'ಲವ್ ಯೂ ರಚ್ಚು' ಶೂಟಿಂಗ್ ವೇಳೆ ಫೈಟರ್ ಸಾವು: ಗುರು ದೇಶಪಾಂಡೆ ಸೇರಿ ಐವರ ವಿರುದ್ಧ ಕೇಸು ದಾಖಲು

'ಲವ್ ಯೂ ರಚ್ಚು' ಸಿನೆಮಾ ಶೂಟಿಂಗ್ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ 28 ವರ್ಷದ ಯುವಕ ಫೈಟರ್ ವಿವೇಕ್ ಮೃತಪಟ್ಟಿರುವ ಘಟನೆ ಸಂಬಂಧ ಬೆಂಗಳೂರು ಹೊರವಲಯದ ಬಿಡದಿ ಪೊಲೀಸರು ಐವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ಲವ್ ಯೂ ರಚ್ಚು ಸಿನಿಮಾದ ನಾಯಕ ಅಜಯ್ ರಾವ್ ಮತ್ತು ನಾಯಕಿ ರಚಿತಾ ರಾಮ್(ಸಂಗ್ರಹ ಚಿತ್ರ)
ಲವ್ ಯೂ ರಚ್ಚು ಸಿನಿಮಾದ ನಾಯಕ ಅಜಯ್ ರಾವ್ ಮತ್ತು ನಾಯಕಿ ರಚಿತಾ ರಾಮ್(ಸಂಗ್ರಹ ಚಿತ್ರ)

ಬೆಂಗಳೂರು: 'ಲವ್ ಯೂ ರಚ್ಚು' ಸಿನೆಮಾ ಶೂಟಿಂಗ್ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ 28 ವರ್ಷದ ಯುವಕ ಫೈಟರ್ ವಿವೇಕ್ ಮೃತಪಟ್ಟಿರುವ ಘಟನೆ ಸಂಬಂಧ ಬೆಂಗಳೂರು ಹೊರವಲಯದ ಬಿಡದಿ ಪೊಲೀಸರು ಐವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

ನಿರ್ದೇಶಕ ಶಂಕರಯ್ಯ, ನಿರ್ಮಾಪಕ ಗುರುದೇಶಪಾಂಡೆ, ಸಾಹಸ ನಿರ್ದೇಶಕ ವಿನೋದ್ ಕುಮಾರ್, ಸಿನಿಮಾ ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡಿಸ್, ಕ್ರೇನ್ ಆಪರೇಟರ್ ಮಹದೇವ್ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ನಿರ್ದೇಶಕ ಶಂಕರಯ್ಯ ಎ1, ನಿರ್ಮಾಪಕ ಗುರು ದೇಶಪಾಂಡೆ ಎ2, ಚಿತ್ರದ ಸಾಹಸ ನಿರ್ದೇಶಕ ವಿನೋದ್ ಕುಮಾರ್ ಎ3, ಸಿನಿಮಾ ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡಿಸ್ ಎ4 ಮತ್ತು ಕ್ರೇನ್ ಆಪರೇಟರ್ ಮಹದೇವ್ ಎ5 ಆರೋಪಿಗಳೆಂದು ದಾಖಲಾಗಿದೆ. ನಿನ್ನೆ ಘಟನೆ ನಡೆದ ಬಳಿಕ ಬಿಡದಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಘಟನೆ ನಡೆದ ಬಳಿಕ ಚಿತ್ರದ ನಿರ್ಮಾಪಕ ಹಾಗೂ ಸ್ಯಾಂಡಲ್ ವುಡ್ ನಿರ್ದೇಶಕ ಗುರು ದೇಶಪಾಂಡೆ ಎಸ್ಕೇಪ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಧ್ಯಮಗಳಲ್ಲಿ ವರದಿ ಬರುತ್ತಿದ್ದಂತೆ ನಾನು ನನ್ನ ಕೆಲಸ ನಿಮಿತ್ತ ಬೇರೆ ಊರಿಗೆ ಹೋಗಿದ್ದೆ, ಇಂದು ಮಧ್ಯಾಹ್ನ ಹೋಗುತ್ತೇನೆ, ಬಿಡದಿ ಪೊಲೀಸರು ಕರೆದರೆ ವಿಚಾರಣೆಗೆ ಹೋಗುತ್ತೇನೆ ಎಂದು ನಿನ್ನೆ ಹೇಳಿದ್ದ ಗುರು ದೇಶಪಾಂಡೆ ಇಂದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. 

ಘಟನೆಯಲ್ಲಿ ಗಾಯಾಳುವಾಗಿರುವ ರಂಜಿತ್ ಎನ್ನುವವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಗ್ಗೆ 10 ಗಂಟೆಯ ನಂತರ ಫೈಟರ್ ವಿವೇಕ್ ಮರಣೋತ್ತರ ಪರೀಕ್ಷೆಯಾಗಿ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com