ಕ್ರಿಸ್ಮಸ್ ಗೆ ರೈಡರ್ ಸಿನಿಮಾ ರಿಲೀಸ್: ಮಂಡ್ಯದಲ್ಲಿ ಡಿಸೆಂಬರ್ 19 ರಂದು ಪ್ರೀ ರಿಲೀಸ್ ಇವೆಂಟ್
ಚಿತ್ರರಂಗ ಮತ್ತು ರಾಜಕೀಯ ಎರಡೂ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ನಿಖಿಲ್ ಕುಮಾರಸ್ವಾಮಿ ಅವರು ನಟಿಸಿರುವ ‘ರೈಡರ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
Published: 08th December 2021 11:19 AM | Last Updated: 08th December 2021 04:59 PM | A+A A-

ರೈಡರ್ ಸಿನಿಮಾ ಪೋಸ್ಟರ್
ಚಿತ್ರರಂಗ ಮತ್ತು ರಾಜಕೀಯ ಎರಡೂ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ನಿಖಿಲ್ ಕುಮಾರಸ್ವಾಮಿ ಅವರು ನಟಿಸಿರುವ ‘ರೈಡರ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ಡಿ.24ರಂದು ಈ ಚಿತ್ರ ರಿಲೀಸ್ ಆಗಲಿದೆ. ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಚಂದ್ರು ಮನೋಹರನ್, ಸುನಿಲ್ ಗೌಡ ನಿರ್ಮಾಣ ಮಾಡಿದ್ದಾರೆ.
ವಿಜಯ್ಕುಮಾರ್ ಕೊಂಡ ನಿರ್ದೇಶನ ಮಾಡಿದ್ದು, ಲಹರಿ ಸಂಸ್ಥೆ ಮೂಲಕ ಹಾಡುಗಳು ಹೊರಬಂದಿವೆ. ಸಿನಿಮಾದಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಜೋಡಿಯಾಗಿ ಕಾಶ್ಮೀರಾ ಪರದೇಸಿ ನಟಿಸಿದ್ದಾರೆ. ‘ರೈಡರ್’ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು.
ಇದನ್ನೂ ಓದಿ: ನಿಖಿಲ್ ನಟನೆಯ 'ರೈಡರ್' ಡಿಸೆಂಬರ್ 24ಕ್ಕೆ ಬಿಡುಗಡೆ
ಡಿಸೆಂಬರ್ 19 ರಂದು ಮಂಡ್ಯದಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮವನ್ನುಆಯೋಜಿಸಲಾಗಿದೆ. ಮಂಡ್ಯದ ಜನರ ಜೊತೆ ನಟ ನಿಖಿಲ್ ಕುಮಾರ್ ಅವರ ಜತೆಗೆ ಅವಿನಾಭಾವ ಸಂಬಂಧವಿದ್ದು, ಸಕ್ಕರೆ ನಾಡಿನಲ್ಲಿ ಕಾರ್ಯಕ್ರಮ ಯೋಜಿಸಲಾಗಿದೆ.
ಈಗಾಗಲೇ ಚಿತ್ರದ ಟೀಸರ್ ಮತ್ತು ಹಾಡುಗಳು ಧೂಳೆಬ್ಬಿಸಿವೆ. ಭರ್ಜರಿ ಆ್ಯಕ್ಷನ್ ದೃಶ್ಯಗಳಲ್ಲಿ ನಿಖಿಲ್ ನಟಿಸಿದ್ದಾರೆ. ಈ ಚಿತ್ರದ ಮೇಲೆ ಅವರ ಅಭಿಮಾನಿಗಳು ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ.