ಬಾಲಿವುಡ್ ನಟ ಗೋವಿಂದ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ನಟನೆಯ ಇನ್ನೂ ಟೈಟಲ್ ಫಿಕ್ಸ್ ಮಾಡದ ಥ್ರಿಲ್ಲರ್ ಸಿನಿಮಾ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಕಿರಣ್ ವಿಶ್ವನಾಥ್ ನಿರ್ದೇಶನದ ಸಿನಿಮಾದಲ್ಲಿ ಗೋವಿಂದ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.
ಇನ್ನೂ ಈ ಬೆಳವಣಿಗೆ ಬಗ್ಗೆ ನಿರ್ದೇಶಕ ಕಿರಣ್ ವಿಶ್ವನಾಥ್ ಪ್ರತಿಕ್ರಿಯಿಸಿದ್ದು, ನಿರ್ಮಾಪಕ ನವೀನ್ ಕುಮಾರ್, ಗೋವಿಂದ ಅವರ ಜೊತೆ ಮಾತನಾಡಿದ್ದು ಡಾಟೆಡ್ ಲೈನ್ ಮೇಲೆ ಸಹಿ ಮಾಡಬೇಕಾಗಿದೆ. ಕೂಡಲೇ ಅಧಿಕೃತ ಘೋಷಣೆಯೊಂದು ಬಾಕಿ ಉಳಿದಿದೆ.
ಕರ್ನಾಟಕ ಮತ್ತು ಕನ್ನಡದ ಜೊತೆ ಗೋವಿಂದ ಅವರಿಗೆ ಅವಿನಾಭಾವ ಸಂಬಂಧವಿದೆ. ಗೋವಿಂದ ಅವರು ಡಾ. ರಾಜ್ ಕುಮಾರ್ ಅವರ ಬಹು ದೊಡ್ಡ ಅಭಿಮಾನಿ.
ಸಮಾರಂಭವೊಂದರಲ್ಲಿ ಹರ್ಷಿಕಾ ಪೂಣಚ್ಚ ಜೊತೆ ಎಂದೆಂದೂ ನಿನ್ನನು ಮರೆತು ಹಾಡು ಹಾಡಿದ್ದರು. 1990 ರಲ್ಲಿ ಊಟಿಯಲ್ಲಿ ಗೋವಿಂದ ಅವರ ಹಲವು ಶೂಟಿಂಗ್ ನಡೆದಿದ್ದವು.
ಕೆಂಪೇಗೌಡ ಮತ್ತು ರನ್ನ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಕಿರಣ್, ಊರ್ವಿ ಮತ್ತು ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ಎಡಿಟರ್ ಆಗಿ ಕೆಲಸ ಮಾಡಿದ್ದರು.
Advertisement