ವಿರಾಟ್
ವಿರಾಟ್

'ಅದ್ಧೂರಿ ಲವರ್' ಫಸ್ಟ್ ಲುಕ್ ಔಟ್: ರಗಡ್ ಲುಕ್ ನಲ್ಲಿ ವಿರಾಟ್!

ಎಪಿ ಅರ್ಜುನ್ ನಿರ್ದೇಶನದ ಅದ್ಧೂರಿ ಲವರ್ ಸಿನಿಮಾದಲ್ಲಿ ವಿರಾಟ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರತಂಡ ಮೊದಲ ಹಂತದ ಶೂಟಿಂಗ್ ಮುಗಿಸಿದ್ದು ಚಿತ್ರದ ಮೊದಲ ಲುಕ್ ಅನಾವರಣಗೊಳಿಸಿದೆ.
Published on

ಎಪಿ ಅರ್ಜುನ್ ನಿರ್ದೇಶನದ ಅದ್ಧೂರಿ ಲವರ್ ಸಿನಿಮಾದಲ್ಲಿ ವಿರಾಟ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರತಂಡ ಮೊದಲ ಹಂತದ ಶೂಟಿಂಗ್ ಮುಗಿಸಿದ್ದು ಚಿತ್ರದ ಮೊದಲ ಲುಕ್ ಅನಾವರಣಗೊಳಿಸಿದೆ.

ಲವರ್ ಬಾಯ್ ಲುಕ್ ತ್ಯಜಿಸಿರುವ ವಿರಾಟ್, ರೋಮ್ಯಾಂಟಿಕ್  ಆ್ಯಕ್ಷನ್ ಸಿನಿಮಾಗಾಗಿ ಒರಟಾಗಿ ರಗಡ್ ಕಾಣಿಸಿಕೊಳ್ಳುತ್ತಿದ್ದಾರೆ.

ಎಪಿ ಅರ್ಜುನ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಮತ್ತು ಅದ್ದೂರಿ ಲವರ್ ಸಿನಿಮಾಗಳನ್ನು ನಿರ್ದೇಶಿಸುತ್ತಿದ್ದು ಎರಡು ಸಿನಿಮಾಗಳಿಗಾಗಿ ಸಮಯ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಮೊದಲ ಹಂತದ ಶೂಟಿಂಗ್ 15 ದಿನಗಳು ನಡೆದಿದ್ದು, ಪ್ರಮುಖ ಭಾಗಗಳನ್ನು ಚಿತ್ರೀಕರಿಸಿದ್ದಾರೆ. ದಾಂಡೇಲಿ, ಯಲ್ಲಾಪುರ ಮತ್ತು ಶಿರಸಿಯಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ನಿರ್ದೇಶಕ ಅರ್ಜುನ್ ತಿಳಿಸಿದ್ದಾರೆ.

ಅದ್ಧೂರಿ ಲವರ್ ವಿರಾಟ್ ಅವರ ಎರಡನೇ ಚಿತ್ರವಾಗಿರಬಹುದು, ಆದರೆ ಅವರು ತುಂಬಾ ಪ್ರತಿಭಾವಂತ ಮತ್ತು ಭರವಸೆಯ ನಟನಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಅರ್ಜುನ್ ಅಭಿಪ್ರಾಯ ಪಟ್ಟಿದ್ದಾರೆ.

ಕಿಸ್ ಚಿತ್ರದ ಮೂಲಕ ನಿರ್ಮಾಣಕ್ಕೆ ಪಾದಾರ್ಪಣೆ ಮಾಡಿದ ಎಪಿ ಅರ್ಜುನ್, ತಮ್ಮ ಹೋಮ್ ಬ್ಯಾನರ್ ಎಪಿ ಅರ್ಜುನ್ ಫಿಲ್ಮ್ಸ್ ಅಡಿಯಲ್ಲಿ ಅದ್ಧೂರಿ ಲವರ್ ಸಿನಿಮಾವನ್ನು ಸಹ ನಿರ್ಮಿಸುತ್ತಿದ್ದಾರೆ.

ಕನ್ನಡದಲ್ಲಿ ತಯಾರಾಗಿರುವ ಈ ಚಿತ್ರ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇನ್ನೂ ಪಾತ್ರವರ್ಗದ ವಿವರಗಳನ್ನು ಬಹಿರಂಗಪಡಿಸಿಲ್ಲ. ಛಾಯಾಗ್ರಾಹಕ ಸಂಕೇತ್ ಎಂವೈಎಸ್ ಮತ್ತು ಮೋಹನ್ ಬಿ ಕೆರೆ ಕಲಾ ನಿರ್ದೇಶನವಿದೆ. ಚಿತ್ರಕ್ಕೆ ಸಂಗೀತ ನಿರ್ದೇಶಕರನ್ನು ಚಿತ್ರತಂಡ ಇನ್ನೂ ಅಂತಿಮಗೊಳಿಸಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com