ಎಸ್‌.ಎಸ್‌.ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್' ಶೂಟಿಂಗ್ ಶೀಘ್ರವೇ ಮುಕ್ತಾಯ: ಹೊಸ ಪೋಸ್ಟರ್ ರಿಲೀಸ್

ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘ಆರ್‌ಆರ್‌ಆರ್‌’ (ರೈಸ್‌–ರೋರ್‌–ರಿವೋಲ್ಟ್‌) ಚಿತ್ರೀಕರಣ ಪುನರಾರಂಭಗೊಂಡ ಬೆನ್ನಲ್ಲೇ ಚಿತ್ರತಂಡ ಸಿಹಿ ಸುದ್ದಿಯನ್ನು ಕೊಟ್ಟಿದೆ.
ಆರ್ ಆರ್ ಆರ್ ಸಿನಿಮಾ ಪೋಸ್ಟರ್
ಆರ್ ಆರ್ ಆರ್ ಸಿನಿಮಾ ಪೋಸ್ಟರ್

ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘ಆರ್‌ಆರ್‌ಆರ್‌’ (ರೈಸ್‌–ರೋರ್‌–ರಿವೋಲ್ಟ್‌) ಚಿತ್ರೀಕರಣ ಪುನರಾರಂಭಗೊಂಡ ಬೆನ್ನಲ್ಲೇ ಚಿತ್ರತಂಡ ಸಿಹಿ ಸುದ್ದಿಯನ್ನು ಕೊಟ್ಟಿದೆ. ಚಿತ್ರತಂಡ ಮಂಗಳವಾರ ಹೊಸ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಚಿತ್ರೀಕರಣದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.

ಜೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಒಟ್ಟಿಗೆ ನಟಿಸುತ್ತಿರುವ 'ಆರ್‌ಆರ್‌ಆರ್‌' ಚಿತ್ರದ ಮೇಲೆ ಇಡೀ ಭಾರತೀಯ ಚಿತ್ರರಂಗವೇ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದೆ. ಬಾಹುಬಲಿ'ಯಂತಹ ಚಿತ್ರದ ಮೂಲಕ ವಿಶ್ವದ ಗಮನಸೆಳೆದ ನಿರ್ದೇಶಕ ರಾಜಮೌಳಿ ಅವರ ಈ ಮುಂದಿನ ಸಿನಿಮಾವು ಆರೇಳು ಭಾಷೆಗಳಲ್ಲಿ ತೆರೆಗೆ ಬರಲಿದೆ. ಸದ್ಯ ಒಂದು ಸಖತ್ ಆಗಿರುವ ಪೋಸ್ಟರ್ ಹಂಚಿಕೊಂಡಿರುವ 'ಆರ್‌ಆರ್‌ಆರ್' ಬಳಗವು, ಅದರ ಮೂಲಕ ಒಂದು ಗುಡ್ ನ್ಯೂಸ್ ಅನ್ನೂ ಸಹ ಸಿನಿಪ್ರಿಯರಿಗೆ ತಿಳಿಸಿದೆ.

ಬಿಡುಗಡೆಯಾಗಿರುವ ನೂತನ ಪೋಸ್ಟರ್‌ನಲ್ಲಿ ಜ್ಯೂನಿಯರ್‌ ಎನ್‌ಟಿಆರ್‌ ಹಾಗೂ ರಾಮ್‌ ಚರಣ್‌ ಬೈಕಿನಲ್ಲಿ ಸಂತಸದಿಂದ ತೆರಳುವ ದೃಶ್ಯವಾಗಿದೆ. ಎನ್‌ಟಿಆರ್‌ ಬೈಕ್‌ ರೈಡ್‌ ಮಾಡುತ್ತಿದ್ದರೆ, ರಾಮ್‌ ಚರಣ್‌ ಹಿಂದೆ ಕುಳಿತ್ತಿದ್ದಾರೆ. ಈ ಪೋಸ್ಟರ್‌ಗೆ ರಾಮ್‌ ಚರಣ್‌ ಮತ್ತು ಎನ್‌ಟಿಆರ್‌ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗಿದೆ.

ಪೋಸ್ಟರ್ ಜೊತೆಗೆ ಸಿನಿಮಾದ ಶೂಟಿಂಗ್‌ ಬಗ್ಗೆಯೂ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಎರಡು ಹಾಡುಗಳನ್ನು ಹೊರತುಪಡಿಸಿದ್ದಾರೆ ಸಿನಿಮಾದ ಚಿತ್ರೀಕರಣ ಮುಕ್ತಾಯದ ಹಂತದಲ್ಲಿದೆ. ರಾಮ್‌ ಚರಣ್‌ ಹಾಗೂ ಎನ್‌ಟಿಎರ್‌ ಈಗಾಗಲೇ ಎರಡು ಭಾಷೆಗಳ ಡಬ್ಬಿಂಗ್‌ ಕೆಲಸ ಮುಗಿಸಿದ್ದಾರೆ ಎಂದು ಚಿತ್ರತಂಡ ಹೇಳಿದೆ. 

ಡಿವಿವಿ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆಯು ನಿರ್ಮಿಸುತ್ತಿರುವ ಈ ಚಿತ್ರವು 1920ನೇ ಇಸವಿಯ ಆರಂಭದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕುಮರಾಂ ಭೀಮ್‌ ಅವರ ಜೀವನವನ್ನು ಆಧರಿಸಿದ ಕಥೆ. ಈ ಚಿತ್ರದಲ್ಲಿ ಚರಣ್ ರಾಮರಾಜು ಪಾತ್ರದಲ್ಲಿ, ಎನ್‌ಟಿಆರ್ ಜೂನಿಯರ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟರಾದ ಅಜಯ್ ದೇವ್‌ಗನ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಆರ್‌ಆರ್‌ಆರ್‌' ಸಿನಿಮಾಕ್ಕೆ ಬಹುತೇಕ ಶೂಟಿಂಗ್ ಮುಗಿದಿದ್ದು, ಎರಡು ಹಾಡುಗಳ ಶೂಟಿಂಗ್ ಮಾತ್ರ ಬ್ಯಾಲೆನ್ಸ್ ಇದೆ. ಅದರ ಜೊತೆಗೆ ಪೋಸ್ಟ್ ಪ್ರೊಡಕ್ಷನ್‌ ಕೆಲಸಗಳಿಗೂ ಕೂಡ ಚಾಲನೆ ನೀಡಿದ್ದಾರೆ ರಾಜಮೌಳಿ. ಈಗಾಗಲೇ ರಾಮ್‌ ಚರಣ್ ಮತ್ತು ಜೂ. ಎನ್‌ಟಿಅರ್ 2 ಭಾಷೆಗಳಿಗೆ ಡಬ್ಬಿಂಗ್ ಕೆಲಸವನ್ನು ಮುಗಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com