ಸುದೀಪ್
ಸಿನಿಮಾ ಸುದ್ದಿ
ಚಾಮರಾಜನಗರ ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಕ್ಕೆ ನಟ ಸುದೀಪ್ ಸಹಾಯಹಸ್ತ
ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಖ್ಯಾತಿಯ ಕಿಚ್ಚ ಸುದೀಪ್ ಇತ್ತೀಚೆಗೆ ಸಂಭವಿಸಿದ್ದ ಚಾಮರಾಜನಗರ ದುರಂತದಲ್ಲಿ ಮಡಿದ ಕುಟುಂಬಗಳಿಗೆ ನೆರವಿಗಾಗಿ ಧಾವಿಸಿದ್ದಾರೆ
ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಖ್ಯಾತಿಯ ಕಿಚ್ಚ ಸುದೀಪ್ ಇತ್ತೀಚೆಗೆ ಸಂಭವಿಸಿದ್ದ ಚಾಮರಾಜನಗರ ದುರಂತದಲ್ಲಿ ಮಡಿದ ಕುಟುಂಬಗಳಿಗೆ ನೆರವಿಗಾಗಿ ಧಾವಿಸಿದ್ದಾರೆ.
ಆಮ್ಲಜನಕ ಕೊರತೆಯಿಂದ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಾವಿಗೀಡಾದವರ ಕುಟುಂಬಗಳ ಪೈಕಿ ಅರ್ಧದಷ್ಟು ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಸುದೀಪ್ ನಡೆಸುತ್ತಿರುವ ಚಾರಿಟೆಬಲ್ ಟ್ರಸ್ಟ್ ವಹಿಸಿಕೊಂಡಿದೆ.
ಚಾಮರಾಜನಗರದ ದುರಂತದಲ್ಲಿ ಒಟ್ಟೂ 24 ಮಂದಿ ಸಾವನ್ನಪ್ಪಿದ್ದರು, ಈ ಪೈಕಿ ತೀರಾ ಅಗತ್ಯವಿರುವ 12 ಮಂದಿಯ ಕುಟುಂಬದ ಜವಾಬ್ದಾರಿಯನ್ನು ಟ್ರಸ್ಟ್ ವಹಿಸಿಕೊಂಡಿದೆ ಎಂದು ಟ್ರಸ್ಟ್ ಸದಸ್ಯರಾದ ರಮೇಶ್ ಹೇಳಿದ್ದಾರೆ.
ಸಾವನ್ನಪ್ಪಿರುವ ಕುಟುಂಬದ ಪೈಕಿ 12 ಕುಟುಂಬದ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಖರ್ಚನ್ನೂ ಸಹ ಟ್ರಸ್ಟ್ ನೋಡಿಕೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

