'ಹೆಡ್ ಬುಷ್' ತಂಡಕ್ಕೆ ಬಾಲು ನಾಗೇಂದ್ರ -ಶೃತಿ ಹರಿಹರನ್ ಸೇರ್ಪಡೆ: ಸಿನಿಮಾ ಬಗ್ಗೆ ಹೆಚ್ಚಿದ ಎಕ್ಸ್ ಪೆಕ್ಟೇಷನ್!
ಕಪಟ ನಾಟಕ ಸೂತ್ರಧಾರಿ ಮತ್ತು ಹುಲಿರಾಯ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗ ಪ್ರವೇಶಿಸಿದ ಬಾಲು ನಾಗೇಂದ್ರ , ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ತಂಡ ಪ್ರವೇಶಿಸಿದ್ದಾರೆ. ಹೆಡ್ ಬುಷ್ ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.
ಬೆಂಗಳೂರಿನ ಮೊದಲ ಅಂಡರ್‌ವರ್ಲ್ಡ್ ಡಾನ್ ಆಗಿದ್ದ ಎಂ.ಪಿ. ಜಯರಾಜ್ ಬಯೋಪಿಕ್ ಆಗಿರುವ ಈ ಸಿನಿಮಾದ ಮೇಲೆ ಈಗಾಗಲೇ ದೊಡ್ಡಮಟ್ಟದ ನಿರೀಕ್ಷೆ ಹುಟ್ಟುಕೊಂಡಿದೆ. ಇದಕ್ಕೆ ಸ್ಕ್ರಿಪ್ಟ್ ಬರೆಯುತ್ತಿರುವುದು ಅಗ್ನಿ ಶ್ರೀಧರ್ ಅನ್ನೋದು ವಿಶೇಷ. ಹೊಸ ಪ್ರತಿಭೆ ಶೂನ್ಯ ಇದರ ನಿರ್ದೇಶನ ಮಾಡುತ್ತಿದ್ದಾರೆ. ಜಯರಾಜ್ ಪಾತ್ರ ಮಾಡುವುದರ ಜೊತೆಗೆ ನಿರ್ಮಾಣವನ್ನೂ ಮಾಡುತ್ತಿದ್ದಾರೆ ಡಾಲಿ ಧನಂಜಯ.
'ಹೆಡ್ ಬುಷ್' ಸಿನಿಮಾವು ಪಾತ್ರವರ್ಗದಿಂದಲೇ ಸಾಕಷ್ಟು ಗಮನಸೆಳೆಯುತ್ತಿರುವುದು ವಿಶೇಷ. ಈಚೆಗಷ್ಟೇ ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ ಅವರು ಈ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದರು. 100 ಖ್ಯಾತಿಯ ಪಾಯಲ್ ರಜಪೂತ್ ಈ ಸಿನಿಮಾದ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
ಕನ್ನಡ ಸಿನಿಮಾದದಲ್ಲಿ ಕೆಲಕಾಲ ಬ್ರೇಕ್ ತೆಗೆದುಕೊಂಡಿದ್ದ ನಟಿ ಶೃತಿ ಹರಿಹರನ್ ಹೆಡ್ ಬುಷ್ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಇಷ್ಟು ದಿನ ವಯಕ್ತಿಕ ಜೀವನದ ಕಡೆ ಗಮನ ಹರಿಸಿದ್ದ ಶೃತಿ ಮತ್ತೆ ನಟನೆಯತ್ತ ಮುಖ ಮಾಡಿದ್ದಾರೆ.
ಇದೀಗ ಶ್ರುತಿ ಹರಿಹರನ್ ಎಂಟ್ರಿ ಕೊಟ್ಟಿದ್ದಾರೆ. ಅವರು ಚಿತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ. ಶ್ರುತಿ ಹರಿಹರನ್ ಅವರ ಸೇರ್ಪಡೆ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ