ಚಿತ್ರತಂಡದೊಂದಿಗೆ ಖುಷಿ ರವಿ
ಸಿನಿಮಾ ಸುದ್ದಿ
ಟಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟ 'ದಿಯಾ' ಖ್ಯಾತಿಯ ಖುಷಿ ರವಿ
ದಿಯಾ ಸಿನಿಮಾ ಖ್ಯಾತಿಯ ಕನ್ನಡ ನಟಿ ಖುಷಿ ರವಿ ತೆಲುಗು ಸಿನಿಮಾ ರಂಗಕ್ಕೆ ಎಂಟ್ರಿಯಾಗಿದ್ದಾರೆ. ಸಂದೀಪ್ ಕಿಶನ್ ನಿರ್ದೇಶನದ ಮುಂಬರುವ ಸಿನಿಮಾದಲ್ಲಿ ವಿಐ ಆನಂದ್ ಗೆ ಖುಷಿ ನಾಯಕಿಯಾಗಿದ್ದಾರೆ.
ದಿಯಾ ಸಿನಿಮಾ ಖ್ಯಾತಿಯ ಕನ್ನಡ ನಟಿ ಖುಷಿ ರವಿ ತೆಲುಗು ಸಿನಿಮಾ ರಂಗಕ್ಕೆ ಎಂಟ್ರಿಯಾಗಿದ್ದಾರೆ. ಸಂದೀಪ್ ಕಿಶನ್ ನಿರ್ದೇಶನದ ಮುಂಬರುವ ಸಿನಿಮಾದಲ್ಲಿ ವಿಐ ಆನಂದ್ ಗೆ ಖುಷಿ ನಾಯಕಿಯಾಗಿದ್ದಾರೆ.
ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಖಚಿತ ಪಡಿಸಿರುವ ಖುಷಿ, ಉತ್ತಮ ಕಥೆಯೊಂದಿಗೆ ತೆಲುಗು ಸಿನಿಮಾಗೆ ಪಾದಾರ್ಪಣೆ ಮಾಡುತ್ತಿರುವುದು ಸಂತಸ ತಂದಿದೆ, ಪ್ರಸಿದ್ಧ ನಿರ್ದೇಶಕ ಮತ್ತು ನಟರನ್ನೊಳಗೊಂಡ ಚಿತ್ರ ತಂಡ ಸೇರುತ್ತಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ. "ನಾನು ಹೊಸ ಉದ್ಯಮದಲ್ಲಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಇದು ನನಗೆ ಸಂಪೂರ್ಣ ಹೊಸ ಅನುಭವವಾಗಿದೆ ಎಂದಿದ್ದಾರೆ.
ಸದ್ಯ ಹೈದರಾಬಾದ್ ನಲ್ಲಿರುವ ಖುಷಿ, ನಕ್ಷೆ ಮತ್ತು ಸ್ಪೂಕಿ ಕಾಲೇಜ್ ಚಿತ್ರೀಕರಣ ವಿವಿಧ ಹಂತಗಳಲ್ಲಿದೆ. ಇದರ ಜೊತೆಗೆ ಕನ್ನಡ ಸಿನಿಮಾ ಶೂಟಿಂಗ್ ಕೂಡ ಆರಂಭವಾಗಲಿದೆ, ದರ್ಶನ್ ಅಪೂರ್ವ ಸಿನಿಮಾ ನಿರ್ದೇಶಿಸುತ್ತಿದ್ದು ಪೃಥ್ವಿ ಅಂಬರ್ ನಾಯಕನಾಗಿ ನಟಿಸುತ್ತಿದ್ದಾರೆ,
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ