ಕಾವ್ಯಾ ಶೆಟ್ಟಿ
ಸಿನಿಮಾ ಸುದ್ದಿ
'ಲಂಕೆ': ರಾಮನ ಪಾತ್ರದಲ್ಲಿ ಯೋಗಿ, ರಾವಣನ ಪಾತ್ರದಲ್ಲಿ ಕಾವ್ಯಾ ಶೆಟ್ಟಿ!
ನವ ನಿರ್ದೇಶಕ ರಾಮ್ ಪ್ರಸಾದ್ ಅವರ ರಾಮಾಯಣ ಆಧಾರಿತ 'ಲಂಕೆ' ಚಿತ್ರದಲ್ಲಿ ಲೂಸ್ ಮಾದ ಯೋಗಿ ಅಭಿನಯಿಸುತ್ತಿದ್ದಾರೆ.
ನವ ನಿರ್ದೇಶಕ ರಾಮ್ ಪ್ರಸಾದ್ ಅವರ ರಾಮಾಯಣ ಆಧಾರಿತ 'ಲಂಕೆ' ಚಿತ್ರದಲ್ಲಿ ಲೂಸ್ ಮಾದ ಯೋಗಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಯೋಗಿ, ಸಂಚಾರಿ ವಿಜಯ್, ಕಾವ್ಯಾ ಶೆಟ್ಟಿ ಮತ್ತು ಕ್ರಿಷಿ ತಾಪಂಡಾ ನಟಿಸುತ್ತಿದ್ದಾರೆ.
ಈ ಮೊದಲು ಬಣ್ಣ ಬಣ್ಣದ ಲೋಕ ಸಿನಿಮಾ ನಿರ್ದೇಶಿಸಿದ್ದ ರಾಮ್ ಪ್ರಸಾದ್ 'ಇದೊಂದು ಮಾಡರ್ನ್ ರಾಮಾಯಣ. ಈ ಸಿನಿಮಾದ ಮೂಲಕ ಹೊಸ ವಿಚಾರಗಳನ್ನು ಹೇಳಲು ಹೊರಟಿದ್ದಾರೆ.
ಯೋಗಿ ರಾಮನ ಪಾತ್ರದಲ್ಲಿ ನಟಿಸಿಗದ್ದು, ಕಾವ್ಯಾ ಶೆಟ್ಟಿ ರಾವಣನ ಗಮ ಳಕ್ಷಣಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನೂ ಸಿನಿಮಾದಲ್ಲಿ ಕೃಷಿ ತಾಪಂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಂಚಾರಿ ವಿಜಯ್, ಫ್ಲ್ಯಾಷ್‌ಬ್ಯಾಕ್ ಎಪಿಸೋಡ್‌ನಲ್ಲಿ ಬರುತ್ತಿದ್ದಾರೆ. ಈಸ್ಟರ್ ನೊರೊನ್ಹಾ ಕೂಡ ಪಾತ್ರವರ್ಗದ ಪ್ರಮುಖ ಭಾಗವಾಗಿದೆ.
ಪಟೇಲ್ ಶ್ರೀನಿವಾಸ್ ನಿರ್ಮಾಣದ ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸುತ್ತಿದ್ದು, ರಮೇಶ್ ಬಾಬು ಛಾಯಾಗ್ರಹಣ ಮಾಡಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ