ಕಡ್ಡಿಪುಡಿ ಚಂದ್ರು ಲವ್ ಮಾಕ್ ಟೇಲ್ ಕೃಷ್ಣ ಮತ್ತು ಪಿಸಿ ಶೇಖರ್
ಸಿನಿಮಾ ಸುದ್ದಿ
'ಲವ್ ಮಾಕ್ ಟೇಲ್' ಕೃಷ್ಣ, ಪಿಸಿ ಶೇಖರ್, ಕಡ್ಡಿಪುಡಿ ಚಂದ್ರು ತಂಡದಿಂದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ!
ಪಿ.ಸಿ ಶೇಖರ್ ನಿರ್ದೇಶಿಸುತ್ತಿರುವ ಹೊಸ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಈ ಸಿನಿಮಾವನ್ನು ಕಡ್ಡಿಪುಡಿ ಸಿನಿಮಾ ಖ್ಯಾತಿನ ನಟ ಚಂದ್ರು ನಿರ್ಮಿಸುತ್ತಿದ್ದಾರೆ.
ಬೆಂಗಳೂರು: ಲವ್ ಮಾಕ್ ಟೇಲ್ ಸಿನಿಮಾದ ನಾಯಕ ಡಾರ್ಲಿಂಗ್ ಕೃಷ್ಣ ಒಂದರ ಹಿಂದೊಂದರಂತೆ ಸಿನಿಮಾ ಅವಕಾಶಗಳನ್ನು ತಮ್ಮ ಬುಟ್ಟಿಗೆ ಬೀಳಿಸಿಕೊಳ್ಳುತ್ತಿದ್ದಾರೆ.
ಇದೀಗ ಅವರ ಪಾಲಿಗೆ ಬಂದಿರುವ ಹೊಸ ಅವಕಾಶ ನಿರ್ದೇಶಕ ಪಿ.ಸಿ ಶೇಖರ್ ನಿರ್ದೇಶಿಸುತ್ತಿರುವ ಹೊಸ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಈ ಸಿನಿಮಾವನ್ನು ಕಡ್ಡಿಪುಡಿ ಸಿನಿಮಾ ಖ್ಯಾತಿನ ನಟ ಚಂದ್ರು ನಿರ್ಮಿಸುತ್ತಿದ್ದಾರೆ ಎನ್ನುವುದು ವಿಶೇಷ.
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ರೋಮಿಯೋ ಸಿನಿಮಾದ ನಂತರ ನಿರ್ದೇಶಕ ಪಿ.ಸಿ.ಶೇಖರ್ ಅವರು ವಿಭಿನ್ನ ಬಗೆಯ ಸಿನಿಮಾಗಳತ್ತ ಹೊರಳಿದ್ದರು. ಇದೀಗ ಮತ್ತೆ ರೊಮ್ಯಾಂಟಿಕ್ ಕಾಮಿಡಿಗೆ ಈ ಸಿನಿಮಾದ ಮೂಲಕ ಮರಳಿದ್ದಾರೆ.
ಡಾರ್ಲಿಂಗ್ ಕೃಷ್ಣ ಸದ್ಯ ಮಿ. ಬ್ಯಾಚುಲರ್ ಶುಗರ್ ಫ್ಯಾಕ್ಟರಿ, ಲವ್ ಮಿ ಆರ್ ಹೇಟ್ ಮಿ ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಪಿ.ಸಿ ಶೇಖರ್ ಅವರ ಜೊತೆಗಿನ ಸಿನಿಮಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭಗೊಳ್ಳಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ