ಚಿರಂಜೀವಿ ಸರ್ಜಾ- ಮೇಘನಾ ರಾಜ್ ಪುತ್ರನಿಗೆ ನಾಮಕರಣ: ಜ್ಯೂನಿಯರ್ ಚಿರು ಹೆಸರು ಬಹಿರಂಗ!
ಬೆಂಗಳೂರು: ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ಹಾಗೂ ಸರ್ಜಾ ಕುಟುಂಬ ಸೆ.3, 2021ರಂದು ಜ್ಯೂನಿಯರ್ ಚಿರುಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದಾರೆ. ಮೇಘನಾ ಪುತ್ರನಿಗೆ ಆಯ್ಕೆ ಮಾಡಿರುವ ಹೆಸರು ಸಖತ್ ಡಿಫರೆಂಟ್ ಆಗಿದೆ.
ಜ್ಯೂ.ಚಿರು ಎಂದೇ ಕರೆಯಲ್ಪಡುತ್ತಿದ್ದ ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಅವರ 10 ತಿಂಗಳ ಮಗನಿಗೆ ‘ರಾಯನ್ ರಾಜ್ ಸರ್ಜಾ’ ಎಂದು ನಾಮಕರಣ ಮಾಡಲಾಗಿದೆ. ನಗರದ ಚಾನ್ಸರಿ ಪೆವಿಲಿಯನ್ ಹೋಟೆಲ್‌ನಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದ್ದು, ನಟ ಧ್ರುವ ಸರ್ಜಾ ದಂಪತಿ ಸೇರಿದಂತೆ ಕುಟುಂಬದ ಸದಸ್ಯರು ಭಾಗಿಯಾಗಿದ್ದರು.
ನಾಮಕರಣದ ವಿಡಿಯೊವೊಂದನ್ನು ಮೇಘನಾ ರಾಜ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ‘ರಾಯನ್ ರಾಜ್ ಸರ್ಜಾ– ನಮ್ಮ ಯುವರಾಜ’ ಎಂದು ಬರೆದುಕೊಂಡಿದ್ದಾರೆ. ವಿಡಿಯೊದಲ್ಲಿ ಚಿರಂಜೀವಿ ಸರ್ಜಾ ಅವರನ್ನೂ ಮೇಘನಾ ನೆನಪಿಸಿಕೊಂಡಿದ್ದಾರೆ.
ಬೆಳಗ್ಗೆಯಿಂದ ಆರಂಭವಾಗಿರುವ ಪೂಜೆಯಲ್ಲಿ ಚಿರಂಜೀವಿ ಸರ್ಜಾ ಪೋಷಕರೂ ಭಾಗಿಯಾಗಿದ್ದಾರೆ. ಮೊಮ್ಮಗನನ್ನು ಮಡಿಲಿನಲ್ಲಿ ಕೂರಿಸಿಕೊಂಡು ಪೂಜೆ ಮಾಡಿದ್ದಾರೆ ಚಿರಂಜೀವಿ ಪೋಷಕರು. ರಾಯನ್ ರಾಜ್ ಎಂದು ನಾಮಕರಣ ಮಾಡಲಾಗಿದೆ. ಸಂಸ್ಕೃತದಲ್ಲಿ ರಾಯನ್ ರಾಜ್ ಎಂದರೆ ಯುವರಾಜ ಅಂತ ಅರ್ಥ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ