ಕೊನೆಗೂ ಹೇರ್ ಕಟ್ ಮಾಡಿಸಿದ ಪ್ರಜ್ವಲ್ ದೇವರಾಜ್: ಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ ಮಾಡಿದ 'ಡೈನಾಮಿಕ್ ಪ್ರಿನ್ಸ್'
ಕಳೆದ ಎರಡು ವರ್ಷಗಳಿಂದ ಹೇರ್ ಕಟ್ ಮಾಡಿಸಿರದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕೊನೆಗೂ ಹೇರ್ ಕಟ್ ಮಾಡಿಸಿದ್ದಾರೆ.
Published: 01st December 2021 09:07 AM | Last Updated: 01st December 2021 01:16 PM | A+A A-

ಪ್ರಜ್ವಲ್ ದೇವರಾಜ್
ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಹೇರ್ ಕಟ್ ಮಾಡಿಸಿರದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕೊನೆಗೂ ಹೇರ್ ಕಟ್ ಮಾಡಿಸಿದ್ದಾರೆ.
ನಾಯಕನಾಗಿ ನಟಿಸುತ್ತಿರುವ 35 ನೇ ಚಿತ್ರ "ಮಾಫಿಯಾ" ಚಿತ್ರಕ್ಕಾಗಿ ಎರಡು ವರ್ಷಗಳಿಂದ ಪ್ರಜ್ವಲ್ ದೇವರಾಜ್ ದಟ್ಟವಾಗಿ ತಲೆಗೂದಲು ಬೆಳೆಸಿದ್ದರು. ಆದರೆ ಈಗ ‘ಮಾಫಿಯಾ’ ಚಿತ್ರಕ್ಕಾಗಿ ಅವರು ಗೆಟಪ್ ಚೇಂಜ್ ಆಗುತ್ತಿದೆ. ಹಾಗಾಗಿ ಹೇರ್ ಕಟ್ ಮಾಡಿಸಿದ್ದಾರೆ. ವಿಶೇಷ ಎಂದರೆ, ತಮ್ಮ ಕೂದಲನ್ನು ಅವರು ಕ್ಯಾನ್ಸರ್ ರೋಗಿಗಳಿಗಾಗಿ ದಾನ ಮಾಡಿದ್ದಾರೆ. ಆ ಮೂಲಕ ಇತರರಿಗೂ ಮಾದರಿ ಆಗಿದ್ದಾರೆ.
ಇದನ್ನೂ ಓದಿ: 'ಮಾಫಿಯಾ' ದಿಂದ ಗುರುದತ್ತ ಗಾಣಿಗ ಔಟ್: ಪ್ರಜ್ವಲ್ ಗೆ 'ದೇವಕಿ' ನಿರ್ದೇಶಕ ಲೋಹಿತ್ ಆ್ಯಕ್ಷನ್ ಕಟ್!
ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುವವರಿಗೆ ಕೂದಲು ಉದುರುತ್ತದೆ. ಅಂತವರಿಗೆ ಸಹಾಯ ಆಗಲಿ ಎಂದು ಅನೇಕರು ಕೂದಲು ದಾನ ಮಾಡುತ್ತಾರೆ. ‘ಪೊಗರು’ ಶೂಟಿಂಗ್ ಮುಗಿದ ಬಳಿಕ ನಟ ಧ್ರುವ ಸರ್ಜಾ ಕೂಡ ಕೂದಲು ದಾನ ಮಾಡಿದ್ದರು.
ಪ್ರಜ್ವಲ್ ದೇವರಾಜ್ ನಟಿಸುತ್ತಿರುವ 35ನೇ ಚಿತ್ರವಾಗಿ ‘ಮಾಫಿಯಾ’ ಮೂಡಿಬರಲಿದೆ. ಡಿ.2ರಂದು ಈ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಶೂಟಿಂಗ್ ಆರಂಭಿಸಲು ನಿರ್ದೇಶಕ ಲೋಹಿತ್ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಡಿ.6ರಿಂದ ಚಿತ್ರೀಕರಣ ಶುರು ಆಗಲಿದೆ. ಪ್ರಜ್ವಲ್ ದೇವರಾಜ್ ಅವರಿಗೆ ಜೋಡಿಯಾಗಿ ಕನ್ನಡದ ಬಹುಬೇಡಿಕೆಯ ನಟಿ ಅದಿತಿ ಪ್ರಭುದೇವ ಅವರು ನಟಿಸಲಿದ್ದಾರೆ.