'ಅಪ್ಪು' ಉಳಿಸಿಕೊಳ್ಳಲಾಗಲಿಲ್ಲ; ಶಾಂತಿಯುತವಾಗಿ ಕಳಿಸಿಕೊಡೋಣ: ರಾಘವೇಂದ್ರ ರಾಜ್ ಕುಮಾರ್ ಮನವಿ

ನಟ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನದಿಂದ ಅವರ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ. ಡಾ. ರಾಜ್ ಅವರ ಐವರು ಮಕ್ಕಳಲ್ಲಿ ಕಿರಿಯರು. ಹೀಗಾಗಿ ಎಲ್ಲರಿಗೂ ಅಚ್ಚುಮೆಚ್ಚು. ಇಂತಹ ಮನೆಮಗನನ್ನು ಕಳೆದುಕೊಂಡು ಎಲ್ಲರೂ ಕಣ್ಣೀರಾಗಿದ್ದರೂ, ಇದರ ನಡುವೆಯೇ ಮುಂದಿನ ಕಾರ್ಯದತ್ತ ಗಮನಹರಿಸಿದ್ದಾರೆ.
ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್(ಸಂಗ್ರಹ ಚಿತ್ರ)
ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್(ಸಂಗ್ರಹ ಚಿತ್ರ)
Updated on

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನದಿಂದ ಅವರ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ. ಡಾ. ರಾಜ್ ಅವರ ಐವರು ಮಕ್ಕಳಲ್ಲಿ ಕಿರಿಯರು. ಹೀಗಾಗಿ ಎಲ್ಲರಿಗೂ ಅಚ್ಚುಮೆಚ್ಚು. ಇಂತಹ ಮನೆಮಗನನ್ನು ಕಳೆದುಕೊಂಡು ಎಲ್ಲರೂ ಕಣ್ಣೀರಾಗಿದ್ದರೂ, ಇದರ ನಡುವೆಯೇ ಮುಂದಿನ ಕಾರ್ಯದತ್ತ ಗಮನಹರಿಸಿದ್ದಾರೆ.

ಈ ಸಂದರ್ಭದಲ್ಲಿ ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ, ನಾನು ಎರಡು ಸಲ ಆಸ್ಪತ್ರೆಗೆ ಸೇರಿದಾಗ ಸುರಕ್ಷಿತವಾಗಿ ವಾಪಸ್ ಕರೆತಂದರು. ಆದರೆ ನನ್ನಿಂದ ಅವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಅಪ್ಪ, ಅಮ್ಮನನ್ನು ನೋಡಲು ಬಹಳ ಬೇಗ ತೆರಳಿದ್ದಾನೆ ಎಂದಿದ್ದಾರೆ. ಇನ್ನುಳಿದಿರುವುದು ಅವನನ್ನು ಶಾಂತಿಯುತವಾಗಿ, ವಿಜೃಂಭಣೆಯಿಂದ ಕಳುಹಿಸಿಕೊಡುವುದು. ಈ ಕಾರ್ಯಕ್ಕೆ ಅಭಿಮಾನಿಗಳೆಲ್ಲ ಸಹಕರಿಸಬೇಕು. ತಂದೆಯವರ ಅಗಲಿಕೆಯ ವೇಳೆ ಆದಂತೆ ಆಗಬಾರದು ಎಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com