ಹೃತಿಕಾ, ಸುಘೋಷ್
ಹೃತಿಕಾ, ಸುಘೋಷ್

'ಅಪರೂಪ'ದ ಹೊಸ ಜೋಡಿಗೆ ನಿರ್ದೇಶಕ ಮಹೇಶ್ ಬಾಬು ಆಕ್ಷನ್ ಕಟ್!

ನಿರ್ದೇಶಕ ಮಹೇಶ್ ಬಾಬು ಅವರ ಮುಂದಿನ ಸಿನಿಮಾ "ಅಪರೂಪ"ದಲ್ಲಿ ಸುಘೋಷ್ ಮತ್ತು ಹೃತಿಕಾ ಎಂಬ ಹೊಸ ಜೋಡಿಯನ್ನು ತೆರೆ ಮೇಲೆ ತರುತ್ತಿದ್ದಾರೆ. 
Published on

ನಿರ್ದೇಶಕ ಮಹೇಶ್ ಬಾಬು ಅವರ ಮುಂದಿನ ಸಿನಿಮಾ "ಅಪರೂಪ"ದಲ್ಲಿ ಸುಘೋಷ್ ಮತ್ತು ಹೃತಿಕಾ ಎಂಬ ಹೊಸ ಜೋಡಿಯನ್ನು ತೆರೆ ಮೇಲೆ ತರುತ್ತಿದ್ದಾರೆ. ರೊಮ್ಯಾಂಟಿಕ್ ಡ್ರಾಮಾ ಎನ್ನಲಾಗಿರುವ "ಅಪರೂಪ" ಚಿತ್ರದ ಕಥೆ ಮತ್ತು ಸಂಭಾಷಣೆಯನ್ನು "ಪ್ರಾರಂಭ" ನಿರ್ದೇಶಕ ಮನು ಕಲ್ಯಾಡಿ ಬರೆದಿದ್ದಾರೆ. ಮಾರ್ಚ್ 2019 ರಲ್ಲಿ ಈ ಸಿನಿಮಾವನ್ನು ಘೋಷಿಸಿದ್ದ ಮಹೇಶ್, ಟಾಕಿ ಭಾಗಗಳ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ.

ಇತ್ತೀಚೆಗೆ ಕಾಶ್ಮೀರದಲ್ಲಿ ಒಂದು ಹಾಡನ್ನು ಶೂಟ್ ಮಾಡಿದ್ದ ನಿರ್ದೇಶಕ ಇದೀಗ ಇಡೀ ಚಿತ್ರವನ್ನು ಕಟ್ಟಲು ಇನ್ನೂ ಎರಡು ಹಾಡುಗಳ ಶೂಟಿಂಗ್ ಮುಗಿಸುವುದಕ್ಕಾಗಿ ಕಾಯುತ್ತಿದ್ದಾರೆ. 

ಸುಘೋಷ್ ಯುಎಸ್ಎದಲ್ಲಿ ಅಧ್ಯಯನ ಮಾಡಿದ ಟೆಕ್ಕಿ ಆಗಿದ್ದರೂ ನಟನೆ ಮೇಲಿನ ಅವರ ಪ್ರೀತಿ ಅವರನ್ನು ಸ್ಯಾಂಡಲ್ ವುಡ್ ನತ್ತ ಕರೆದುತಂದಿದೆ. ಇನ್ನು ತರಬೇತಿ ಪಡೆದ ಭರತನಾಟ್ಯ ಕಲಾವಿದೆಯಾಗಿರುವ ಹೃತಿಕಾ ಸಿನಿ ಹಿನ್ನೆಲೆಯಿಂದಲೇ ಬಂದವರು. ಅವರು ಖ್ಯಾತ ತೆಲುಗು ನಟ ಆಮನಿಯವರ ಸಂಬಂಧಿಗಳಾಗಿದ್ದಾರೆ. ಮಹೇಶ್ ಶುದ್ಧ ರೋಮ್ಯಾಂಟಿಕ್ ಕಥೆಯನ್ನಿಟ್ಟುಕೊಂಡು ಬಂದಿದ್ದಾರೆ ಅಲ್ಲದೆ ಈ ಕಥೆ ನಾಯಕ-ನಾಯಕಿಯರ ಮೂಲಕವೇ ನಿರೂಪಿತವಾಗಲಿದೆ. “ನನ್ನ ಚಿತ್ರವು ಒಂದು ಲವ್ ಡ್ರಾಮಾ ಆಗಿದ್ದು ಇಲ್ಲಿ ಅಹಂ ಬಹುದೊಡ್ಡ ಖಳನಾಯಕನಂತಿರಲಿದೆ” ಎಂದು ನಿರ್ದೇಶಕರು ಹೇಳುತ್ತಾರೆ, ಅವರು ಚಿತ್ರದ ಮೊದಲ ಕೆಲವು ಸ್ಟಿಲ್‌ಗಳನ್ನು ಸಹ ಹಂಚಿಕೊಂಡಿದ್ದಾರೆ.

“ಪ್ರತಿ ಬಾರಿ ನಾನು ಹೊಸಬರನ್ನು ಪರಿಚಯಿಸುವಾಗ ನಟನೆ ಮತ್ತು ಸಿನೆಮಾದಲ್ಲಿ ಅವರ ಆಸಕ್ತಿಯನ್ನು ನಾನು ನಿರ್ಣಯಿಸುತ್ತೇನೆ. ಎರಡೂ ಸರಿಹೊಂದಲಿದೆ ಎನ್ನುವುದುಮೊದಲು ನಿರ್ಣಯಿಸುತ್ತೇನೆ.ನೃತ್ಯ ಕಲಾವಿದೆಯಾಗಿರುವ  ಹೃತಿಕಾಗೆ ಕ್ಯಾಮೆರಾ ಎದುರಿಸುವ ವಿಶ್ವಾಸವಿತ್ತು. ಸುಘೋಷ್ ಅವರ ಕೌಶಲ್ಯಗಳನ್ನು ಪ್ರದರ್ಶಿಸುವ ಕೆಲವು ವಿಡಿಯೋ ಹಾಡುಗಳನ್ನು ಮಾಡಿದ್ದಾರೆ. ಫೈಟಿಂಗ್ ದೃಶ್ಯಗಳಲ್ಲಿ ಅವರಿಗೆ ಸ್ವಲ್ಪ ತರಬೇತಿಯ ಅಗತ್ಯವಿತ್ತು, ಅದನ್ನು ನಮ್ಮ ಸ್ಟಂಟ್‌ಮಾಸ್ಟರ್ ನೋಡಿಕೊಂಡರು” ಎಂದು ಮಹೇಶ್ ಹೇಳುತ್ತಾರೆ.

ಬೆಂಗಳೂರು, ಚಿಕ್ಕಮಗಳೂರು, ಮೈಸೂರಿನಲ್ಲಿ ಚಿತ್ರೀಕರಿಸಲಾದ ಈ ಚಿತ್ರವು ತಮ್ಮ ಕೊನೆಯ ಶೆಡ್ಯೂಲ್ ಗಳನ್ನು ಕಾಶ್ಮೀರದಲ್ಲಿ ಚಿತ್ರೀಕರಿಸಿದೆ. ಚಿತ್ರದ ಸಂಗೀತ, ಪ್ರಜ್ವಲ್ ಪೈ ಅವರದಾಗಿದ್ದರೆ, ಅರ್ಮಾನ್ ಮಲಿಕ್ ಅವರ ಹಾಡುಗಳಿದೆ. ನಟ ಪುನೀತ್ ರಾಜ್‌ಕುಮಾರ್ ಅವರು ಸಹ ಒಂದು ಹಾಡನ್ನು ಹಾಡಿದ್ದಾರೆ. ಚಿತ್ರದ ಕ್ಯಾಮೆರಾ ಕೆಲಸ ಸೂರ್ಯಕಾಂತ್ ಅವರದಾಗಿದೆ. ಸುಗ್ಗಿ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರದ ಪೋಷಕ ಪಾತ್ರದಲ್ಲಿ ಹಿರಿಯ ನಟರಾದ ಅಶೋಕ್ ಮತ್ತು ಅವಿನಾಶ್, ಅರುಣಾ ಬಾಲರಾಜ್, ದಿನೇಶ್ ಮಂಗಳೂರು ಇದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com