ವೀಕ್ಷಕರ ಇಷ್ಟಗಳು ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ: ಶಾನ್ವಿ ಶ್ರೀವಾತ್ಸವ

ಅವನೇ ಶ್ರೀಮನ್ನಾರಾಯಣ ನಾಯಕಿ ಶಾನ್ವಿ ಶ್ರೀವಾತ್ಸವ ಲಾಕ್ ಡೌನ್ ಸಮಯದಲ್ಲಿ ಪುಸ್ತಕಗಳನ್ನು ಓದುವುದು ಮತ್ತು ಸಿನಿಮಾಗಳನ್ನು ನೋಡುವ ಹವ್ಯಾಸವಾಗಿದೆಂತೆ.
ಶಾನ್ವಿ ಶ್ರೀವಾತ್ಸವ
ಶಾನ್ವಿ ಶ್ರೀವಾತ್ಸವ
Updated on

ಅವನೇ ಶ್ರೀಮನ್ನಾರಾಯಣ ನಾಯಕಿ ಶಾನ್ವಿ ಶ್ರೀವಾತ್ಸವ ಲಾಕ್ ಡೌನ್ ಸಮಯದಲ್ಲಿ ಪುಸ್ತಕಗಳನ್ನು ಓದುವುದು ಮತ್ತು ಸಿನಿಮಾಗಳನ್ನು ನೋಡುವ ಹವ್ಯಾಸವಾಗಿದೆಂತೆ.

ಅವನೇ ಶ್ರೀಮನ್ನಾರಾಯಣ ಸಿನಿಮಾಗೆ ಡಬ್ಬಿಂಗ್ ಮಾಡುವಾಗ ನನ್ನ ಧ್ವನಿ ಒಂದೇ ಪಿಚ್ ನಲ್ಲಿದೆ ಎನ್ನಿಸಿತು, ಹೀಗಾಗಿ ಅನ್ ಲೈನ್ ವಾಯ್ ಮಾಡುಲೇಷನ್  ಕೋರ್ಸ್ ಗೆ ಸೇರಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಪುಸ್ತಕ ಓದುವುದು ಸಾನ್ವಿಗೆ ಸ್ಟ್ರೆಸ್ ಬಸ್ಟರ್ ಆಗಿದೆಯಂತೆ. ನಾನು ಮರ್ಡರ್ ಮಿಸ್ಟರಿ ಪುಸ್ತಕ ಓದಿ ಮುಗಿಸಿದ್ದೇನೆ, ಜೊತೆಗೆ ಆಧ್ಯಾತ್ಮಿಕ ಪುಸ್ತಕ ಕೂಡ ಓದಿದ್ದೇನೆ. ಲಾಕ್ ಡೌನ್ ಗೂ ಮುಂಚೆಯೇ ಸಾನ್ವಿ ಮಲಯಾಳಂ ನ  ಮಹಾವೀರ್ಯಾರ್ ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ.

ಪೌಲಿ ಪಿಕ್ಚರ್ಸ್  ಮತ್ತು ಇಂಡಿನ್ ಮೂವಿ ಮೇಕರ್ಸ್  ಈ ಸಿನಿಮಾ ತಯಾರಿಸಿದ್ದು,  ನಿವಿನ್ ಪೌಲಿ ಮತ್ತು ಆಸಿಫ್ ಆಲಿ ಚಿತ್ರದಲ್ಲಿ ನಟಿಸಿದ್ದಾರೆ.  ಕೆಲವು ಪ್ಯಾಚ್ ವರ್ಕ್ ಮಾತ್ರ ಬಾಕಿ ಉಳಿದಿದೆ.

ಮಲಯಾಳಂ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ ಅನುಭವ ತುಂಬಾ ಚೆನ್ನಾಗಿತ್ತು,  ಇದೊಂದು ವಿಭಿನ್ನ ಪಾತ್ರ ನನಗೆ, ಚಿತ್ರತಂಡ ಅತ್ಯದ್ಭುತ ಪ್ರತಿಭೆಯಿಂದ ಕೂಡಿದೆ. ಶೂಟಿಂಗ್ ಉತ್ತಮವಾಗಿ ಮೂಡಿ ಬಂದಿದೆ. ತೆರೆಯ ಮೇಲೆ ನೋಡಲು ನಾನು ಕಾತುರಳಾಗಿದ್ದೇನೆ ಎಂದು ಹೇಳಿದ್ದಾರೆ.

ಮಲಯಾಳಂ ಮಾತ್ರವಲ್ಲದೇ ಹಲವು ಭಾಷೆಗಳಲ್ಲಿ ಸಾನ್ವಿ ತಮ್ಮ ಅದೃಷ್ಟ ಪರೀಕ್ಷಿಸಿದ್ದಾರೆ, ಕನ್ನಡ ಮತ್ತು ತೆಲುಗು ಸಿನಿಮಾ ನಂತರ ನನಗೆ ಮಲಯಾಳಂ ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ತಮಿಳು ಸಿನಿಮಾದಲ್ಲಿಯೂ ನಾನು ಅಭಿನಯಿಸುತ್ತಿದ್ದೇನೆ. ಕಾಲಿವುಡ್ ನಲ್ಲೂ ಉತ್ತಮ ಹೆಸರು ಮಾಡಲಿದ್ದೇನೆ ಎಂಬ ಭರವಸೆಯಿದೆ.

ಕನ್ನಡದಲ್ಲಿ ಸಾನ್ವಿ ದಿನೇಶ್ ಬಾಬು ಅವರ ಕಸ್ತೂರಿ ಮಹಲ್ ನಲ್ಲಿ ನಟಿಸುತ್ತಿದ್ದು, ಸಿನಿಮಾ ಶೂಟಿಂಗ್ ಆರಂಭವಾಗಲು ಕಾಯುತ್ತಿದ್ದಾರೆ. ಇನ್ನು ಕೆಲ ವು ಪ್ರಮುಖ ಭಾಗಗಳ ಶೂಟಿಂಗ್ ಬಾಕಿಯಿದೆ,  ಮಾರ್ಚ್ ನಲ್ಲಿ ಚಿತ್ರೀಕರಣ ನಡೆಯಬೇಕಿದ್ದು, ಆದರೆ ಕೋವಿಡ್ ಕಾರಣದಿಂದ ಮುಂದೂಡಲಾಗಿದೆ.

ಸಾಂಕ್ರಾಮಿಕ ರೋಗವು ಚಿತ್ರರಂಗದ ಬಗ್ಗೆ ಎಲ್ಲವನ್ನೂ ಬದಲಾಯಿಸಿದೆ ಎಂದು ಶಾನ್ವಿ ಅಭಿಪ್ರಾಯಪಟ್ಟಿದ್ದಾರೆ. “ವೀಕ್ಷಕರ ಇಷ್ಟಗಳು ಕೂಡ ಬದಲಾಗಿವೆ. ಅವರು ವಿವಿಧ ಭಾಷೆಗಳಲ್ಲಿ ಚಲನಚಿತ್ರಗಳನ್ನು ಹೊಂದಿರುವ ಒಟಿಟಿಯೊಂದಿಗೆ ವಿವಿಧ ರೀತಿಯ ಕಥೆಗಳನ್ನು ಅನ್ವೇಷಿಸುತ್ತಿದ್ದಾರೆ. ಮನರಂಜನಾ ಉದ್ಯಮವು ಮತ್ತೆ ಟ್ರ್ಯಾಕ್‌ಗೆ ಬಂದಾಗ, ಎಲ್ಲರೂ ಪ್ರಾಯೋಗಿಕ ಹಂತದಲ್ಲಿರುತ್ತಾರೆ. ವಾಣಿಜ್ಯ ಚಲನಚಿತ್ರಗಳು ಅವುಗಳ ಮೌಲ್ಯವನ್ನು ಹೊಂದಿದ್ದರೂ, ಪ್ರಯೋಗಾತ್ಮಕ ಚಿತ್ರಗಳಿಗೆ ಅವಕಾಶವಿರುತ್ತದೆ ”ಎಂದು ಶಾನ್ವಿ ಹೇಳಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com