ಕೊಯಮತ್ತೂರು (ತಮಿಳುನಾಡು): ನಟ ವಿಜಯ್ ಸೇತುಪತಿ ಅವರ ಮೇಲೆ ಹಲ್ಲೆ ಮಾಡುವವರಿಗೆ 1,001 ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದ, ಹಿಂದೂ ಪರ ಸಂಘಟನೆಯ ಹಿಂದೂ ಮಕ್ಕಳ್ ಕಚ್ಚಿ ನಾಯಕ ಅರ್ಜುನ್ ಸಂಪತ್ ವಿರುದ್ಧ ಕೊಯಮತ್ತೂರು ಪೊಲೀಸರು ಇಂದು ದೂರು ದಾಖಲಿಸಿದ್ದಾರೆ.
ಅರ್ಜುನ್ ಸಂಪತ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 504 ಮತ್ತು 506(1) ಅಡಿಯಲ್ಲಿ ಕ್ರಿಮಿನಲ್ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಹಾಗೂ ದೇಶಕ್ಕೆ ನಟ ವಿಜಯ್ ಸೇತುಪತಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ವಿಜಯ್ ಸೇತುಪತಿ ಅವರಿಗೆ ಒದೆಯುವವರಿಗೆ 1,001 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು.
ತೇವರ್ ಅಯ್ಯ ಅವರನ್ನು ಅವಮಾನಿಸಿದ್ದಕ್ಕಾಗಿ ನಟ ವಿಜಯ್ ಸೇತುಪತಿಗೆ ಒದೆಯುವವರಿಗೆ ಅರ್ಜುನ್ ಸಂಪತ್ ಅವರು ನಗದು ಪುರಸ್ಕಾರವನ್ನು ಘೋಷಿಸಿದ್ದಾರೆ. ಅವರು ಕ್ಷಮೆ ಕೇಳುವವರೆಗೆ, ಅವರನ್ನು ಒದೆಯುವವರಿಗೆ 1 ಕಿಕ್ಗೆ 1,001 ರೂ. ಕೊಡುವೆ ಎಂದು ಅರ್ಜುನ್ ಅವರು ಹಿಂದೂ ಮಕ್ಕಳ್ ಕಚ್ಚಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹಿಂದೂ ಮಕ್ಕಳ್ ಕಚ್ಚಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ (ಇಂದೂ ಮಕ್ಕಳ್ ಕಚ್ಚಿ ಎಂದೂ ಸಹ ಉಚ್ಚರಿಸಲಾಗುತ್ತದೆ) ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಬ್ಬರು ಪುರುಷರು ಜಗಳವಾಡುತ್ತಿರುವ ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ನನ್ನು ಪೋಸ್ಟ್ ಮಾಡಲಾಗಿದೆ. ವಿಜಯ್ ಸೇತುಪತಿ ಸ್ವಾತಂತ್ರ್ಯ ಹೋರಾಟಗಾರ ದೈವತಿರು ಪಸುಂಪೊನ್ ಮುತ್ತುರಾಮಲಿಂಗ ತೇವರ್ ಅಯ್ಯ ಮತ್ತು ದೇಶಕ್ಕೆ ಅವಮಾನ ಮಾಡಿದ್ದಾರೆ ಎಂದು ಅರ್ಜುನ್ ಸಂಪತ್ ಆರೋಪಿಸಿದ್ದಾರೆ.
ನಾನು ಇಂತಹ ಹೇಳಿಕೆ ನೀಡಿದ್ದು ವೈರಲ್ ವಿಡಿಯೋಗೆ ಸಂಬಂಧಿಸಿದ್ದು ಎಂದು ಅರ್ಜುನ್ ಸಂಪತ್ ಒಪ್ಪಿಕೊಂಡಿದ್ದಾರೆ.
Advertisement