ನಾನೂ ಒಬ್ಬ ಬಿಜಿಸೆನ್ ಮ್ಯಾನ್: ರೇಡಿಯೋ ಸಿಟಿ 'ಬಿಜಿನೆಸ್ ಐಕಾನ್' ಅವಾರ್ಡ್ಸ್ ಶೋನಲ್ಲಿ ಬಡವ ರಾಸ್ಕಲ್ ನಿರ್ಮಾಪಕ, ನಟ ಧನಂಜಯ

ನಗರದ ಜನಪ್ರಿಯ ಬಾನುಲಿ ಕೇಂದ್ರ ರೇಡಿಯೋ ಸಿಟಿ 91. ಬಿಸಿನೆಸ್ ಐಕಾನ್ ಅವಾರ್ಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಡಾಲಿ ಧನಂಜಯ ಅವರು ತಮ್ಮ ಸಂಸ್ಥೆಯ ನಿರ್ಮಾಣದ 'ಬಡವ ರಾಸ್ಕಲ್' ಚಿತ್ರದ ಬಗ್ಗೆ ಮಾತಾಡಿದರು.
ಬಿಸಿನೆಸ್ ಐಕಾನ್ ಅವಾರ್ಡ್ ಕಾರ್ಯಕ್ರಮ
ಬಿಸಿನೆಸ್ ಐಕಾನ್ ಅವಾರ್ಡ್ ಕಾರ್ಯಕ್ರಮ

ಬೆಂಗಳೂರು: ಕಷ್ಟದ ಸಂದರ್ಭಗಳನ್ನು ಎದುರಿಸಿ ತಾವು ಮಾಡುತ್ತಿರುವ ವ್ಯವಹಾರದಲ್ಲಿ ನಾವೀನ್ಯತೆಯನ್ನು ತೋರಿಸಿದ ಉದ್ಯಮ ಕ್ಷೇತ್ರದ ಹಲವರಿಗೆ ನಗರದ ಜನಪ್ರಿಯ ಬಾನುಲಿ ಕೇಂದ್ರ ರೇಡಿಯೋ ಸಿಟಿ 91. ಬಿಸಿನೆಸ್ ಐಕಾನ್ ಅವಾರ್ಡ್ ಅನ್ನು ನೀಡಿ ಗೌರವಿಸಿದೆ. ಅತಿಥಿಗಳಾಗಿ ಡಾಲಿ ಧನಂಜಯ, ಅಮೃತ ಐಯಂಗಾರ್, ಸುಧಾರಾಣಿ, ರಘು ದೀಕ್ಷಿತ್ , ಕೂ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಪ್ರಮೇಯ ರಾಧಕೃಷ್ಣ ರವರು ಆಗಮಿಸಿ ಪ್ರಶಸ್ತಿ ನೀಡಿದರು.

ಉದ್ಯಮ ಕ್ಷೇತ್ರದ ಹಲವರಿಗೆ ಅವಾರ್ಡ್ ನೀಡಿದ ಡಾಲಿ ತಮ್ಮ ನಿರ್ಮಾಣದ 'ಬಡವ ರಾಸ್ಕಲ್' ಚಿತ್ರದ ಬಗ್ಗೆ ಮಾತಾಡಿದರು. ನಟನಾಗಿದ್ದ ನಾನು ಈಗ ನಿರ್ಮಾಪಕನಾಗಿ ಡಾಲಿ  ಪಿಕ್ಚರ್ಸ್  ಮೂಲಕ ಈ ಚಿತ್ರ ನಿರ್ಮಾಣಕ್ಕೆ ಇಳಿದಿದ್ದೇನೆ. ಚಿತ್ರರಂಗದಲ್ಲಿ ನಿರ್ಮಾಪಕನಾಗಿರುವುದರಿಂದ ನಾನೂ ಒಬ್ಬ ಬಿಸಿನೆಸ್ ಮ್ಯಾನ್ ಎಂದು ಹೇಳಿ, ಕಾಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ರೇಡಿಯೋ ಸಿಟಿ, ಈ ತರಹದ ಅನೇಕ ಕಾರ್ಯಕ್ರಮಗಳನ್ನ ಮಾಡುತ್ತಾ ಬಂದಿದೆ. ಕೊರೊನ ಸಂದರ್ಭದಲ್ಲಿ ವ್ಯಾಪಾರ ಮಳಿಗೆಗಳು, ಉದ್ಯಮಿಗಳು ಕಷ್ಟ ಪಟ್ಟಿದ್ದಾರೆ. ಎಲ್ಲ ಕಷ್ಟಗಳನ್ನು ಎದುರಿಸಿ ಇಂದಿಗೂ ತಮ್ಮ ಉದ್ಯಮವನ್ನು ಮುನ್ನಡೆಸುತ್ತಿರುವ ಉದ್ಯಮಿಗಳಿಗೆ ಪ್ರಶಸ್ತಿ ನೀಡುವುದು ಹೆಮ್ಮೆಯ ವಿಷಯ ಎಂದು ರೇಡಿಯೋ ಸಿಟಿ ಸಂಸ್ಥೆಯ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಅವಿನಾಶ್ ನಾಯರ್ ತಿಳಿಸಿದರು. 20 ಕ್ಕೂ ಹೆಚ್ಚು ಉದ್ಯಮಿಗಳಿಗೆ ಬಿಸಿನೆಸ್ ಅವಾರ್ಡ್ ಗಳನ್ನು ನೀಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com