ಹಿಂದುತ್ವದ ಜತೆ ಮುಂದುತ್ವವೂ ಬೇಕು; ತಮಿಳರು ತೋರಿದ ಧೈರ್ಯ ನಮ್ಮಲ್ಲಿಲ್ಲ: ಹಂಸಲೇಖ

ಹಿಂದುತ್ವದ ಜತೆ ಮುಂದುತ್ವವೂ ಬೇಕು, ಬದುಕು ಮುಂದುವರಿಯಬೇಕು. ಅದಕ್ಕಾಗಿ ಅಭಿವೃದ್ಧಿ ಹಾಗೂ ರಾಷ್ಟ್ರೀಯತೆ ಎರಡೂ ಅಗತ್ಯವಾಗಿದೆ. ಹಾಗಾಗಿ ಇಲ್ಲಿನ ಬಹುಭಾಷೆಗಳು ದೇಶದ ಏಕತೆಗೆ ಕಾರಣವಾಗಿದೆ ಎಂದ ನಾದಬ್ರಹ್ಮ ಹಂಸಲೇಖ ಹೇಳಿದ್ದಾರೆ.
ಹಂಸಲೇಖ
ಹಂಸಲೇಖ
Updated on

ಬೆಂಗಳೂರು: ಹಿಂದುತ್ವದ ಜತೆ ಮುಂದುತ್ವವೂ ಬೇಕು, ಬದುಕು ಮುಂದುವರಿಯಬೇಕು. ಅದಕ್ಕಾಗಿ ಅಭಿವೃದ್ಧಿ ಹಾಗೂ ರಾಷ್ಟ್ರೀಯತೆ ಎರಡೂ ಅಗತ್ಯವಾಗಿದೆ. ಹಾಗಾಗಿ ಇಲ್ಲಿನ ಬಹುಭಾಷೆಗಳು ದೇಶದ ಏಕತೆಗೆ ಕಾರಣವಾಗಿದೆ ಎಂದ ನಾದಬ್ರಹ್ಮ ಹಂಸಲೇಖ ಹೇಳಿದ್ದಾರೆ.

ಶಾರದಾ ಬುಕ್ ಅಂಗಡಿ ಆವರಣದಲ್ಲಿ ನಡೆದ ವಿನುತಾ ವಿಶ್ವನಾಥ್ ಅವರ 'ಹುಣ್ಸ್ ಮಕ್ಕಿ ಹುಳ' ಪುಸ್ತಕ ಕುರಿತ ಸಂವಾದದಲ್ಲಿ ಅವರು ಮಾತನಾಡಿದ್ದರು. 

ಕನ್ನಡವೇ ನಮ್ಮ ಹಕ್ಕಿನ ಭಾಷೆ, ಖಾತೆ ಇದ್ದಂತೆ!
ಕೇಂದ್ರದ ಸರ್ಕಾರಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಏಕಾಭಾಷೆಯನ್ನು ನಮ್ಮ ಮೇಲೆ ಹೇರುತ್ತವೆ ಎಂದ ಹಂಸಲೇಖ ಕನ್ನಡ ನಮಗೆ ಎಂದಿಗೂ ಹಕ್ಕಿನ ಭಾಷೆ, ಕನ್ನಡದಿಂದಲೇ ನಮ್ಮ ಈ ರಾಜ್ಯ ಉಳಿಯುವುದು. ಕನ್ನಡ ನಮ್ಮ ಪಾಲಿಗೆ ಖಾತೆ ಇದ್ದಂತೆ ಎಂದಿದ್ದಾರೆ. ನಾವು ಬಹಳ ಅಪಾಯದ ಸ್ಥಿತಿಯಲ್ಲಿದ್ದೇವೆ. ನಮ್ಮಲ್ಲಿ ಸ್ಪಷ್ತತೆ ಇಲ್ಲದಿರುವುದು ಇದಕ್ಕೆ ಕಾರಣ. ತಮಿಳುನಾಡಿನಲ್ಲಿ ಧೈರ್ಯವಾಗಿ ದ್ವಿಭಾಷಾ ಸೂತ್ರ ಅಳವಡಿಸಿಕೊಳ್ಳುತ್ತಾರೆ. ಆದರೆ ನಾವು ಆ ಧೈರ್ಯ ತೋರಿಸುವಲ್ಲಿ ಹಿಂದೆ ಬಿದ್ದಿದ್ದೇವೆ. ನಾವೀಗ ಸ್ಪಷ್ಟ ನಿರ್ಧಾರಕ್ಕೆ ಬರಬೇಕಿದೆ ಅದೇನೆಂದರೆ ನಮಗೆ ಹಿಂದಿ ಬೇಕೆ? ಇಂಗ್ಲೀಷ್ ಬೇಕೆ? ಇದರ ಬಗ್ಗೆ ಸ್ಪಷ್ಟ ನಿರ್ಧಾರ ಇಲ್ಲದಿದ್ದರೆ ಗೊಂದಲ ಮುಂದುವರಿಯಲಿದೆ.

ಇಂಗ್ಲೀಷ್ ನಮ್ಮ ಕನ್ನಡ ತಾಯಂದಿರ ಆಜ್ಞೆಯಾಗಿದೆ. ಪ್ರತಿ ಹೆಣ್ಣುಮಕ್ಕಳೂ ತಮ್ಮ ಮಕ್ಕಳಿಗೆ ಇಂಗ್ಲೀಷ್ ಕಲಿಸಲೇಬೇಕು ಎಂದು ಆಜ್ಞೆ ಮಾಡಿದ್ದಾರೆ. ಅದನ್ನು ಅವರ ಪತಿ ಅನುಸರಿಸುತ್ತಾರೆ. ಹಾಗಾಗಿ ಇಂಗ್ಲೀಷ್ ಅಥವಾ ಇನ್ನಾವುದೇ ಭಾಷೆ ಕಲಿಯುವ ಭಾಷೆಯಾಗಿರಲಿ ಆದರೆ ಕನ್ನಡ ಎಂದಿಗೂ ನಮ್ಮ ಉಸಿರಾಗಿರಬೇಕು. ಕನ್ನಡ ಸಾವಿರಾರು ವರ್ಷ ಇತಿಹಾಸವಿರುವ ಭಾಷೆ. ಆದರೆ ಇದನ್ನು ದಕ್ಷಿಣ ಭಾರತದ ಅಧಿಕೃತ ಭಾಷೆ ಎನ್ನಲಾಗುವುದಿಲ್ಲ. ತಮಿಳು ಇಲ್ಲಿ ಬಗೆಯ ಸಂವಹನ ಭಾಷೆಯಾಗಿದೆ. ಆದರೆ ಹಿಂದಿ ರಾಷ್ಟ್ರಭಾಷೆ ಎಂದು ಹೇಳುತ್ತಿರುವುದು ನನಗೆ ತಮಾಷೆಯಾಗಿ ಕಾಣುತ್ತಿದೆ ಎಂದ ಹಂಸಲೇಖ ಒಂದೊಮ್ಮೆ ದೇವನಾಗರಿ ಭಾಷೆಯನ್ನು ರಾಷ್ಟ್ರಭಾಷೆ ಅಥವಾ ಆಡಳಿತ ಭಾಷೆಯನ್ನಾಗಿಸಿದರೆ ಯಾರೂ ಸಂಸ್ಕೃತ ಅಥವಾ ದೇವನಾಗರಿಯಲ್ಲಿ ವ್ಯವಹರಿಸುವುದಿಲ್ಲ. ಬದಲಿಗೆ ಇಂಗ್ಲೀಷ್ ನಲ್ಲಿ ವ್ಯ್ವವಹರಿಸುತ್ತಾರೆ ಮುಕ್ಕಾಲು ಪಾಲು ಜನ ಇಂಗ್ಲೀಷ್ ಇನ್ನೂ ಕಾಲು ಭಾಗ ಜನರು ಹಿಂದಿಯಲ್ಲಿ ವ್ಯವಹರಿಸಬಹುದು ಎಂದರು.

ಹಿಂದಿ ಭಾಷೆ ಪರ್ಷಿಯಾ, ಉರ್ದು ಹಾಗೂ ಅರಬ್ ಭಾಷೆಯ ಬಲಮಗು, ಐನೂರು ಅಥವಾ ನಾಲ್ಕು ನೂರು ವರ್ಷಗಳ ಇತಿಹಾಸದ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಬೇಕು. ಬೇರೆ ಯಾವ ಭಾಷೆಯನ್ನೂ ಕಲಿಯುವ ಅವಕಾಶವಿದ್ದರೂ ಒಳಿತು ಎಂದರು. ಕನ್ನಡ ಹೋರಾಟಗಾರರು, ಯುವಕರು ಈ ಬಗ್ಗೆ ಇದೀಗ ಗೊಂದಲದಲ್ಲಿದ್ದಾರೆ ಎಂದು ಹಂಸಲೇಖ ಹೇಳಿದರು. 

ಇಂದು ವೈದಿಕ ಪ್ರಜ್ನೆಗೆ ರಾಷ್ಟ್ರೀಯತೆಯ ಕನಸು ಹಾಗೂ ಅಮಲಿದೆ:
ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆ ಪ್ರಾರಂಭವಾದಾಗ ಬೋಧನಾ ರಂಗ ಪ್ರವೇಶಿಸಿದ ಮೊದಲ ವರ್ಗ ಅದು ವೈದಿಕ ವರ್ಗವಾಗಿತ್ತು. ದೇಶದಲ್ಲಿ ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆ ಪ್ರಾರಂಭವಾದಾಗ ಬೋಧನಾ ವರ್ಗವನ್ನು ಮೊದಲು ಪ್ರವೇಶಿಸಿದ್ದು ಈ ವೈದಿಕ ಪ್ರಜ್ಞೆ. ವೈದಿಕ ಪ್ರಜ್ಞೆ ಹಿನ್ನೆಲೆ ದೊರತದ್ದು ನಮ್ಮ ಪುಣ್ಯ. ಇಂದು ಅದೇ ವೈದಿಕ ಪ್ರಜ್ಞೆಗೆ ರಾಷ್ಟ್ರೀಯತೆಯ ಕನಸು ಹಾಗೂ ಅಮಲಿದೆ. ರಾಷ್ಟ್ರೀಯ ಪ್ರಜ್ಞೆ ನಮಗೂ ಅಗತ್ಯವಿದೆ. ಆದರೆ ಆ ರಾಷ್ಟ್ರೀಯತೆಯ ಜತೆಗೆ ನಮ್ಮ ಪ್ರಾದೇಶಿಕತೆಯ ಸ್ವಾಯತ್ತತೆಯನ್ನು ಕಳೆದುಕೊಳ್ಲಲು ನಾವು ಸಿದ್ದವಾಗಿಲ್ಲ ಎಂದು ಹಂಸಲೇಖ ಹೇಳಿದ್ದಾರೆ. ಅದೊಮ್ಮೆ ಕಳೆದುಹೋದಲ್ಲಿ ಭಾರತದಲ್ಲಿ ಬಹುದೊಡ್ಡ ವ್ಯತ್ಯಾಸಗಳು ಪ್ರಾರಂಭವಾಗಲಿದೆ. ಪುರಿ ಉಂಡೆಯಾಗಿರುವುದನ್ನು ಒಂದೊಂದೇ ಎಳೆ ಬಿಚ್ಚಿದರೆ ಮತ್ತೆ ಈ ಹಿಂದಿದ್ದ ೫೮ ಸಂಸ್ಥಾನಗಳ ರೀತಿಯಲ್ಲಿ ಚಿತ್ರ ವಿಚಿತ್ರವಾಗಿ ಹಂಚಿಕೆಯಾಗಲಿದೆ ಹಾಗಾಗಿ ಸಂವಿಧಾನದ ಹಿನ್ನೆಲೆ ಒಂದಾಗಿರುವ ಭಾರತವನು ಹಾಗೇ ಉಳಿಸಿಕೊಳ್ಲಬೇಕು ಎಂದರು

ಭಾರತದ ಏಕತ್ವದ ಸಂಕೇತ ಕುಂಕುಮ
ಭಾರತದ ಏಕತ್ವದ ಸಂಕೇತ ಕುಂಕುಮ ಎಂದಿರುವ ಹಂಸಲೇಖ ಇಲ್ಲಿ ಸಿಖ್ಖರು, ಮುಸ್ಲಿಮರು, ಕ್ರೈಸ್ತರು ಸಹ ಕುಂಕುಮ ಇಡಬಲ್ಲರು. ತಾಳಿ ಎಲ್ಲಾ ಧರ್ಮೀಯರಲ್ಲಿ ಸ್ವೀಕಾರವಾಗಿದೆ. ಗೋವು, ದೇವಾಲಯಗಳು ನಮ್ಮ ಏಕತ್ವದ ಸಂಕೇತಗಳಾಗಿದೆ ಎಂದರು. ಇದೆಲ್ಲಾ ರಾಷ್ಟ್ರೀಯತೆಯಾಗಿದ್ದು ಇದರ ಮೂಲಕ ಬಹುತ್ವವನ್ನೂ ಕಾಪಾಡಿಕೊಳ್ಳುತ್ತಾ, ಏಕತ್ವದ ಸಂಕೇತವನ್ನು ಗೌರವಿಸುತ್ತಾ ಕನ್ನಡವನ್ನು ಸಹ ಉಳಿಸಿಕೊಳ್ಳಬೇಕಿದೆ ಎಂದಿದ್ದಾರೆ.

ಹಂಸಲೇಕ ಅವರು ತಮ್ಮ ಶಾರದಾ ಬುಕ್ ಅಂಗಡಿ ಬಗ್ಗೆ ಪರಿಚಯ ಮಾಡಿಕೊಟ್ಟ ನಂತರದಲ್ಲಿ ವಿನುತಾ ವಿಶ್ವನಾಥ್  ಅವರ "ಹುಣ್ಸ್ ಮಕ್ಕಿ ಹುಳ" ಪುಸ್ತಕದ ಕುರಿತ ಸಂವಾದ ನಡೆಯಿತು. ವಿನುತಾ ಅವರ ಆತ್ಮಕಥೆಯಾಗಿರುವ ಹುಣ್ಸ್ ಮಕ್ಕಿ ಹುಳ ದಲ್ಲಿ ವಿನುತಾ ತಮ್ಮ ಜೀವನದ ಹಲವು ಅನುಭವವನ್ನು ಹಂಚಿಕೊಂಡಿದ್ದು ಓದುಗರಿಗೆ ಸ್ಪೂರ್ತಿಯ ಕಥೆಯನ್ನು ಉಣಬಡಿಸಿದ್ದಾರೆ.

ವರದಿ: ರಾಘವೇಂದ್ರ ಅಡಿಗ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com