ಮಾರ್ಟಿನ್ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿಲ್ಲ: ಧ್ರುವ ಸರ್ಜಾ
ಎಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಸಿನಿಮಾ ಶೂಟಿಂಗ್ ಕಡೆ ನಟ ಧ್ರುವ ಸರ್ಜಾ ಗಮನ ಹರಿಸುತ್ತಿದ್ದಾರೆ. ಉದಯ್ ಕೆ ಮೆಹ್ತಾ ನಿರ್ಮಾಣದ ಸಿನಿಮಾ ಆಗಸ್ಟ್ ನಲ್ಲಿ ಸೆಟ್ಟೇರಿತ್ತು.
Published: 15th December 2021 01:57 PM | Last Updated: 15th December 2021 02:08 PM | A+A A-

ಧ್ರುವ ಸರ್ಜಾ
ಎಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಸಿನಿಮಾ ಶೂಟಿಂಗ್ ಕಡೆ ನಟ ಧ್ರುವ ಸರ್ಜಾ ಗಮನ ಹರಿಸುತ್ತಿದ್ದಾರೆ. ಉದಯ್ ಕೆ ಮೆಹ್ತಾ ನಿರ್ಮಾಣದ ಸಿನಿಮಾ ಆಗಸ್ಟ್ ನಲ್ಲಿ ಸೆಟ್ಟೇರಿತ್ತು.
ಎಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಸಿನಿಮಾಗೆ ಸತ್ಯ ಹೆಗಡೆ ಛಾಯಾಗ್ರಹಣವಿದೆ, ಈಗಾಗಲೇ ಹಲವು ಭಾಗದ ಶೂಟಿಂಗ್ ಮುಗಿದಿದ್ದು ಇನ್ನು 55 ದಿನಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ.
ಮಾರ್ಟಿನ್ ಸಿನಿಮಾಗಾಗಿ ಧ್ರುವ ಸರ್ಜಾ ಮಾಡುತ್ತಿದ್ದ ದೈಹಿಕ ಕಸರತ್ತಿನ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಮಾರ್ಟಿನ್ ನಲ್ಲಿ ಧ್ರುವ ಸರ್ಜಾ ದ್ವಿಪಾತ್ರದಲ್ಲಿ ನಟಿಸಿದ್ದಾರೆ ಎಂದು ಹಲವರು ಊಹಿಸಿದ್ದರು. ಆದರೆ ತಾವು ಈ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ನಿರ್ದೇಶಕರ ಸೂಚನೆ ಮೇರೆಗೆ ನನ್ನ ದೇಹವನ್ನು ಬದಲಿಸಿಕೊಂಡಿದ್ದೇನೆ, ಮುಂದಿನ ವಾರದಲ್ಲಿ ಕೆಲವು ಭಾಗದ ಶೂಟಿಂಗ್ ನಡೆಯಲಿದೆ, ನಿರ್ದಿಷ್ಟ ಶೇಪ್ ಗೆ ಬರುವಂತೆ ಡೈರೆಕ್ಟರ್ ತಿಳಿಸಿದ್ದಾರೆಅದಕ್ಕಾಗಿ ನಾನು ರೆಡಿಯಾಗುತ್ತಿದ್ದೇನೆ ಎಂದು ಧ್ರುವ ಹೇಳಿದ್ದಾರೆ.
ಇದನ್ನೂ ಓದಿ: ಧ್ರುವ ಸರ್ಜಾ- ಎ.ಪಿ ಅರ್ಜುನ್ ಕಾಂಬಿನೇಷನ್ ಸಿನಿಮಾ 'ಮಾರ್ಟಿನ್'ಗೆ ವೈಭವಿ ಶಾಂಡಿಲ್ಯ ನಾಯಕಿ
ಫೆಬ್ರವರಿ ಅಂತ್ಯದವೇಳೆಗೆ ಮಾರ್ಟಿನ್ ಸಿನಿಮಾ ಶೂಟಿಂಗ್ ಪೂರ್ಣಗೊಳ್ಳಲಿದೆ, ಕೆಲವು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿಯಲಿದೆ, ಅದಾದ ನಂತರ ಪ್ರೇಮ್ ನಿರ್ದೇಶನದ ಮುಂದಿನ ಸಿನಿಮಾ ಶೂಟಿಂಗ್ ಫೆಬ್ರವರಿಯಲ್ಲಿ ಆರಂಭಗೊಳ್ಳಲಿದ್ದು, ಮಾರ್ಚ್ 1 ರಿಂದ ಶೂಟಿಂಗ್ ನಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.
ನಿರ್ದೇಶಕ ಎಪಿ ಅರ್ಜುನ್ ಸದ್ಯ ಹೈದರಾಬಾದ್‌ನಲ್ಲಿದ್ದು, ಚಿತ್ರದ ಸಂಗೀತ ಸಂಯೋಜಕ ಮಣಿ ಶರ್ಮಾ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಎರಡು ಹಾಡುಗಳ ಚಿತ್ರೀಕರಣ ಮುಗಿದಿದೆ.
ಎಪಿ ಅರ್ಜುನ್ 10 ವರ್ಷಗಳ ಹಿಂದೆ ಅದ್ದೂರಿ ಸಿನಿಮಾ ನಿರ್ದೇಶಿಸಿದ್ದರು, ಆದಾದ ನಂತರ ಮತ್ತೆ ಮಾರ್ಟಿನ್ ಸಿನಿಮಾ ಮೂಲಕ ಅರ್ಜುನ್ ಮತ್ತು ಧ್ರುವ ಸರ್ಜಾ ಒಂದಾಗಿ ಕೆಲಸ ಮಾಡುತ್ತಿದ್ದಾರೆ, ಮಾರ್ಟಿನ್ ಆ್ಯಕ್ಷನ್ ಕಮರ್ಷಿಯಲ್ ಸಿನಿಮಾವಾಗಿದ್ದು, ಧ್ರುವ ಸರ್ಜಾ ಪಾತ್ರ ವಿಭಿನ್ನವಾಗಿದೆ.