'ಗುರು-ಶಿಷ್ಯರು' ಸಿನಿಮಾ ಶೂಟಿಂಗ್ ಗೆ ಮರಳಿದ ಶರಣ್ ಮತ್ತು ನಿಶ್ವಿಕಾ ನಾಯ್ಡು!

ಕೋವಿಡ್-19 ಲಾಕ್ ಡೌನ್ ನಂತರ ಚಿತ್ರೋದ್ಯಮ ನಿಧಾನವಾಗಿ ಕೆಲಸ ಆರಂಭಿಸುತ್ತಿದೆ, ಗುರು-ಶಿಷ್ಯರು ಸಿನಿಮಾ ಶೂಟಿಂಗ್ ಕೂಡ ಪುನಾರಂಭವಾಗುತ್ತಿದೆ.  
ನಿಶ್ವಿಕಾ ನಾಯ್ಡು
ನಿಶ್ವಿಕಾ ನಾಯ್ಡು

ಕೋವಿಡ್-19 ಲಾಕ್ ಡೌನ್ ನಂತರ ಚಿತ್ರೋದ್ಯಮ ನಿಧಾನವಾಗಿ ಕೆಲಸ ಆರಂಭಿಸುತ್ತಿದೆ, ಗುರು-ಶಿಷ್ಯರು ಸಿನಿಮಾ ಶೂಟಿಂಗ್ ಕೂಡ ಪುನಾರಂಭವಾಗುತ್ತಿದೆ.  

ಬೆಂಗಳೂರಿನಲ್ಲಿ ಇಂದಿನಿಂದ ಆರಂಭವಾಗುತ್ತಿರುವ ಶೂಟಿಂಗ್ ನಲ್ಲಿ ನಟ ಶರಣ್ ಮತ್ತು ನಿಶ್ವಿಕಾ ನಾಯ್ಡು ಭಾಗವಹಿಸುತ್ತಿದ್ದಾರೆ. ಹಾಸ್ಯ ಪ್ರಧಾನ ಸಿನಿಮಾವನ್ನು ಜಡೇಶ.ಕೆ. ಹಂಪಿ ಅವರು ನಿರ್ದೇಶಿಸುತ್ತಿದ್ದಾರೆ.

ಜನವರಿಯಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಿತ್ತು. ಲಾಕ್ ಡೌನ್ ಗೂ ಮುಂಚೆ ಮಂಡ್ಯದಲ್ಲಿ ಕೆಲವು ಪ್ರಮುಖ ಸನ್ನಿವೇಶಗಳ ಶೂಟಿಂಗ್ ನಡೆಸಲಾಗಿತ್ತು. ಶರಣ್ ಸಿನಿಮಾದಲ್ಲಿ ಪಿಟಿ ಶಿಕ್ಷಕರಾಗಿ ಅಭಿನಯಿಸುತ್ತಿದ್ದಾರೆ. ಮೊದಲ ಬಾರಿಗೆ ನಿಶ್ವಿಕಾ ನಾಯ್ಡು ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸೆಟ್ ನಲ್ಲಿರುವ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ಹಾಕಿಸಿಕೊಂಡಿರುವದನ್ನು ಖಚಿತ ಪಡಿಸಿಕೊಳ್ಳಲಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ಮತ್ತು ಬೆಂಗಳೂರಿನ ಹೊರಗೆ ಮತ್ತಷ್ಟು ಭಾಗದ ಶೂಟಿಂಗ್ ನಡೆಸಲು ನಿರ್ಧರಿಸಲಾಗಿದೆ ಎಂದು ಗುರು ಶಿಷ್ಯರು ತಂಡದ ಕ್ರಿಯೇಟಿವ್ ಹೆಡ್ ತರುಣ್ ಸುಧೀರ್ ತಿಳಿಸಿದ್ದಾರೆ.

ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಬೇಕಾಗಿರುವುದರಿಂದ ಚಿತ್ರತಂಡವು ಸರ್ಕಾರದಿಂದ ಮತ್ತಷ್ಟು ರಿಲ್ಯಾಕ್ಷೇಸನ್ ಗಾಗಿ ಕಾಯುತ್ತಿದೆ. ಗುರು ಶಿಷ್ಯರು ಅವರನ್ನು ಶರಣ್ ಅವರ ಪ್ರೊಡಕ್ಷನ್ ಹೌಸ್, ಲಡ್ಡು ಸಿನೆಮಾಸ್ ನಿರ್ಮಾಣ ಮಾಡುತ್ತಿದೆ. ಕ್ರಿಯೇಟಿವ್ ಹೆಡ್ ಆಗಿರುವ ತರುಣ್ ಕಿಶೋರ್ ನಿರ್ಮಾಣದಲ್ಲಿಯೂ ಪಾಲುದಾರರಾಗಿದ್ದಾರೆ. ಸಿನಿಮಾದಲ್ಲಿ ದತ್ತಣ್ಣ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ, ಸಿನಿಮಾಗೆ ಅಜನೀಶ್ ಬಿ ಲೋಕನಾಥ್ ಸಂಗೀತ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com