಾ ಆಗಿದ್ದು, ಸೆನ್ಸಾರ್ ಸರ್ಟಿಫಿಕೇಟ್ ನ್ನೂ ಪಡೆದುಕೊಂಡಿದೆ. ಕೊನೆಯ ಹಾಡಿನ ಚಿತ್ರೀಕರಣವಷ್ಟೇ ಬಾಕಿ ಇದೆ. ಈ ಹಾಡನ್ನು ನಟ ಶಿವರಾಜ್ ಕುಮಾರ್ ಹಾಡಿದ್ದು, ಜಾನಪದ ಥೀಮ್ ನ್ನು ಹೊಂದಿದೆ ಹಾಗೂ ಎ.ಹರ್ಷ ನೃತ್ಯ ನಿರ್ದೇಶನ ಮಾಡಿದ್ದಾರೆ. 

ಬಿ.ಎಂ ಗಿರಿರಾಜ್ ನಿರ್ದೇಶನ, ಎನ್.ಎಸ್ ರಾಜ್ ಕುಮಾರ್ ಅವರ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬಂದಿದ್ದು, ಮೊದಲ ಲಾಕ್ ಡೌನ್ ನ ನಿರ್ಬಂಧಗಳು ಸಡಿಲಿಕೆಯಾದಾಗ ಪ್ರಾರಂಭದಲ್ಲಿ ಈ ಚಿತ್ರದ ಚಿತ್ರೀಕರಣ ಪ್ರಾರಂಭಗೊಂಡಿತ್ತು. ಈ ವಾರದಲ್ಲಿ ಹಾಡಿನ ಚಿತ್ರೀಕರಣವೂ ನಡೆಯಲಿದ್ದು, ಈ ಸಿನಿಮಾದಲ್ಲಿ ರವಿಚಂದ್ರನ್ ಗುಣಭದ್ರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಫ್ಲ್ಯಾಷ್‌ಬ್ಯಾಕ್ ಕಥೆಯಲ್ಲಿ ರವಿಚಂದ್ರನ್ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟಾಮ್ ಆಲ್ಟಾರ್ ಅವರ ಪುತ್ರ ಜೇಮೀ ಆಲ್ಟರ್ ನಟಿಸುತ್ತಿರುವ ಮೊದಲ ಚಿತ್ರವೂ ಇದಾಗಿದ್ದು, ರೆವರೆಂಡ್ ಫರ್ಡಿನಾಂಡ್ ಕಿಟಲ್ ಪಾತ್ರದಲ್ಲಿ ಇವರು ನಟಿಸಿದ್ದಾರೆ.

ಈ ನಟರೊಂದಿಗೆ ಕನ್ನಡಿಗ ಸಿನಿಮಾದಲ್ಲಿ ಪಾವನ, ರಾಕ್ ಲೈನ್ ವೆಂಕಟೇಶ್, ಬಾಲಾಜಿ ಮನೋಹರ್ ಅವರುಗಳು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿದ್ದು, ಜಿಎಸ್ ವಿ ಸೀತಾರಾಮ್ ಛಾಯಾಗ್ರಹಣ ಇದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಜವಾಬ್ದಾರಿಯನ್ನು ಗಿರಿರಾಜ್ ನಿರ್ವಹಿಸುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com